Advertisement
ಜಾರ್ಖಂಡ್‌ನ ಚೈಬಾಸಾದಲ್ಲಿ ವಿಜಯ ಸಂಕಲ್ಪ್ ಸಮಾವೇಶದಲ್ಲಿ ಮಾತನಾಡಿ,“ ಹೇಮಂತ್ ಸೊರೇನ್ ಸರ್ಕಾರ ಬುಡಕಟ್ಟು ವಿರೋಧಿಯಾಗಿದೆ. ಅವರ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರ ಉತ್ತುಂಗಕ್ಕೇರಿದ್ದು, ಮಧ್ಯವರ್ತಿಗಳು ಮತ್ತು ಬುಡಕಟ್ಟು ಜನಾಂಗದವರ ಭೂಮಿಯನ್ನು ಕಸಿದುಕೊಳ್ಳುವ ಸಮಯ ಬಂದಿದೆ ಎಂದು ಅಮಿತ್ ಶಾ ಉದ್ಯೋಗದ ಹೆಸರಿನಲ್ಲಿ ಬುಡಕಟ್ಟು ಜನಾಂಗದ ಯುವಕರನ್ನು ವಂಚಿಸಲಾಗಿದೆ”ಎಂದರು.
Related Articles
Advertisement
ನಕ್ಸಲ್ ಹಾವಳಿಯಿಂದ ಮುಕ್ತ
ಕಳೆದ ದಶಕದಲ್ಲಿ ನಕ್ಸಲೀಯರ ಹಿಂಸಾಚಾರ ಕಡಿಮೆಯಾಗಿದ್ದು, 2024ರ ಲೋಕಸಭೆ ಚುನಾವಣೆಗೂ ಮುನ್ನ ದೇಶವನ್ನು ನಕ್ಸಲ್ ಹಾವಳಿಯಿಂದ ಮುಕ್ತಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅಮಿತ್ ಶಾ ಶನಿವಾರ ಹೇಳಿದ್ದಾರೆ.
ಮಾವೋವಾದಿ ಹಿಂಸಾಚಾರದಿಂದ ಪೀಡಿತ ರಾಜ್ಯವಾದ ಛತ್ತೀಸ್‌ಗಢದ ಕೊರ್ಬಾ ನಗರದ ಇಂದಿರಾ ಕ್ರೀಡಾಂಗಣದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಮತ ಹಾಕುವಂತೆ ಬಿಜೆಪಿ ನಾಯಕ ಜನರನ್ನು ಒತ್ತಾಯಿಸಿದರು. 2024 ರಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ನೋಡಬೇಕಾದರೆ ಜನರು ಬಿಜೆಪಿಗೆ ಮತ ಹಾಕಬೇಕು ಎಂದರು. ಅಪರಾಧ ಮತ್ತು ಭ್ರಷ್ಟಾಚಾರದ ಏರಿಕೆಗೆ ಬಘೇಲ್ ಸರ್ಕಾರ ಕಾರಣ ಎಂದು ದೂಷಿಸಿದರು.