Advertisement

Supreme Court ಚರಂಡಿ ಸ್ವಚ್ಛತೆ ವೇಳೆ ಮೃತಪಟ್ಟರೆ 30 ಲಕ್ಷ ರೂ. ಪರಿಹಾರ

12:54 AM Oct 21, 2023 | Team Udayavani |

ಹೊಸದಿಲ್ಲಿ: ದೀರ್ಘ‌ಕಾಲದಿಂದ ಅಮಾ ನವೀಯ ಸ್ಥಿತಿಯಲ್ಲಿ ಬದುಕುತ್ತಿರುವ ಮಲ ಹೊರುವವರ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಸರ್ವೋಚ್ಚ ನ್ಯಾಯಾ ಲಯ, ದೇಶದಿಂದ ಈ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಸೂಚಿಸಿದೆ.

Advertisement

ಮಲ ಹೊರುವ ಪದ್ಧತಿಯಲ್ಲಿ ತೊಡಗಿಸಿಕೊಂಡಿರುವವರ ಅನುಕೂಲಕ್ಕಾಗಿ ಹಲವು ನಿರ್ದೇಶನಗಳನ್ನು ನೀಡಿರುವ ಸುಪ್ರೀಂ ಕೋರ್ಟ್‌, ಚರಂಡಿ ಸ್ವಚ್ಛಗೊಳಿಸುವ ವೇಳೆ ಮೃತಪಟ್ಟವರ ಕುಟುಂಬಗಳಿಗೆ ತಲಾ 30 ಲಕ್ಷ ರೂ. ಪರಿಹಾರ ನೀಡುವಂತೆಯೂ ಆದೇಶಿಸಿದೆ.

ಮಲ ಹೊರುವ ಪದ್ಧತಿ ವಿರುದ್ಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿ ಶುಕ್ರವಾರ ತೀರ್ಪು ನೀಡಿದ ನ್ಯಾ| ಎಸ್‌.ರವೀಂದ್ರ ಭಟ್‌ ಮತ್ತು ನ್ಯಾ| ಅರವಿಂದ ಕುಮಾರ್‌ ಅವರನ್ನೊಳಗೊಂಡ ನ್ಯಾಯಪೀಠ, “ಚರಂಡಿ ಸ್ವಚ್ಛಗೊಳಿಸುವ ವೇಳೆ ಉಂಟಾದ ದುರಂತದಿಂದ ಗಾಯಗೊಂಡು ಶಾಶ್ವತವಾಗಿ ಅಸಮರ್ಥತೆ ಎದುರಿಸು ವವರಿಗೆ ಕನಿಷ್ಠ ಪರಿಹಾರವಾಗಿ ತಲಾ 20 ಲಕ್ಷ ರೂ.ಗಳನ್ನು ನೀಡಬೇಕು. ಬೇರೆ ರೀತಿಯ ಗಾಯಾಳುಗಳಿಗೆ ತಲಾ 10 ಲಕ್ಷ ರೂ.ವರೆಗೆ ಪರಿಹಾರ ಒದಗಿಸಬೇಕು. ಜತೆಗೆ ಮಲ ಹೊರುವ ಪದ್ಧತಿ ಸಂಪೂರ್ಣ ನಿರ್ಮೂಲನೆ ಆಗುವಂತೆ ಕೇಂದ್ರ, ರಾಜ್ಯ ಸರಕಾರಗಳು ನೋಡಿಕೊಳ್ಳಬೇಕು’ ಎಂದು ಹೇಳಿದೆ. ಈ ನಿಟ್ಟಿನಲ್ಲಿ ಒಟ್ಟು 14 ನಿರ್ದೇಶನಗಳನ್ನು ನ್ಯಾಯಪೀಠ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next