Advertisement

ವಿದೇಶಿ ದೇಣಿಗೆ ಪಡೆವವರು ತಿಂಗಳೊಳಗೆ ಖಾತೆ ತೆರೆಯಿರಿ

06:40 AM Dec 26, 2017 | Team Udayavani |

ನವದೆಹಲಿ: ಎನ್‌ಜಿಒಗಳ ವ್ಯವಹಾರಗಳ ಮೇಲೆ ಕಣ್ಣಿಟ್ಟಿರುವ ಕೇಂದ್ರ ಸರ್ಕಾರ ಇದೀಗ, ಒಂದು ತಿಂಗಳೊಳಗಾಗಿ ಬ್ಯಾಂಕ್‌ ಖಾತೆ ತೆರೆಯುವಂತೆ ಆದೇಶಿಸಿದೆ. ವಿದೇಶದಿಂದ ದೇಣಿಗೆ ಪಡೆಯುತ್ತಿರುವ ದೇಶದಲ್ಲಿರುವ ಎಲ್ಲ ಎನ್‌ಜಿಒಗಳು, ಸಂಸ್ಥೆಗಳು, ಉದ್ಯಮಗಳು ಹಾಗೂ ವ್ಯಕ್ತಿಗಳು ಕೇಂದ್ರ ಸರ್ಕಾರ ಪಟ್ಟಿ ಮಾಡಿರುವ 32 ಬ್ಯಾಂಕ್‌ಗಳ ಪೈಕಿ ಒಂದರಲ್ಲಿ ಒಂದು ತಿಂಗಳೊಳಗೆ ಖಾತೆ ತೆರೆಯಬೇಕು ಮತ್ತು ಆ ಖಾತೆಯ ಮೂಲಕವೇ ವಿದೇಶದಿಂದ ಬಂದ ಹಣವನ್ನು ಪಡೆಯಬೇಕು ಎಂದು ಕೇಂದ್ರ ಗೃಹ ಇಲಾಖೆ ಆದೇಶ ಹೊರಡಿಸಿದೆ. ವಿದೇಶದಿಂದ ಪಡೆದ ಹಣವನ್ನು ದೇಶದ ಹಿತಾಸಕ್ತಿಗೆ ವಿರುದ್ಧವಾದ ಯಾವುದೇ ಚಟುವಟಕೆಗೆ ಬಳಸಬಾರದು ಎಂದೂ ತಿಳಿಸಿದೆ. 

Advertisement

ವಿದೇಶಿ ಅನುದಾನದ ಬಗ್ಗೆ ಪಾರದರ್ಶಕತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. 2018ರ ಜನವರಿ 21 ರೊಳಗೆ ಬ್ಯಾಂಕ್‌ ಖಾತೆ ತೆರೆದು ನಿಗದಿತ ನಮೂನೆಯಲ್ಲಿ ಗೃಹ ಸಚಿವಾಲಯಕ್ಕೆ ವಿವರ ಒದಗಿಸಬೇಕು. ಸಾರ್ವಜನಿಕ ಹಣಕಾಸು ನಿರ್ವಹಣೆ ವ್ಯವಸ್ಥೆ (ಪಿಎಫ್ಎಂಎಸ್‌) ಅನ್ನು ಕೇಂದ್ರ ಸರ್ಕಾರ ಈಗಾಗಲೇ ಸ್ಥಾಪಿಸಿದ್ದು, ಇದರ ಅಡಿಯಲ್ಲಿ ಬ್ಯಾಂಕ್‌ಗಳು ನೋಂದಾಯಿಸಿಕೊಳ್ಳಬೇಕಿದೆ. ಈಗಾಗಲೇ 32 ಬ್ಯಾಂಕ್‌ಗಳು ನೋಂದಣಿ ಮಾಡಿಕೊಂಡಿವೆ. ವಿದೇಶಿ ಅನುದಾನವನ್ನು ವಿದೇಶಿ ಅನುದಾನ ಕಾಯ್ದೆ 2010ರ ಅಡಿಯಲ್ಲಿ ಸೂಚಿಸಿದ ನಿಯಮಾವಳಿಗೆ ಅನುಗುಣವಾಗಿ ಬಳಸಬೇಕಿದೆ. ಈ ಹಿನ್ನೆಲೆಯಲ್ಲಿ ಗೃಹ ಸಚಿವಾಲಯ ಈ ನಿರ್ದೇಶನ ಹೊರಡಿಸಿದೆ. 32 ಬ್ಯಾಂಕ್‌ಗಳ ಪೈಕಿ ದೇಶದ ಬಹುತೇಕ ಪ್ರಮುಖ ಬ್ಯಾಂಕ್‌ಗಳು ಇವೆ ಮತ್ತು ವಿದೇಶದ ಅಬುಧಾಬಿ ಕಮರ್ಷಿಯಲ್‌ ಬ್ಯಾಂಕ್‌ ಕೂಡ ಇದೆ.

Advertisement

Udayavani is now on Telegram. Click here to join our channel and stay updated with the latest news.

Next