Advertisement

ಔಷಧ ಅಭದ್ರತೆ ಸಮಸ್ಯೆಯನ್ನು ಬಗೆಹರಿಸಲು ಎನ್‌ಪಿಪಿಎ ಸ್ಥಾಪನೆ

05:37 PM Sep 16, 2020 | Karthik A |

ಮಣಿಪಾಲ: ಕೋವಿಡ್‌ 19 ಹಾವಳಿಯಿಂದ ಭಾರತದ ಔಷಧ ಉತ್ಪಾದನೆ ಕ್ಷೇತ್ರಕ್ಕೂ ಕೆಲವು ಅಡಚಣೆ ಎದುರಾಗಿದೆ. ಭಾರತ ಔಷಧ ತಯಾರಿಕೆಗೆ ಬೇಕಾಗುವ ಪದಾರ್ಥಗಳನ್ನು ಚೀನದಿಂದ ದೊಡ್ಡ ಪ್ರಮಾಣದಲ್ಲಿ ಆಮದು ಮಾಡುತ್ತಿದೆ. ಚೀನ ಕೂಡ ಭಾರತದ ಔಷಧಿಗಳನ್ನು ಆಮದು ಮಾಡುತ್ತಿದೆ. ಈ ಕೊಡುಕೊಳ್ಳುವಿಕೆಗೆ ಕೋವಿಡ್‌ 19 ಭೀತಿ ಆತಂಕ ಸೃಷ್ಟಿಸಿದೆ. ಕೋವಿಡ್‌ 19 ವೈರಾಣುವಿನಿಂದ ಚೀನದಲ್ಲಿ ಉತ್ಪಾದನೆ, ರಫ್ತು ಮಂದಗತಿಯಲ್ಲಿದೆ.

Advertisement

ಹೀಗಾಗಿ ಭಾರತ ಇದರ ಪ್ರಯೋಜನವನ್ನು ಪಡೆಯಬಹುದು ಎಂದು ಕೆಲವು ತಿಂಗಳುಗಳ ಹಿಂದೆ ಭಾವಿಸಲಾಗಿತ್ತು. ಆದರೆ ಇದೀಗ ಭಾರತದ ರಫ್ತು ಕುಸಿದಿರುವುದು ವಿಭಿನ್ನ ಚಿತ್ರಣವನ್ನು ನೀಡಿದೆ. ಚೀನದ ಬಿಕ್ಕಟ್ಟಿನ ಪರಿಣಾಮ ತೊಂದರೆಗೀಡಾಗಿರುವ 10 ಆರ್ಥಿಕತೆಗಳಲ್ಲಿ ಭಾರತವೂ ಒಂದಾಗಿದೆ.

ಈ ಹಿನ್ನೆಲೆಯಲ್ಲಿಯೇ ದೇಶದಲ್ಲಿ ಔಷಧ ಅಭದ್ರತೆಯ ಸಮಸ್ಯೆಯನ್ನು ಬಗೆಹರಿಸಲು ಸಚಿವಾಲಯವು ಕಳೆದ ಫೆಬ್ರವರಿಯಲ್ಲಿ ಸಮಿತಿಯೊಂದನ್ನು ರಚಿಸಿದ್ದು, ಆ ಸಮಿತಿಯು ಫೆ. 27ರಂದು ತನ್ನ ಅಧ್ಯಯನ ನಡೆಸಿ ವರದಿ ಸಲ್ಲಿಸಿದೆ. ಆ ವರದಿಯ ಪ್ರಮುಖಾಂಶಗಳು ಹಾಗೂ ಔಷಧಿ ಕೊರತೆ ನೀಗಿಸಲು ಜಾರಿ ಮಾಡಿದ ಯೋಜನೆಯ ವಿವರ ಇಲ್ಲಿದೆ.

