Advertisement

ಸುಳ್ಳು ಸುದ್ದಿಗಳು ಹರಡುತ್ತಿದ್ದ 45 ವಿಡಿಯೋಗಳಿಗೆ ನಿರ್ಬಂಧ

01:44 PM Sep 27, 2022 | Team Udayavani |

ನವದೆಹಲಿ: ವಿವಿಧ ಧಾರ್ಮಿಕ ಸಮುದಾಯಗಳ ನಡುವೆ ದ್ವೇಷ ಬಿತ್ತುವ ಉದ್ದೇಶದಿಂದ ಸುಳ್ಳು ಸುದ್ದಿಗಳು ಮತ್ತು ಮಾರ್ಫ ಮಾಡಿದ ಕಂಟೆಂಟ್‌ಗಳನ್ನು ಒಳಗೊಂಡಿದ್ದ 10 ಯೂಟ್ಯೂಬ್‌ ಚಾನಲ್‌ಗ‌ಳ 45 ವಿಡಿಯೋಗಳನ್ನು ಸರ್ಕಾರ ನಿರ್ಬಂಧಿಸಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್‌ ಠಾಕೂರ್‌ ತಿಳಿಸಿದರು.

Advertisement

ನಿರ್ಬಂಧಿಸಲಾದ ವಿಡಿಯೋಗಳು 1 ಕೋಟಿ 30 ಲಕ್ಷಕ್ಕೂ ಹೆಚ್ಚು ವೀವರ್‌ಶಿಪ್‌ ಹೊಂದಿದ್ದವು. ಕೆಲವು ಸಮುದಾಯಗಳ ಧಾರ್ಮಿಕ ಹಕ್ಕುಗಳನ್ನು ಸರ್ಕಾರ ಕಸಿದುಕೊಂಡಿದೆ ಎಂದು ವಿಡಿಯೋಗಳಲ್ಲಿ ಪ್ರಸಾರ ಮಾಡಲಾಗಿತ್ತು. ಈ ಚಾನೆಲ್‌ಗ‌ಳು ಸಮುದಾಯಗಳಲ್ಲಿ ಭಯ ಮತ್ತು ತಪ್ಪು ಕಲ್ಪನೆಗಳನ್ನು ಹರಡುವ ಕಂಟೆಂಟ್‌ ಹೊಂದಿದ್ದವು.

ಅಲ್ಲದೇ ದೇಶದಲ್ಲಿ ಕೋಮು ಸೌಹಾರ್ದತೆ ಮತ್ತು ಶಾಂತಿ ಸುವ್ಯವಸ್ಥೆಗೆ ಭಂಗ ತರುವ ಕಂಟೆಂಟ್‌ ಹೊಂದಿದ್ದವು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿದೆ.

ಅಗ್ನಿಪಥ ಯೋಜನೆ, ಭಾರತೀಯ ಸೇನೆ, ಕಾಶ್ಮೀರ ಸೇರಿದಂತೆ ದೇಶದ ಭದ್ರತೆಗೆ ಧಕ್ಕೆಯಾಗುವಂತೆ ಸುಳ್ಳು ಮಾಹಿತಿಗಳನ್ನು ನಿರ್ಬಂಧಿತ ವಿಡಿಯೋಗಳು ಪ್ರಸಾರ ಮಾಡುತ್ತಿದ್ದವು ಎಂದು ಸಚಿವಾಲಯ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next