Advertisement

ರೈತರಿಗೆ ಹೊಸ ಸಾಲ ನೀಡಲು ನಿರ್ಧಾರ: ಸಚಿವ ಎಸ್ ಟಿ ಸೋಮಶೇಖರ್

04:13 PM Apr 18, 2020 | keerthan |

ದಾವಣಗೆರೆ: ರಾಜ್ಯದ ರೈತರಿಗೆ ಹೊಸ ಸಾಲ ನೀಡಲು ನಿರ್ಧರಿಸಲಾಗಿದ್ದು, ಇನ್ನೆರಡು ದಿನಗಳಲ್ಲಿ ಸರ್ಕಾರದಿಂದ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

Advertisement

ದಾವಣಗೆರೆಯಲ್ಲಿ ಮಾತನಾಡಿದ ಅವರು, ಕೋವಿಡ್-19 ಭೀತಿ ಹಿನ್ನೆಲೆ ರಾಜ್ಯದ ಬಹುತೇಕ ಎಪಿಎಂಸಿಗೆ ಭೇಟಿ ನೀಡಲಾಗುತ್ತಿದೆ. ರೈತರಿಗೆ ತಮ್ಮ ಬೆಳೆ ಮಾರಾಟಕ್ಕೆ ತೊಂದರೆ ಆಗಬಾರದು‌.ಈಗಾಗಲೇ ರೈತರ ಸಾಲ ಮನ್ನಾ ಬಗ್ಗೆ ಸೂಕ್ತ ಕ್ರಮ ಕೈ ಗೊಳ್ಳಲಾಗಿದೆ. ರಾಜ್ಯದಲ್ಲಿ 29800 ಅರ್ಜಿಗಳಿದ್ದವು‌ ಇದರಲ್ಲಿ 14629 ಅರ್ಜಿಗಳು ಇನ್ನು ವಿಲೇವಾರಿ ಆಗಿಲ್ಲ. ಇದರ ಬಗ್ಗೆ ಸಂಬಂಧಿಸಿದವರಿಗೆ ಸೂಚನೆ ನೀಡಲಾಗಿದೆ ಎಂದರು.

ಇನ್ನೆರಡು ದಿನಗಳಲ್ಲಿ ರೈತರಿಗೆ ಹೊಸ ಸಾಲ ನೀಡುವ ಬಗ್ಗೆ ಅದೇಶ ಹೊರಡಿಸಲಾಗುವುದು. ಇದೇ ವಿಚಾರದಲ್ಲಿ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಾಗುವುದು ಎಂದರು.

ಖಾಸಗಿ ಹಣಕಾಸು ಕಂಪನಿಗಳು ರೈತರ ಸಾಲ ವಸೂಲು ಮಾಡುವಂತಿಲ್ಲ. ವಾಹನಗಳನ್ನ ಸೀಜ್ ಮಾಡುವಂತಿಲ್ಲ. ಇಂತಹ ಕಂಪನಿಗಳಿಗೆ ಮುಖ್ಯಮಂತ್ರಿ ಗಳ ಜೊತೆ ಮಾತುಕತೆ ‌ನಡೆಸಿ ಸುತ್ತೋಲೆ ಕಳುಹಿಸಲಾಗುವುದು. ಮೂರು ತಿಂಗಳ‌ ಕಾಲ ಸಾಲಾ ವಸೂಲಿ ಮಾಡದಂತೆ ಖಾಸಗಿ ಕಂಪನಿಗಳಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಸಚಿವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next