ಚೀನವನ್ನು ಅವಲಂಬಿತವಾಗಿರುವ ಭಾರತ
ವರದಿಯ ಪ್ರಕಾರ 58 ಎಪಿಐಗಳಿಗಾಗಿ (ಆ್ಯಕ್ಟೀವ್‌ ಫಾರ್ಮಾಸ್ಯುಟಿಕಲ್‌ ಇಂಗ್ರೀಡಿಯೆಂಟ್ಸ್‌) ಭಾರತವು ಚೀನದ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂದು ತಿಳಿಸಿದೆ. ಹಾಗಾಗಿ ಉದ್ಯಮಗಳನ್ನು ಪುನರುಜ್ಜೀವಗೊಳಿಸಲು ಶಿಫಾರಸುಗಳು, ಎಪಿಐಗಳನ್ನು ತಯಾರಿಸಲು ಹೊಸ ತಂತ್ರಜ್ಞಾನಗಳು, ಅದರ ಏಕೀಕರಣ, ಯೋಜನೆಗಳ ವೆಚ್ಚ ಮತ್ತು ಕಾರ್ಯತಂತ್ರದ ವ್ಯವಹಾರ ಮಾದರಿಗಳನ್ನು ಗುರುತಿಸಲು ಮಾರ್ಚ್‌ 2ರಂದು ತಾಂತ್ರಿಕ ಸಮಿತಿಯನ್ನು ರಚಿಸಿದೆ. ಡ್ರಗ್‌ ಸೆಕ್ಯುರಿಟಿ ಕಮಿಟಿ ಗುರುತಿಸಿದ 58 ಎಪಿಐಗಳನ್ನು ಸಹ ಸಮಿತಿ ಪರಿಶೀಲಿಸಿ, 53 ಎಪಿಐಗಳಿಗಾಗಿ ಯೋಜನೆಯನ್ನು ಶಿಫಾರಸು ಮಾಡಿದೆ.

ಔಷಧಿಗಳ ಉತ್ಪಾದನೆ ಹೆಚ್ಚಿಸಲು ಯೋಜನೆ
ಸಮಿತಿಯ ಶಿಫಾರಸುಗಳ ಆಧಾರದ ಮೇಲೆ, ಬೃಹತ್‌ ಔಷಧಿಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಇಲಾಖೆ ಉತ್ಪಾದನಾ ಪ್ರೋತ್ಸಾಹಕ (ಪ್ರೊಡಕ್ಷನ್‌ ಲಿಂಕ್‌ಡ್‌ ಇನ್ಸೆಂಟಿವ್‌, ಪಿಎಲ್ಐ) ಯೋಜನೆ ಮತ್ತು ಬೃಹತ್‌ ಔಷಧ ಪ್ರಚಾರಕ್ಕಾಗಿ ಯೋಜನೆ ಎಂಬ 2 ಯೋಜನೆಗಳನ್ನು ಸಿದ್ಧಪಡಿಸಿದ್ದು, ಇವುಗಳನ್ನು ಮಾರ್ಚ್‌ 20ರಂದು ಕ್ಯಾಬಿನೆಟ್‌ ಅನುಮೋದಿಸಿದೆ.

Advertisement

2019-20 ವರ್ಷದಲ್ಲಿ ಶೇ.72.40ರಷ್ಟು ರಫ್ತು
ಪಿಎಲ್ಐ ಯೋಜನೆಯಡಿ, ಗುರುತಿಸಲಾದ ಎಲ್ಲ 53 ಎಪಿಐಗಳನ್ನು ಒಳಗೊಂಡಿರುವ ಆಯ್ದ ತಯಾರಕರಿಗೆ 41 ಉತ್ಪನ್ನಗಳ ಮಾರಾಟದ ಆಧಾರದ ಮೇಲೆ ಹಣಕಾಸಿನ ಪ್ರೋತ್ಸಾಹ ನೀಡಲಾಗುವುದು. ಸೆಂಟ್ರಲ್‌ ಡ್ರಗ್ಸ್‌ ಸ್ಟ್ಯಾಂಡರ್ಡ್‌ ಕಂಟ್ರೋಲ್‌ ಆರ್ಗನೈಸೇಶನ್‌ನ (ಸಿಡಿಎಸ್ಕೊ) ಮಾಹಿತಿಯ ಪ್ರಕಾರ, ಚೀನದಿಂದ ಆಮದು ಮಾಡಿಕೊಳ್ಳುವ ಕಚ್ಚಾ ವಸ್ತು ಗಳ ಶೇಕಡಾವಾರು ವಿವರಗಳು ಹೀಗಿವೆ:
ವರ್ಷ              ಶೇಕಡಾವಾರು(ಮೌಲ್ಯ)
2017-18       ಶೇ. 68.62
2018-19       ಶೇ.66.53
2019-20      ಶೇ.72.40

