Advertisement

MSP ; ಗೋಧಿಗೆ ದಾಖಲೆಯ ಕ್ವಿಂಟಲ್‌ಗೆ 150 ರೂ.ಹೆಚ್ಚಿಸಿದ ಕೇಂದ್ರ ಸರಕಾರ

05:37 PM Oct 18, 2023 | Team Udayavani |

ಹೊಸದಿಲ್ಲಿ: ಪ್ರಮುಖ  ರಾಜ್ಯಗಳ ವಿಧಾನಸಭೆ ಚುನಾವಣೆಗೆ ಮುನ್ನ, 2024-25 ಮಾರುಕಟ್ಟೆ ಋತುವಿಗೆ ಅನ್ವಯವಾಗುವಂತೆ ಗೋಧಿಯ ಕನಿಷ್ಠ ಬೆಂಬಲ ಬೆಲೆಯನ್ನು (MSP) ಕ್ವಿಂಟಲ್‌ಗೆ 150 ರೂ. ಹೆಚ್ಚಿಸುವುದಾಗಿ ಕೇಂದ್ರ ಸರಕಾರ ಬುಧವಾರ ಪ್ರಕಟಿಸಿದೆ.

Advertisement

ನರೇಂದ್ರ ಮೋದಿ ನೇತೃತ್ವದ ಸರಕಾರ 2014 ರಲ್ಲಿ ಅಧಿಕಾರಕ್ಕೆ ಬಂದ ನಂತರ ಇದು ಗರಿಷ್ಠ ಹೆಚ್ಚಳವಾಗಿದೆ. ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಪ್ರಸ್ತುತ, 2023-24 ಮಾರುಕಟ್ಟೆ ಋತುವಿನಲ್ಲಿ (ಏಪ್ರಿಲ್-ಮಾರ್ಚ್) ಗೋಧಿಯ ಮೇಲಿನ MSP ಪ್ರತಿ ಕ್ವಿಂಟಲ್‌ಗೆ 2,125 ರೂ.ಇದೆ.

2024-25ರ ಮಾರುಕಟ್ಟೆ ಋತುವಿನಲ್ಲಿ ಎಲ್ಲಾ ಕಡ್ಡಾಯ ರಾಬಿ ಬೆಳೆಗಳಿಗೆ ಎಂಎಸ್‌ಪಿ ಹೆಚ್ಚಳವನ್ನು ಸಿಸಿಇಎ ಅನುಮೋದಿಸಿದೆ. CACP ಶಿಫಾರಸಿನ ಆಧಾರದ ಮೇಲೆ, ನಾವು ಆರು ಬೆಳೆಗಳ MSP ಅನ್ನು ಹೆಚ್ಚಿಸಿದ್ದೇವೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದರು.

ಗೋಧಿ ಮುಖ್ಯ ಚಳಿಗಾಲದ ಬೆಳೆ, ಇದರ ಬಿತ್ತನೆ ಅಕ್ಟೋಬರ್‌ನಲ್ಲಿ ಪ್ರಾರಂಭವಾಗುತ್ತದೆ ಮತ್ತು ಎಪ್ರಿಲ್‌ನಲ್ಲಿ ಕೊಯ್ಲು ಮಾಡಲಾಗುತ್ತದೆ.
MSP ಎನ್ನುವುದು ರೈತರ ಹಿತಾಸಕ್ತಿ ಕಾಪಾಡಲು ಖಾತರಿಪಡಿಸಿದ ಕನಿಷ್ಠ ದರವಾಗಿದೆ ಮತ್ತು ಈ ದರಕ್ಕಿಂತ ಕಡಿಮೆ ಧಾನ್ಯವನ್ನು ಸರಕಾರಿ ಖರೀದಿ ಏಜೆನ್ಸಿಗಳು ಖರೀದಿಸುವುದಿಲ್ಲ.

ಅಕ್ಕಿ ರಫ್ತು ಮಾಡಲು ಅನುಮತಿ

Advertisement

ನೇಪಾಳ, ಕ್ಯಾಮರೂನ್ ಮತ್ತು ಮಲೇಷ್ಯಾ ಸೇರಿದಂತೆ ಏಳು ದೇಶಗಳಿಗೆ 10,34,800 ಟನ್ ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯನ್ನು ರಫ್ತು ಮಾಡಲು ಕೇಂದ್ರ ಸರ್ಕಾರ ಬುಧವಾರ ಅನುಮತಿ ನೀಡಿದೆ

ರಾಷ್ಟ್ರೀಯ ಸಹಕಾರಿ ರಫ್ತು ಲಿಮಿಟೆಡ್ (NCEL) ಮೂಲಕ ರಫ್ತಿಗೆ ಅನುಮತಿ ನೀಡಲಾಗಿದೆ ಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ (DGFT) ಅಧಿಸೂಚನೆಯಲ್ಲಿ ತಿಳಿಸಿದೆ.

ದೇಶೀಯ ಪೂರೈಕೆಯನ್ನು ಹೆಚ್ಚಿಸಲು ಜುಲೈ 20 ರಂದು ಬಾಸ್ಮತಿಯೇತರ ಬಿಳಿ ಅಕ್ಕಿಯ ರಫ್ತುನ್ನು ನಿಷೇಧಿಸಲಾಗಿದೆಯಾದರೂ, ಕೆಲವು ದೇಶಗಳಿಗೆ ತಮ್ಮ ಆಹಾರ ಭದ್ರತೆ ಅಗತ್ಯಗಳನ್ನು ಪೂರೈಸಲು ಮತ್ತು ವಿನಂತಿಯ ಮೇರೆಗೆ ಸರ್ಕಾರವು ನೀಡಿದ ಅನುಮತಿಯ ಆಧಾರದ ಮೇಲೆ ರಫ್ತು ಮಾಡಲು ಅನುಮತಿಸಲಾಗಿದೆ.

“ನೇಪಾಳ, ಕ್ಯಾಮರೂನ್, ಕೋಟ್ ಡಿ’ ಐವೋರ್, ಗಿನಿಯಾ, ಮಲೇಷ್ಯಾ, ಫಿಲಿಪೈನ್ಸ್ ಮತ್ತು ಸೀಶೆಲ್ಸ್‌ಗೆ ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯನ್ನು ರಫ್ತು ಮಾಡಲು ಸೂಚಿಸಲಾಗಿದೆ” ಎಂದು ಸರಕಾರ ಹೇಳಿದೆ.

ಸೂಚಿಸಲಾದ ಪ್ರಮಾಣ ನೇಪಾಳ( 95,000 ಟನ್‌ಗಳು), ಕ್ಯಾಮರೂನ್ (1,90,000 ಟನ್‌ಗಳು), ಕೋಟ್ ಡಿ ಐವೊರ್ (1,42,000 ಟನ್‌ಗಳು), ಗಿನಿಯಾ (1,42,000 ಟನ್‌ಗಳು), ಮಲೇಷ್ಯಾ (1,70,000 ಟನ್‌ಗಳು), ಫಿಲಿಪೈನ್ಸ್ (002,95 ಟನ್‌ಗಳು ), ಮತ್ತು ಸೀಶೆಲ್ಸ್ (800 ಟನ್).

Advertisement

Udayavani is now on Telegram. Click here to join our channel and stay updated with the latest news.

Next