ಚನ್ನಪಟ್ಟಣ: ತಾಲೂಕಿನ ಕೂಡೂÉರು ಗ್ರಾಪಂ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾದ ಕೆ.ಎಂ.ಗೋವಿಂದೇಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಲೂಕಿನ ಕೂಡೂÉರು ಗ್ರಾಪಂನಲ್ಲಿ 16 ಸದಸ್ಯರ ಬಲವನ್ನು ಹೊಂದಿದ್ದು ಗ್ರಾಪಂ ಅಧ್ಯಕ್ಷರಾಗಿದ್ದ ಸಂತೆಮೊಗೇನಹಳ್ಳಿ ಕ್ಷೇತ್ರದ ಸಿ.ಗುಂಡಣ್ಣ ಅವರು 11 ತಿಂಗಳು ಕಾಲ ಆಡಳಿತ ನಡೆಸಿ, ಆಂತರಿಕ ಒಪ್ಪಂದದಂತೆ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಖಾಲಿ ಉಳಿದಿದ್ದ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಕೂಡೂರು ಕ್ಷೇತ್ರದ ಕೆ.ಎಂ. ಗೋವಿಂದೇಗೌಡ ಅವರು ನಾಮಪತ್ರ ಸಲ್ಲಿಸಿ ಕಣದಲ್ಲಿ ಉಳಿದಿದ್ದರು. ಅವರ ಪ್ರತಿಸ್ಪರ್ಧಿ ಯಾಗಿ ಯಾರೂ ಸ್ಪರ್ಧಿಸದ ಕಾರಣ ಚುನಾವಣಾಧಿ ಕಾರಿಗಳಾಗಿ ಕಾರ್ಯನಿರ್ವಹಿಸಿದ ಜಿಪಂ ಎಂಜಿನಿಯರಿಂಗ್ ಉಪ ವಿಭಾಗದ ಎಇಇ ಛತ್ರಪತಿ ಅವರು ಚುನಾವಣಾ ಪ್ರಕ್ರಿಯೆ ನಡೆಸಿ ಅಧ್ಯಕ್ಷರಾಗಿ ಗೋವಿಂದೇಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.
ಅಭಿವೃದ್ಧಿಗೆ ಶ್ರಮಿಸುವೆ: ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಂಚಾಯಿತಿ ಸಮಗ್ರ ಅಭಿವೃದ್ಧಿಗೆ ಹಾಗೂ ಸರ್ಕಾರ ಮತ್ತು ಗ್ರಾಪಂ ಅನು ದಾನವನ್ನು ಯಾವುದೇ ಪಕ್ಷಪಾತ ತಾರತಮ್ಯ ಮಾಡದೇ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಮತ್ತು ಓವರ್ ಹೆಡ್ ಟ್ಯಾಂಕ್ ನಿರ್ಮಾಣ, ನಿವೇಶನ, ಇತರೆ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ನೂತನ ಅಧ್ಯಕ್ಷ ಕೆ.ಎಂ. ಗೋವಿಂದೇಗೌಡ ಅವರು ತಿಳಿಸಿದರು.
ಅವಿರೋಧವಾಗಿ ಆಯ್ಕೆಯಾದ ಕೆ.ಎಂ. ಗೋವಿಂದೇಗೌಡ ಅವರನ್ನು ಗ್ರಾಪಂ ಉಪಾಧ್ಯಕ್ಷೆ ರಶ್ಮಿ, ಮಾಜಿ ಅಧ್ಯಕ್ಷ ಸಿ.ಗುಂಡಪ್ಪ, ಸದಸ್ಯರಾದ ಸಿ.ಚಂದ್ರರಾಜೇ ಅರಸು, ಭಾಗ್ಯ ಮ್ಮಣ್ಣಿ, ರಮ್ಯಾ, ಮಮತ, ಪುಷ್ಪಲತಾ, ನಂಜುಂಡ ರಾಜೇ ಅರಸು, ಜಿ.ಶ್ರುತಿ, ವೆಂಕಟೇಶ್ ಮೂರ್ತಿ, ಸವಿತ ಪಿ., ಮಂಜುಳ, ರಾಜಲಕ್ಷ್ಮಿ, ಶಿಲ್ಪಾ, ರೂಪಾ, ಭಾಗ್ಯಮ್ಮ, ಬಿಜೆಪಿ ಮುಖಂಡ, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಎನ್.ಆನಂದಸ್ವಾಮಿ, ಕುಡೂÉರು ವೆಂಕಟೇಶ್ ಸೇರಿ ದಂತೆ ಹಲವು ಮುಖಂಡರು ಅಭಿನಂದಿಸಿದರು.