Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದ ಕುರಿತು ಸಂತೋಷ್ ಪಾಟೀಲ್ ಪತ್ನಿ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದಾರೆ. ನಾವು ಪದೇ ಪದೇ ಹೇಳುತ್ತಿದ್ದೇವೆ. ಹೈಕೋರ್ಟ್ ಸಿಟ್ಟಿಂಗ್ ಜಡ್ಜ್ ನೇತೃತ್ವದ ತನಿಖೆ ಮಾಡಬೇಕು. ಸಂತೋಷ್ ಪಾಟೀಲ್ ಪತ್ನಿ ಅಷ್ಟೇ ಅಲ್ಲ, ಕಂಟ್ರಾಕ್ಟರ್ ಅಸೋಸಿಯೇಷನ್ ಕೂಡ ದೂರು ಕೊಟ್ಟಿತ್ತು. ಕೇಂದ್ರ ಸರ್ಕಾರ ತನಿಖೆ ಮಾಡಬೇಕಿತ್ತು, ಐಟಿ, ಇಡಿ, ಸಿಬಿಐ ಸಂಸ್ಥೆ ಮಧ್ಯಪ್ರವೇಶ ಮಾಡಬೇಕಿತ್ತು ಆದರೆ ಬಿಜೆಪಿ ನಾಯಕರು ಪ್ರಕರಣ ಮುಚ್ಚಲು ನೋಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ರಾಜ್ಯದಲ್ಲಿ ಅತಿವೃಷ್ಠಿ ವಿಚಾರವಾಗಿ ಮಾತನಾಡಿ, ರಾಜ್ಯದಲ್ಲಿ ತೀವ್ರ ಮಳೆಯಾಗುತ್ತಿದೆ . ಕಳೆದ ಬಾರಿ ಆಗಿರುವ ನಷ್ಟಕ್ಕೆ ಪರಿಹಾರ ಕೊಡುತ್ತಿಲ್ಲ. ಇಲ್ಲ ಸಲ್ಲದ ಸಬೂಬುಗಳನ್ನು ಹೇಳುತ್ತಾರೆ. ಅವರಿಗೆ ರೈತರನ್ನು ಕಂಗಾಲು ಮಾಡಬೇಕು ಅಷ್ಟೇ. ಅವರಿಗೆ ಬೇಕಾಗಿರುವುದು ಕಮಿಷನ್. ಒಎಂಆರ್ ಶೀಟ್ ತಿದ್ದುವುದಷ್ಟೇ ಗೊತ್ತಿದೆ. ರೈತರ ಪಂಪ್ ಸೆಟ್, ಮನೆಗಳು ಬಿದ್ದಿವೆ, ಅದಕ್ಕೆ ಪರಿಹಾರ ಇಲ್ಲ ಅಂತ ಅಧಿಕಾರಿಗಳು ಸಬೂಬು ಹೇಳುತ್ತಾರೆ. ಈಗ ಇವರು ಎಲ್ಲಿಂದ ಪರಿಹಾರ ನೀಡುತ್ತಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.