Advertisement
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಳೇ ಮೈಸೂರು ಭಾಗದಲ್ಲಿ ಜನಪ್ರತಿನಿಧಿಯೊಬ್ಬರು ನನ್ನ ವಿರುದ್ಧ ಪ್ರಚಾರ ನಡೆಸಿದ್ದಾರೆ. ಸಂಘದ ಚುನಾವಣ ಇತಿಹಾಸದಲ್ಲಿ ಎಂದೂ ಈ ರೀತಿ ನಡೆದಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸರಕಾರಿ ನೌಕರರಿಗೆ ನೀಡಿದ್ದ ಶೇ.95ರಷ್ಟು ಬೇಡಿಕೆಗಳನ್ನು ಈಡೇರಿಸಿದ್ದೇನೆ. ಸರರಿ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆಗಾಗಿ ರಾಜ್ಯ 7ನೇ ವೇತನ ಆಯೋಗವನ್ನು ಅವಧಿಯೊಳಗೆ ರಚಿಸಲು ಯಶಸ್ವಿಯಾಗಿದ್ದೇನೆ. ಅನಿರ್ದಿಷ್ಟಾ ವಧಿ ಮುಷ್ಕರಕ್ಕೆ ಕರೆ ನೀಡುವ ಮೂಲಕ ಶೇ.17ರಷ್ಟು ಮಧ್ಯಂತರ ಪರಿಹಾರದ ಭತ್ಯೆ ಪಡೆಯುವಲ್ಲಿ ಸಫಲನಾಗಿದ್ದೇನೆ ಎಂದು ತಿಳಿಸಿದರು.
ಮತ್ತೆ ಅಧಿಕಾರಕ್ಕೆ ಬಂದರೆ ಹಳೆಪಿಂಚಣಿ ಯೋಜನೆ ಜಾರಿಗೆ ಹೋರಾಟ ನಡೆಸುತ್ತೇನೆ. ಹೈದರಾಬಾದ್-ಕರ್ನಾಟಕದ ಭಾಗದವರಿಗೆ ಮುಂಭಡ್ತಿ ಅವಕಾಶ ಕಲ್ಪಿಸಲಾಗುವುದು. ಎ,ಬಿ,ಸಿ,ಡಿ ವೃಂದಗಳ ಸರಕಾರಿ ಅಧಿಕಾರಿ-ನೌಕರರಿಗೆ ಕೌನ್ಸಿಲಿಂಗ್ ವರ್ಗಾವಣೆ ಕಾಯ್ದೆ ಜಾರಿಗೆ ಹೋರಾಟ ನಡೆಸಲಾಗುವುದು. ವೇತನ ಆಯೋಗದ ಒಂದನೇ ವರದಿಯ ಶಿಫಾರಸಿನಂತೆ ಅನಷ್ಠಾನಗೊಳ್ಳಬೇಕಾಗಿರುವ ಎಲ್ಲಾ ಇತರ ಭತ್ಯೆ ಮತ್ತು ಸೌಲಭ್ಯ ಜಾರಿಗೆ ಸೇರಿ ಹಲವು ಭರವಸೆಗಳನ್ನು ನೀಡಲಾಗಿದೆ. ಅವುಗಳ ಅನುಷ್ಠಾನಕ್ಕೆ ಹೋರಾಟ ನಡೆವುದಾಗಿ ಭರವಸೆ ನೀಡಿದರು.