Advertisement

ಬ್ಲೂ ವೇಲ್‌ ಲಿಂಕ್‌ ತತ್‌ಕ್ಷಣ ತೆಗೆಯಲು ಕೇಂದ್ರ ಸರಕಾರದ ಆದೇಶ

12:01 PM Aug 15, 2017 | Team Udayavani |

ಹೊಸದಿಲ್ಲಿ : ಸಣ್ಣ ಪ್ರಾಯದವರನ್ನು ಬಲಿತೆಗೆದುಕೊಳ್ಳುತ್ತಿರುವ ಅತ್ಯಂತ ಅಪಾಯಕಾರಿ ಬ್ಲೂ ವೇಲ್‌ ಚ್ಯಾಲೆಂಜ್‌ ಆನ್‌ಲೈನ್‌ ಆಟದ ಲಿಂಕ್‌ ಅನ್ನು ಇಂಟರ್‌ನೆಟ್‌ನಿಂದ ಕೂಡಲೇ ತೆಗೆಯುವಂತೆ ಸರಕಾರ ಇಂಟರ್‌ನೆಟ್‌ ದಿಗ್ಗಜಗಳಾಗಿರುವ ಗೂಗಲ್‌, ಫೇಸ್‌ ಬುಕ್‌, ವಾಟ್ಸಾಪ್‌, ಇನ್‌ಸ್ಟಾಗ್ರಾಂ, ಮೈಕ್ರೋ ಸಾಫ್ಟ್ ಮತ್ತು ಯಾಹೂವನ್ನು ಕೇಳಿಕೊಂಡಿದೆ.

Advertisement

ಭಾರತದ ಸಹಿತ ಪ್ರಪಂಚದ ಹಲವು ದೇಶಗಳಲ್ಲಿ ಬ್ಲೂ ವೇಲ್‌ ಚ್ಯಾಲೆಂಜ್‌ ಆನ್‌ಲೈನ್‌ ಗೇಮ್‌ ಹಲವು ಬಾಲಕರನ್ನು ಬಲಿತೆಗೆದುಕೊಂಡಿದೆ. 

ಇಂಟರ್‌ನೆಟ್‌ನಿಂದ ಬ್ಲೂ ವೇಲ್‌ ಚ್ಯಾಲೆಂಜ್‌ ಲಿಂಕನ್ನು ಈ ಕೂಡಲೇ ತೆಗೆಯುವಂತೆ ಕಳೆದಆಗಸ್ಟ್‌ 11ರಂದೇ ಕೇಂದ್ರ ಸರಕಾರದ ಇಲೆಕ್ಟ್ರಾನಿಕ್ಸ್‌ ಮತ್ತು ಐಟಿ ಸಚಿವಾಲಯ ಪ್ರಮುಖ ಸಾಮಾಜಿಕ ಜಾಲ ತಾಣಗಳ ನಿರ್ವಾಹಕರು° ಕೇಳಿಕೊಂಡಿದೆ. 

ಕೇಂದ್ರ ಕಾನೂನು ಮತ್ತು ಐಟಿ ಸಚಿವ ರವಿ ಶಂಕರ್‌ ಪ್ರಸಾದ್‌ ಅವರ ಸೂಚನೆಯ ಮೇರೆಗೆ ಎಲ್ಲ ಆನ್‌ಲೈನ್‌ ಸಂಸ್ಥೆಗಳಿಗೆ ಪತ್ರವನ್ನು ಕಳುಹಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next