Advertisement

Govt.,:ಆದಾಯ ಹೆಚ್ಚಳಕ್ಕೆ ಮುಖ್ಯಮಂತ್ರಿ ಗುರಿ! ಈ ವರ್ಷ 1.10 ಲಕ್ಷ ಕೋ.ರೂ. ಸಂಗ್ರಹದ ಲಕ್ಷ್ಯ

01:24 AM Oct 30, 2024 | Team Udayavani |

ಬೆಂಗಳೂರು: ಸರಕಾರದ ಬೊಕ್ಕಸಕ್ಕೆ ಸಂಪನ್ಮೂಲ ಸಂಗ್ರಹ ಕೊಂಚ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಆದಾಯ ಸೃಷ್ಟಿಸುವ ಎಲ್ಲ ಇಲಾಖೆಗಳ ಜತೆಗೆ ಪ್ರತೀ ತಿಂಗಳು ನೇರಾ ನೇರ ಸಭೆ ನಡೆಸಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಜತೆಗೆ ಈ ವರ್ಷದ 1.10 ಲಕ್ಷ ಕೋಟಿ ರೂ. ಆದಾಯ ಸಂಗ್ರಹ ಗುರಿಯನ್ನು ಸಾಧಿಸಲೇ ಬೇಕೆಂಬ ಎಚ್ಚರಿಕೆಯನ್ನು ನೀಡಿದ್ದಾರೆ.

Advertisement

ವಿವಿಧ ರಾಜಸ್ವ ಸಂಗ್ರಹ ಇಲಾಖೆಗಳ ಜತೆಗೆ ಮಂಗಳವಾರ ಮಹತ್ವದ ಸಭೆ ನಡೆಸಿದ ಸಿಎಂ, ಇನ್ನು ಮುಂದೆ ಪ್ರತೀ ತಿಂಗಳು ಸಭೆ ನಡೆಸುತ್ತೇನೆ. ಪ್ರಗತಿ ಕಾಣಿಸದಿದ್ದರೆ ಮುಲಾಜಿಲ್ಲದೆ ನಿಮ್ಮನ್ನು ಬದಲಾಯಿಸುತ್ತೇನೆ ಎಂದು ಜಂಟಿ ಆಯುಕ್ತರಿಗೆ ಎಚ್ಚರಿಕೆ ನೀಡಿದರು.

2024-25ನೇ ಸಾಲಿನಲ್ಲಿ ಒಟ್ಟು ಗುರಿ 1.10 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹ ಗುರಿ ಹೊಂದ ಲಾಗಿದೆ. ಅಕ್ಟೋ ಬರ್‌ ಅಂತ್ಯದ ವರೆಗೆ ಒಟ್ಟು 58,773 ಕೋಟಿ ರೂ. ಸಂಗ್ರ ಹಿಸ ಲಾಗಿದ್ದು, ಇದ ರಲ್ಲಿ ಜಿಎಸ್‌ಟಿ 44,783 ಕೋಟಿ ರೂ., ಕೆಎಸ್‌ಟಿ 13,193 ಕೋಟಿ ರೂ., ವೃತ್ತಿ ತೆರಿಗೆ 797 ಕೋಟಿ ರೂ. ಸೇರಿದೆ. ಅಕ್ಟೋ ಬರ್‌ ಕೊನೆಯ ವರೆಗೆ ಶೇ. 53.5 ಗುರಿ ಸಾಧನೆ ಯಾಗಿದೆ. 2023-24ನೇ ಸಾಲಿಗೆ ಹೋಲಿಸಿದರೆ ರೂ. 5,957 ಕೋಟಿ ಹೆಚ್ಚುವರಿ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.

ಮುಂದಿನ 5 ತಿಂಗಳು ಅವಧಿಯಲ್ಲಿ ಪ್ರತೀ ತಿಂಗಳು 10,200 ಕೋ.ರೂ. ತೆರಿಗೆ ಸಂಗ್ರಹ ಗುರಿ  ಹಾಕಿಕೊಂಡು ಮಾರ್ಚ್‌ ಒಳಗೆ ಗುರಿಯನ್ನು ಸಾಧಿಸಬೇಕು. ಸಮನ್ವಯದಿಂದ ಕಾರ್ಯ ನಿರ್ವಹಿಸಿದರೆ ಮಾತ್ರ ಗುರಿ ಸಾಧನೆ ಸಾಧ್ಯವಿದೆ.

ರಾಜ್ಯದ ಅಭಿವೃದ್ಧಿಗಾಗಿ ತೆರಿಗೆ
ಸಂಗ್ರಹದಲ್ಲಿ ಗುರಿಯನ್ನು ಸಾಧಿಸಬೇಕಿದೆ. ಪ್ರತೀ ತಿಂಗಳು ಪ್ರಗತಿ ಪರಿಶೀಲನೆ ನಡೆಸಲಿದ್ದೇನೆ. ನಿಗದಿತ ಗುರಿಯನ್ನು ಸಾಧಿಸದ ಅಧಿಕಾರಿ ಗಳನ್ನು ಹೊಣೆಗಾರರನ್ನಾಗಿ ಮಾಡ ಲಾಗುವುದು. ಯಾವುದೇ ಕಾರಣಕ್ಕೂ ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಗುರಿಗಿಂತ ಕಡಿಮೆಯಾಗಲೇ ಬಾರದು ಎಂದು ಸಿಎಂ ನಿರ್ದೇಶನ ನೀಡಿದರು.

Advertisement

ಅಕ್ರಮ ಮದ್ಯ ಸಾಗಾಟ ತಡೆಗೆ ಸಿಎಂ ಸೂಚನೆ
ಅಬಕಾರಿ ಇಲಾಖೆಯಲ್ಲಿ 2024- 25ನೇ ಸಾಲಿನಲ್ಲಿ ಒಟ್ಟು 38,525 ಕೋಟಿ ರೂ. ಅಬಕಾರಿ ತೆರಿಗೆ ಸಂಗ್ರಹ ಗುರಿ ಹೊಂದಲಾಗಿದೆ. ಅ. 28ರ ವರೆಗೆ 20,237 ಕೋಟಿ ರೂ. ಸಂಗ್ರಹವಾಗಿದೆ.

ಇದುವರೆಗೆ ಶೇ. 52.53 ಗುರಿ ಸಾಧನೆ ಮಾಡಲಾಗಿದ್ದು, ಮಾರ್ಚ್‌ ಒಳಗಾಗಿ ನಿಗದಿತ ಗುರಿಯನ್ನು ಸಾಧಿಸಲು ಕ್ರಮ ಕೈಗೊಳ್ಳಬೇಕು. ಕಳೆದ ವರ್ಷಕ್ಕಿಂತ ಈ ಅವಧಿಯಲ್ಲಿ 1,301.15 ಕೋಟಿ ರೂ. ಹೆಚ್ಚುವರಿ ತೆರಿಗೆ ಸಂಗ್ರಹಿಸಲಾಗಿದೆ. ಗೋವಾದಿಂದ ಅಕ್ರಮ ಮದ್ಯ ಸಾಗಾಟ ವನ್ನು ಸಂಪೂರ್ಣವಾಗಿ ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿಎಂ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next