ಬೆಂಗಳೂರು: ಕೆಜಿ ಹಳ್ಳಿ ಡಿಜೆ ಹಳ್ಳಿ ಗಲಭೆ ಸಂಬಂಧ ಎಸ್ ಡಿಪಿಐ ಸಂಘಟನೆ ನಿಷೇಧಿಸಲು ಇನ್ನು ಸಾಕ್ಷಿ ಮತ್ತು ಮಾಹಿತಿಗಳ ಅಗತ್ಯವಿದ್ದು, ಪೊಲೀಸ್ ಇಲಾಖೆಯಿಂದ ಕೇಳಲಾಗಿದೆ. ಇದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದರು.
ಸಚಿವ ಸಂಪುಟ ಸಭೆಯ ನಂತರ ಮಾತನಾಡಿದ ಅವರು, ಸಭೆಯಲ್ಲಿ ಇದರ ಕುರಿತು ಚರ್ಚೆ ನಡೆಸಲಾಗಿದೆ. ಆದರೆ ಯಾವುದೇ ನಿರ್ದಿಷ್ಟ ತೀರ್ಮಾನಕ್ಕೆ ಬರಲಾಗಲಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಹೇಳಿದ್ದಾರೆ.
ಡಿಜೆ ಹಳ್ಳಿ ಗಲಭೆ, ಮಂಗಳೂರು ಗಲಭೆ, ತನ್ವೀರ್ ಸೇಠ್ ಮೇಲೆ ಮುಂತಾದ ಹಲ್ಲೆ ಮುಂತಾದ ಗಲಭೆಯಲ್ಲಿ ಸಂಘಟನೆಯ ಕೈವಾಡ ಬೆಳಕಿಗೆ ಬಂದಿದೆ. ಹಾಗಾಗಿ ಸಂಘಟನೆಯನ್ನು ನಿಷೇಧಿಸಬೇಕೆಂದು ಸಚಿವರಾದ ಆರ್ ಅಶೋಕ್ ಮತ್ತು ಸಿಟಿ ರವಿ ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: “ಮಿಸ್ಟರ್ ಕಮಿಷನರ್ ಬಿ ಕೇರ್ ಫುಲ್” ಗುಡುಗಿದ ಡಿ ಕೆ ಶಿವಕುಮಾರ್
ವಿಧಾನ ಮಂಡಲದ ಮುಂಗಾರು ಅಧಿವೇಶನವನ್ನು ಸಪ್ಟೆಂಬರ್ ತಿಂಗಳ 21ರಿಂಧ 30ರವರೆಗೆ ನಡೆಸಲು ಇದೇ ವೇಳೆ ತೀರ್ಮಾನಿಸಲಾಗಿದೆ.