Advertisement
1.04 ಲಕ್ಷ ಕೋ.ರೂ. ಜಿಎಸ್‌ಟಿ ಸಂಗ್ರಹಸತತ 2ನೇ ಬಾರಿಗೆ ಜಿಎಸ್‌ಟಿ ಸಂಗ್ರಹ 1 ಲಕ್ಷ ಕೋಟಿ ರೂ. ದಾಟಿದೆ. ನ. 30ರ ಮಾಹಿತಿಯಂತೆ 1.04 ಲಕ್ಷ ಕೋಟಿ ರೂ. ಸಂಗ್ರಹಿಸಲಾಗಿದೆ. ಅಕ್ಟೋಬರ್‌ನಲ್ಲಿ 1,04,963 ಕೋಟಿ ರೂ. ಸಂಗ್ರಹವಾಗಿತ್ತು. 2019ರ ನವೆಂಬರ್‌ನಲ್ಲಿ 1,03,491 ಕೋಟಿ ರೂ. ಸಂಗ್ರಹವಾಗಿತ್ತು. 1 ಲಕ್ಷ ಕೋಟಿ ರೂ. ವ್ಯಾಪ್ತಿಯನ್ನು ಉಳಿಸಿಕೊಳ್ಳುವ ಮೂಲಕ ಅರ್ಥ ವ್ಯವಸ್ಥೆಯಲ್ಲಿ ಧನಾತ್ಮಕ ವಾತಾವರಣ ಮೂಡಿದೆ.
ಮಹೀಂದ್ರಾಕ್ಕೆ ಥಾರ್ ನೆರವು
ಮಹೀಂದ್ರಾ ಆ್ಯಂಡ್ ಮಹೀಂದ್ರಾ ನವೆಂಬರ್‌ನಲ್ಲಿ 42,731 ವಾಹನ ಮಾರಾಟ ಮಾಡಿದೆ. ಕಳೆದ ವರ್ಷದ ನವೆಂಬರ್‌ಗೆ ಹೋಲಿಕೆ ಮಾಡಿದರೆ ಇದು ಶೇ. 4ರಷ್ಟು ಹೆಚ್ಚು. ಅ.2ರಂದು ಮಾರುಕಟ್ಟೆಗೆ ಬಿಡುಗಡೆಯಾಗಿರುವ ಥಾರ್ ವಾಹನ ಕಳೆದ ತಿಂಗಳು ಹೆಚ್ಚು ಮಾರಾಟವಾಗಿದೆ. ಯುಟಿಲಿಟಿ ವೆಹಿಕಲ್ ವಿಭಾಗ ಕಳೆದ ತಿಂಗಳು 17,971 ಯುನಿಟ್ ಮಾರಿತ್ತು. ಅಗ್ರ ಸ್ಥಾನಕ್ಕೆ ಕಿಯಾ ಸಾನೆಟ್
ಎಸ್‌ಯುವಿ ವಿಭಾಗದಲ್ಲಿ ಕಿಯಾ ಸಾನೆಟ್ ಮತ್ತೆ ಅಗ್ರ ಸ್ಥಾನ ಕ್ಕೇರಿದೆ. ಕಳೆದ ತಿಂಗಳು ಕಿಯಾ 11,417 ಸಾನೆಟ್ ಗಳನ್ನು ಮಾರಿದೆ. ನವೆಂಬರ್ ನಲ್ಲಿ ಸಂಸ್ಥೆ ಒಟ್ಟು 21,022 ವಾಹನ ಮಾರಿ ದ್ದರೆ, ಈ ಪೈಕಿ ಸಾನೆಟ್ ಪಾಲು ಅರ್ಧದಷ್ಟಿದೆ. ಹ್ಯುಂಡೈ ವೆನ್ಯು 9,265, ಬ್ರೆಜಾ 7,838 ಮಾರಾಟವಾಗಿದೆ. ಹ್ಯುಂಡೈ, ಮಾರುತಿ ಸುಜುಕಿ ಮತ್ತು ಕಿಯಾ ನಡುವೆ ಪೈಪೋಟಿ ಇದೆ.
Related Articles
ದ್ವಿಚಕ್ರ ವಾಹನ ತಯಾರಿಕೆ ಸಂಸ್ಥೆ ಬಜಾಜ್ ಆಟೋ ಕೂಡ 2019ರ ನವೆಂಬರ್‌ನಿಂದ 2020ರ ನವೆಂಬರ್‌ವರೆಗಿನ ಅವಧಿಯಲ್ಲಿ ವಾಹನಗಳ ಮಾರಾಟದಲ್ಲಿ ಶೇ.5 ರಷ್ಟು ಹೆಚ್ಚಳ ಕಂಡಿದೆ. ಮೋಟರ್ ಸೈಕಲ್ ಮಾರಾಟದಲ್ಲಿ ಕಳೆದ ತಿಂಗಳು ಶೇ. 12ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 59,777 ವಾಹನಗಳು ಮಾರಾಟ ವಾಗಿದ್ದವು. ವಾಹನ ರಫ್ತು ಕೂಡ ಕಳೆದ ತಿಂಗಳು ಶೇ. 14ರಷ್ಟು ಹೆಚ್ಚಿದೆ.
Advertisement