ಔಷಧಿಗಳ ಅಲಭ್ಯತೆ ನೀಗಿಸಲು ಎನ್‌ಪಿಪಿಎ ಸ್ಥಾಪನೆ
ಎನ್‌ಪಿಪಿಎ ಸಹಾಯವಾಣಿ ಸಂಖ್ಯೆ 1800111255 ಕಂಟ್ರೋಲ್‌ ರೂಮ್‌ ಸ್ಥಾಪಿಸಿದ್ದು, ಔಷಧಿಗಳು, ಮಾಸ್ಕ್‌, ಗ್ಲೌಸ್‌, ಹ್ಯಾಂಡ್‌ ಸ್ಯಾನಿಟೈಜರ್‌ ಇತ್ಯಾದಿಗಳ ಲಭ್ಯತೆ ಮತ್ತು ಬೆಲೆ ಉಲ್ಲಂಘನೆ ಮುಂತಾದ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲಾಗಿದೆ. ಅಲ್ಲದೆ, ಎನ್‌ಪಿಪಿಎ ವೆಬ್‌ಸೈಟ್‌ನಲ್ಲಿ (www.nppaindia.nic.in) ಇತ್ತೀಚಿನ ಕಚೇರಿ ಆದೇಶಗಳು, ಸುತ್ತೋಲೆಗಳು, ಸಹಾಯವಾಣಿ ಸಂಖ್ಯೆ, ಕುಂದು ಕೊರತೆಗಳನ್ನು ಕಳುಹಿಸುವ ಇಮೇಲ್‌ ಇತ್ಯಾದಿಗಳನ್ನು ಹೊಂದಿರುವ ಕೋವಿಡ್‌ ಡ್ಯಾಶ್‌ ಬೋರ್ಡ್‌ ರಚಿಸಲಾಗಿದೆ.

ಕೋವಿಡ್‌ ಸಾಂಕ್ರಾಮಿಕ ಸಮಯದಲ್ಲಿ ಔಷಧದ ಕೊರತೆಯನ್ನು ತಡೆಗಟ್ಟಲು ಮತ್ತು ಸಾರ್ವಜನಿಕ ಕುಂದು ಕೊರತೆಗಳನ್ನು ಪರಿಹರಿಸಲು ಎನ್‌ಪಿಪಿಎ ಇ-ಮೇಲ್‌ ಮಾನಿಟರಿಂಗ್‌ (nppagov.in) ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ.

ತುರ್ತು ಬಳಕೆಯ ಔಷಧಿಯಾಗಿ ರೆಮ್ಡಿಸಿವಿರ್‌
ಪ್ರಸ್ತುತ ಬೇಡಿಕೆಗೆ ಸರಿಹೊಂದಿಸಲು ಫಾರ್ಮಾ ಕಂಪನಿಗಳಿಗೆ ಸಾಧ್ಯವಾಗುತ್ತಿಲ್ಲ ಎಂಬ ಬಗ್ಗೆ ಕೇಂದ್ರ ಡ್ರಗ್ಸ್‌  ಸ್ಟ್ಯಾಂಡರ್ಡ್‌ ಕಂಟ್ರೋಲ್‌ ಆರ್ಗನೈಸೇಶನ್‌ (ಸಿಡಿಎಸ್ಕೊ) ಯಾವುದೇ ವರದಿಯನ್ನು ಸ್ವೀಕರಿಸಿಲ್ಲ. ಆದರೆ ರೆಮ್ಡಿಸಿವಿರ್‌‌ ಅನ್ನು ಇನ್ವೆಸ್ಟಿಗೇಷನಲ್‌ ಥೆರಪಿ ವಿಭಾಗದ ಅಡಿಯಲ್ಲಿ ಸೇರಿಸಲಾಗಿದ್ದು, ಇದನ್ನು ಆಫ್-ಲೇಬಲ್‌ ಮತ್ತು ತುರ್ತು ಬಳಕೆಗಾಗಿ ದೃಢೀಕರಿಸಿದ ಔಷಧಿಯಾಗಿ ಬಳಸಲಾಗುತ್ತಿದೆ.

