Advertisement

ಸೆಂಟ್ರಲ್‌ ವಿಸ್ತಾ ಕಾಮಗಾರಿ ಮೇಲ್ವಿಚಾರಣೆಗಾಗಿ ಸಮಿತಿ

07:58 PM Nov 27, 2021 | Team Udayavani |

ನವದೆಹಲಿ : ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಸೆಂಟ್ರಲ್‌ ವಿಸ್ತಾದ ಕಾಮಗಾರಿಯ ಮೇಲ್ವಿಚಾರಣೆ ನಡೆಸಲೆಂದು ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿಯು ವಿಸ್ತಾದ ಕಾಮಗಾರಿ ಪರಿಶೀಲನೆ, ವಿವಿಧ ಸಚಿವಾಲಯಗಳ ನಡುವೆ ಸಮನ್ವಯ ಸೇರಿ ಅನೇಕ ರೀತಿಯ ಜವಾಬ್ದಾರಿ ನಿರ್ವಹಿಸಲಿದೆ.

Advertisement

ಸೆಂಟ್ರಲ್‌ ವಿಸ್ತಾ ಕಾಮಗಾರಿಯನ್ನು ಎರಡು ವರ್ಷಗಳಲ್ಲಿ ಮುಗಿಸುವ ಯೋಜನೆ ಹಾಕಿಕೊಂಡಿರುವುದಾಗಿ ಸರ್ಕಾರ ತಿಳಿಸಿದೆ. “ಯೋಜನೆಯ ಮುಂದಿನ ಹಂತದಲ್ಲಿ ಹಲವಾರು ಸವಾಲುಗಳು ಎದುರಾಗುವ ಸಾಧ್ಯತೆಯಿದೆ. ಸಾಂಸ್ಕೃತಿಕ ಸ್ಥಳಗಳ ನಿರ್ಮಾಣ, ವಿವಿಧ ಮಧ್ಯಸ್ಥರ ನಡುವೆ ಸಮನ್ವಯ ಸೇರಿ ಹಲವು ವಿಚಾರಗಳಲ್ಲಿ ಮೇಲ್ವಿಚಾರಣೆ ಅಗತ್ಯ’ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಸದ್ಯ ಆನ್‌ಲೈನ್‌ ಆಧಾರದಲ್ಲಿ ಕಾಮಗಾರಿಯ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಇನ್ನು ಮುಂದೆ ಆ ಕೆಲಸವನ್ನು ಸಮಿತಿಯೇ ನಿರ್ವಹಿಸಲಿದ್ದು, ಕಾಲ ಕಾಲಕ್ಕೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಸಮಿತಿಗಾಗಿ ಕಚೇರಿ ಸೇರಿ ಎಲ್ಲ ಸೌಲಭ್ಯ ಮಾಡಿಕೊಡಲಾಗಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ : ಕೋವಿಡ್ ರೂಪಾಂತರ: ರಾಜ್ಯ ಸರಕಾರ ಕೈಗೊಂಡ ಪ್ರಮುಖ ತೀರ್ಮಾನಗಳು ಹೀಗಿವೆ

Advertisement

Udayavani is now on Telegram. Click here to join our channel and stay updated with the latest news.

Next