ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿರುವ ಕಾರಣ ಈ ಬಾರಿಯ ಐಪಿಎಲ್ ಕೂಟವನ್ನು ಯುಎಇನಲ್ಲಿ ನಡೆಸಲು ಬಿಸಿಸಿಐ ಉದ್ದೇಶಿಸಿದ್ದು, ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಈ ಬಗ್ಗೆ ತಿಳಿಸಿದ್ದು, ಕೇಂದ್ರ ಸರ್ಕಾರ ಅಧಿಕೃತ ಒಪ್ಪಿಗೆ ಪತ್ರ ನೀಡಿದೆ ಎಂದು ಹೇಳಿದ್ದಾರೆ.
ಯುಎಇನ ಮೂರು ನಗರಗಳಾದ ಶಾರ್ಜಾ, ದುಬೈ ಮತ್ತು ಅಬುದಾಬಿಯಲ್ಲಿ ಈ ಬಾರಿಯ ಕೂಟ ಸಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ನಡೆಯಲಿದೆ.
ಈ ಮೊದಲು ಕೇಂದ್ರ ಸರ್ಕಾರದ ಐಪಿಎಲ್ ನಡೆಸಲು ಮೌಖಿಕ ಅನುಮತಿ ನೀಡಿದ್ದರು. ಹೀಗಾಗಿ ನಾವು ಯುಎಇ ಸರ್ಕಾರದ ಜೊತೆ ಮಾತುಕತೆ ನಡೆಸಿದ್ದೆವು. ಈಗ ಅಧಿಕೃತ ಪತ್ರವೂ ನಮ್ಮ ಕೈಸೇರಿದೆ ಎಂದು ಪಟೇಲ್ ಹೇಳಿದ್ದಾರೆ.
ಐಪಿಎಲ್ ನ ಅಲ್ಲಾ ತಂಡಗಳು ಆಗಸ್ಟ್ 20ರ ನಂತರ ದುಬೈಗೆ ಹಾರಲಿದೆ. ಪ್ರಯಾಣಕ್ಕಿಂತ 24 ಗಂಟೆ ಮೊದಲು ಪ್ರತಿಯೊಬ್ಬರೂ ಕೋವಿಡ್ ಟೆಸ್ಟ್ ಗೆ ಒಳಗಾಗಲಿದ್ದಾರೆ.