ಇನ್ನು ನಿರ್ಬಂಧಿತ ತುರ್ತು ಬಳಕೆಗಾಗಿ ಡ್ರಗ್ಸ್ ಕಂಟ್ರೋಲರ್‌ ಜನರಲ್‌ ಆಫ್ ಇಂಡಿಯಾ (ಡಿಸಿಜಿಐ) ಇದಕ್ಕೆ ಷರತ್ತುಬದ್ಧ ಪರವಾನಗಿಯನ್ನು ನೀಡಿದ್ದು, ರೋಗಿಯ ಒಪ್ಪಿಗೆ ಪಡೆದ ಅನಂತರ ಈ ಔಷಧಿಗಳನ್ನು ನೀಡಲಾಗುತ್ತಿದೆ. ಆದ್ದರಿಂದ ಕೋವಿಡ್‌ ಚಿಕಿತ್ಸೆಗಾಗಿ ಈ ಔಷಧಿಗಳಿಗೆ ಪೂರ್ಣ ಔಷಧಿಯ ಸ್ಥಾನವನ್ನು ನೀಡಲಾಗಿಲ್ಲ. ಔಷಧೀಯ ಕಂಪನಿಗಳು ಇಲ್ಲಿಯವರೆಗೆ ತಯಾರಿಸಿದ ಒಟ್ಟು ಪ್ರಮಾಣದ ರೆಮ್ಡಿಸಿವಿರ್‌ನ ವಿವರಗಳನ್ನು ಮೂಲಗಳು ಹಂಚಿಕೊಂಡಿದ್ದು, ಸೆಪ್ಟಂಬರ್‌ 8ರ ವರೆಗೆ ಮಾರುಕಟ್ಟೆಗೆ ಬಂದ ರೆಮ್ಡಿಸಿವಿರ್‌ನ ಒಟ್ಟು ಪ್ರಮಾಣ ಈ ಕೆಳಗಿನಂತಿದೆ.

1. ಮೈಲಾನ್‌ ಲ್ಯಾಬೊರೇಟರೀಸ್‌ ಲಿಮಿಟೆಡ್‌ 500,000 ಬಾಟಲಿಗಳು
2.ಹೆಟ್ರೋ ಹೆಲ್ತ್ ಕೇರ್‌‌ 14,46,000 ಬಾಟಲಿಗಳು
3. ಜುಬಿಲೆಂಟ್‌ ಜೆನೆರಿಕ್ ಲಿ.‌ 150,000 ಬಾಟಲಿಗಳು
4. ಸಿಪ್ಲಾ (28-08-2020ರಂತೆ) 143,329 ಬಾಟಲಿಗಳು
5. ಡಾ. ರೆಡ್ಡೀಸ್‌ ಲ್ಯಾಬೊರೇಟರೀಸ್‌ 13286 ಬಾಟಲಿಗಳು
6. ಕ್ಯಾಡಿಲಾ ಹೆಲ್ತ್‌ಕೇರ್‌ ಲಿಮಿಟೆಡ್‌ 1,86,957 ಬಾಟಲಿಗಳು

 

Advertisement

Udayavani is now on Telegram. Click here to join our channel and stay updated with the latest news.

Next