ಬದ್ಧವಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು. ತಾಲೂಕಿನ ಜಿಗಣಿ ನಿತ್ಯಾನಂದ ಶಾಲಾ ಆವರಣದಲ್ಲಿ ಆಹಾರ ಕಿಟ್ ವಿತರಿಸಿ ಸುದ್ದಿಗಾರೊಂದಿಗೆ ಮಾತನಾಡಿ, ದೇಶದಲ್ಲಿ ಕೇರಳ ಬಿಟ್ಟರೆ ನಮ್ಮ ರಾಜ್ಯವೇ ಕೋವಿಡ್ ನಿಯಂತ್ರಣ ಸಾಧಿಸಿದೆ. ಒಂದು ಕೋಟಿಗೂ ಹೆಚ್ಚು ಜನಸಂಖ್ಯೆಯಿರುವ ಬೆಂಗಳೂರಿನಲ್ಲಿ
ಕಳೆದ ಎರಡು ದಿನಗಳಿಂದ ಪ್ರಕರಣದ ವರದಿಯಾಗಿಲ್ಲ. ಮೈಸೂರು, ಬೆಳಗಾವಿ, ಬಾಗಲಕೋಟೆಗಳಲ್ಲಿ ಹೆಚ್ಚು ನಿಗಾ ವಹಿಸುವ ಸಿದ್ಧತೆಯಲ್ಲಿ ಸರ್ಕಾರ ಕಾರ್ಯ ಪ್ರವೃತ್ತವಾಗಿದೆ
ಎಂದು ಹೇಳಿದರು.
Advertisement
ಕೇರಳ ಮತ್ತು ಉತ್ತರ ಪ್ರದೇಶದ ಮಾದರಿಲ್ಲೇ ಕಾಯ್ದೆ ಜಾರಿಗೊಳಿಸುವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಕಾನೂನು ಸಚಿವರು ಅದರ ಜವಾಬ್ದಾರಿ ಹೊತ್ತು ನಿಯಮ ರೂಪಿಸುತ್ತಿದ್ದಾರೆ. ಕೇರಳ ಮತ್ತು ಉತ್ತರ ಪ್ರದೇಶದ ಕಾಯ್ದೆಗಳಿಗಿಂತ ಕಠಿಣವಾಗಲಿದೆ ಎಂದು ಹೇಳಿದರು. ಪ್ರಕೃತಿ ವಿಕೋಪದಿಂದ ನಷ್ಟವಾದ ಬೆಳೆಗಳಿಗೆ ಪರಿಹಾರವಾಗಿ ತಾಲೂಕಿಗೆ ಸುಮಾರು 45 ಕೋಟಿ ಬಿಡುಗಡೆಯಾಗಿದೆ. ಕೊರೊನಾ ಹಿನ್ನಲೆಯಲ್ಲಿ ರೈತರಿಗೆ ಆಗುತ್ತಿರುವ ನಷ್ಟ ತಡೆಯಲು ಮುಖ್ಯಮಂತ್ರಿಗಳು ಚರ್ಚೆ ನಡೆಸುತ್ತಿದ್ದಾರೆ.
ಪಾದರಾಯನಪುರ ಘಟನೆ ಸಹಿಸಿಕೊಳ್ಳುವಂತಹದ್ದಲ್ಲ. ಹಲವರನ್ನು ಈಗಾಗಲೇ ಬಂಧಿಸಲಾಗಿದ್ದು, ಜೈಲಿನಲ್ಲಿದ್ದಾರೆ. ಇಂತಹ ಗೂಂಡಾಗಳನ್ನು ಸೆದೆ ಬಡಿಯಲು ಹೊಸ ಕಾಯ್ದೆ
ತರುತ್ತಿದ್ದೆವೆ. 2-3 ದಿನಗಳಲ್ಲಿ ಸುಗ್ರೀವಾಜ್ಞೆ ತಂದು ಸಮಾಜ ಘಾತುಕ ಶಕ್ತಿಗಳನ್ನು ಮಟ್ಟಹಾಕಲಾಗುವುದು ಎಂದು ಸಚಿವ ಅಶೋಕ್ ಹೇಳಿದರು.