Advertisement

ಪ್ರಮಾಣೀಕರಣ ಕಡ್ಡಾಯವಿಲ್ಲ: ರಾಜೀವ್‌ ಚಂದ್ರಶೇಖರ್‌

10:56 AM Mar 31, 2022 | Team Udayavani |

ನವದೆಹಲಿ: ಸಾಮಾಜಿಕ ಜಾಲತಾಣಗಳ ಬಳಕೆದಾರರ ಗುರುತನ್ನು ಪ್ರಮಾಣೀಕರಿಸುವ ಯೋಜನೆಯನ್ನು ಸರ್ಕಾರ ಹೊಂದಿಲ್ಲ ಎಂದು ಎಲೆಕ್ಟ್ರಾನಿಕ್‌ ಮತ್ತು ಐಟಿ ಸಚಿವಾಲಯದ ಸಹಾಯಕ ಸಚಿವ ರಾಜೀವ್‌ ಚಂದ್ರಶೇಖರ್‌ ತಿಳಿಸಿದ್ದಾರೆ.

Advertisement

ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಸುರಕ್ಷತೆ ಬಗ್ಗೆ ಬುಧವಾರ ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಸಚಿವರು, “ಅಂತರ್ಜಾಲವು ಎಲ್ಲರಿಗೂ ಮುಕ್ತ, ಸುರಕ್ಷಿತ, ವಿಶ್ವಾಸಾರ್ಹ ಮತ್ತು ಜವಾಬ್ದಾರಿಯುತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರ ಕಳೆದ ವರ್ಷ ಫೆಬ್ರವರಿಯಲ್ಲಿ ಮಾಹಿತಿ ತಂತ್ರಜ್ಞಾನ ನಿಯಮ ಜಾರಿಗೆ ತಂದಿದೆ.

ಇದನ್ನೂ ಓದಿ:ಜನರಿಗೆ ಇವಿಎಂ ಗಳ ಮೇಲೆ ಭರವಸೆ ಕಡಿಮೆಯಾಗುತ್ತಿದೆ : ಸಿದ್ದರಾಮಯ್ಯ

ಇಂತಹ ನಿಯಮಗಳ ವ್ಯಾಪ್ತಿ ಹೆಚ್ಚಿಸಲು ಸರ್ಕಾರ ಕೆಲಸ ಮಾಡುತ್ತದೆ. ಬಳಕೆದಾರರ ಗುರುತು ಪ್ರಮಾಣೀಕರಣ ಮಾಡಲಾಗದು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next