Advertisement

ನೂತನ ಜಲಶಕ್ತಿ ಸಚಿವಾಲಯ ರಚನೆ, ಗಜೇಂದ್ರ ಸಿಂಗ್‌ ಶೇಖಾವತ್‌ ಮುಖ್ಯಸ್ಥ

05:02 PM Jun 01, 2019 | Sathish malya |

ಹೊಸದಿಲ್ಲಿ : ಪ್ರಧಾನಿ ಮೋದಿ ಅವರ ನೂತನ ಸರಕಾರ ಹೊಸ ಜಲ ಶಕ್ತಿ ಸಚಿವಾಲಯವನ್ನು ಸೃಷ್ಟಿಸಿದೆ.

Advertisement

ಈಗ ಅಸ್ತಿತ್ವದಲ್ಲಿರುವ ಜಲ ಸಂಪನ್ಮೂಲ ಮತ್ತು ಕುಡಿಯುವ ನೀರು ಹಾಗೂ ಶುಚಿತ್ವದ ಸಚಿವಾಲಯಗಳನ್ನು ಈ ಹೊಸ ಸಚಿವಾಲಯದಲ್ಲಿ ವಿಲಯನಗೊಳಿಸಲಾಗಿದ್ದು ಈ ನೂತನ ಸಚಿವಾಲಯಕ್ಕೆ ಗಜೇಂದ್ರ ಸಿಂಗ್‌ ಶೇಖಾವತ್‌ ಮುಖ್ಯಸ್ಥರಾಗಿರುತ್ತಾರೆ.

ಈಚೆಗೆ ಮುಗಿದ 2019ರ ಲೋಕಸಭಾ ಚುನಾವಣೆಯ ಪ್ರಚಾರಾಭಿಯಾನದ ವೇಳೆ ಪ್ರಧಾನಿ ಮೋದಿ ಅವರು ಜಲ ಸಂಬಂಧಿ ವಿಷಯಗಳನ್ನು ನಿರ್ವಹಿಸಲು ಸಮ್ಮಿಳಿತ ನೂತನ ಸಚಿವಾಲಯವನ್ನು ರೂಪಿಸಲಾಗುವುದು ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next