Advertisement

ರಾಜಪಥವಲ್ಲ “ಕರ್ತವ್ಯಪಥ’ಮರು ನಾಮಕರಣಕ್ಕೆ ಕೇಂದ್ರದ ನಿರ್ಧಾರ

12:14 PM Sep 06, 2022 | Team Udayavani |

ನವದೆಹಲಿ: ದೆಹಲಿಯ ಸುಪ್ರಸಿದ್ಧ ರಾಜಪಥ ಹಾಗೂ ಸೆಂಟ್ರಲ್‌ ವಿಸ್ತಾದ ಹುಲ್ಲುಹಾಸನ್ನು “ಕರ್ತವ್ಯ ಪಥ’ ಎಂದು ಮರು ನಾಮಕರಣ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇನ್ನು ಮುಂದೆ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಪ್ರತಿಮೆ ಇರುವ ಸ್ಥಳದಿಂದ ರಾಷ್ಟ್ರಪತಿ ಭವನದವರೆಗೂ “ಕರ್ತವ್ಯ ಪಥ’ ಎಂದು ಹೆಸರಿಸಲಾಗುವುದು.

Advertisement

ಅದಷ್ಟೇ ಅಲ್ಲದೆ “ರಾಜ’ ಎಂದಿರುವುದನ್ನು “ಕರ್ತವ್ಯ’ ಎಂದು ಬದಲಿಸುವ ಮೂಲಕ ಕೇಂದ್ರವು ಇದು ಆಳ್ವಿಕೆ ಮಾಡುವವರ ಕಾಲವಲ್ಲ ಬದಲಾಗಿ ನಿಷ್ಠೆಯಿಂದ ದುಡಿಯುವವರ ಕಾಲ ಎಂದು ಹೇಳಲು ಬಯಸುತ್ತಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ. ನವೀಕರಣಗೊಂಡಿರುವ ಸೆಂಟ್ರಲ್‌ ವಿಸ್ತಾ ಅವೆನ್ಯೂ ಅನ್ನು ಪ್ರಧಾನಿ ಮೋದಿ ಅವರು ಸೆ.8ರಂದು ಉದ್ಘಾಟಿಸಲಿದ್ದಾರೆ.

ಆ.15ರ ಸ್ವಾತಂತ್ರ್ಯ ದಿನೋತ್ಸವದಂದು ಮಾತನಾಡಿದ್ದ ಪ್ರಧಾನಿ ಅವರು, ದೇಶದಲ್ಲಿ ಬ್ರಿಟಿಷರ ಆಳ್ವಿಕೆಯ ಕುರುಹನ್ನು ತೆಗೆದುಹಾಕುವುದಾಗಿ ಹೇಳಿದ್ದರು. ಅದೇ ಹಿನ್ನೆಲೆ ಇದೀಗ ರಾಜಪಥ ಹೆಸರು ಬದಲಾವಣೆಗೆ ನಿರ್ಧರಿಸಲಾಗಿದೆ. ವಸಾಹತು ಶಾಹಿ ಆಳ್ವಿಕೆಯ ಕುರುಹಿದ್ದ ಭಾರತೀಯ ನೌಕಾಪಡೆಯ ಧ್ವಜವನ್ನೂ ಇತ್ತೀಚೆಗೆ ಬದಲಾವಣೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next