Advertisement

ನಾಸಿಕ್ ಸಭೆಗೆ ಗೋವಿಂದ ಸರಸ್ವತಿ ಸ್ವಾಮಿ ತೆರಳಿದ್ದು ಸರಿಯಲ್ಲ:ಮಹಾಂತ ವಿದ್ಯಾದಾಸ

07:27 PM Jun 01, 2022 | Team Udayavani |

ಗಂಗಾವತಿ:ಮಹಾರಾಷ್ಟ್ರದ ನಾಸಿಕ್ ನಲ್ಲಿ ಜರುಗಿದ ಆಂಜನೆಯನ ಜನ್ಮಸ್ಥಳ ದೃಢಿಕರಣದ ಸಭೆಗೆ ಗೋವಿಂದ ಸರಸ್ವತಿ ಸ್ವಾಮೀಜಿ ತೆರಳಿದ್ದು ಸರಿಯಲ್ಲ. ಇದರಿಂದ ಕಿಷ್ಕಿಂದಾ ಅಂಜನಾದ್ರಿಯ ಗೌರವಕ್ಕೆ ಧಕ್ಕೆ ಬರುತ್ತದೆ. ಆದ್ದರಿಂದ ಕೂಡಲೇ ಕರ್ನಾಟಕ ಸರಕಾರ ಇಂತಹ ಸಭೆಗಳಿಗೆ ಗೋವಿಂದ ಸರಸ್ವತಿ ಸ್ವಾಮೀಜಿ ತೆರಳದಂತೆ ಸೂಚನೆ ನೀಡಬೇಕೆಂದು ಕಿಷ್ಕಿಂದಾ ಅಂಜನಾದ್ರಿಯ ಅರ್ಚಕ ಮಹಾಂತ ವಿದ್ಯಾದಾಸ ಬಾಬಾ ಸರಕಾರವನ್ನು ಒತ್ತಾಯಿಸಿದ್ದಾರೆ.

Advertisement

ಕಿಷ್ಕಿಂದಾ ಅಂಜನಾದ್ರಿಯಲ್ಲಿ ಹನುಮಂತ ಜನಿಸಿದ್ದರ ಕುರಿತು ವಾಲ್ಮೀಕಿ ರಾಮಾಯಣ ಸೇರಿ ಕಿಷ್ಕಿಂದಾ ಪ್ರದೇಶದಲ್ಲಿ ಹಲವಾರು ಕುರುಹುಗಳಿದ್ದು ರಾಜ್ಯ ಮತ್ತು ಕೇಂದ್ರ ಸರಕಾರಗಳು ಇದನ್ನು ದೃಢೀಕರಿಸಬೇಕಿದೆ. ತಿರುಪತಿ, ನಾಸೀಕ್ ಸೇರಿ ದೇಶದ ಹಲವು ಭಾಗದಲ್ಲಿ ಹನುಮಂತ ಜನಿಸಿದ್ದ ಎಂದು ಕೆಲವರು ಸಭೆಗಳನ್ನು ನಡೆಸುತ್ತಿದ್ದಾರೆ. ಆ ಸಭೆಗಳಿಗೆ ಗೋವಿಂದ ಸರಸ್ವತಿ ಸ್ವಾಮೀಜಿ ತೆರಳುತ್ತಿದ್ದಾರೆ. ಇಂತಹ ಸಭೆಗಳು ಅಧಿಕೃತವಲ್ಲ. ಆದರೂ ಇಂತಹ ಸಭೆಗಳಿಗೆ ಗೋವಿಂದ ಸರಸ್ವತಿ ಸ್ವಾಮೀಜಿ ತೆರಳಿ ಗೊಂದಲ ಮೂಡಿಸುತ್ತಿದ್ದಾರೆ. ಇದರಿಂದ ಕಿಷ್ಕಿಂದಾ ಅಂಜನಾದ್ರಿಯ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಮೂಡುತ್ತದೆ ಎಂದರು.

ಈಗಾಗಲೇ ಗೋವಿಂದ ಸರಸ್ವತಿ ಸ್ವಾಮೀಜಿ ಕಿಷ್ಕಿಂದಾ ಅಂಜನಾದ್ರಿ ಹತ್ತಿರ ಬೃಹತ್ ಗಾತ್ರದ ಆಂಜನೇಯನ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ ಎಂದು ರಥ ಯಾತ್ರೆ ನಡೆಸುತ್ತಿದ್ದಾರೆ.ಈಗ ತಿರುಪತಿ, ನಾಸೀಕ್ ಸಾಧು ಸಂತರು ಮತ್ತು ಪಂಡಿತರ ಅಧಿಕೃತ ಸಭೆಗಳಿಗೆ ಇವರು ತೆರಳಲು ಸರಕಾರದಿಂದ ಪರವಾನಿಗೆ ಪಡೆದು ಹೋಗಿದ್ದರ ಕುರಿತು ಗೋವಿಂದ ಸರಸ್ವತಿ ಕಿಷ್ಕಿಂದಾ ಅಂಜನಾದ್ರಿ ಭಕ್ತರಿಗೆ ವಿವರಣೆ ನೀಡಬೇಕು. ರಾಜ್ಯ ಸರಕಾರದ ಧಾರ್ಮಿಕ ದತ್ತಿ ಮುಜರಾಯಿ, ಕನ್ನಡ ಸಂಸ್ಕೃತಿ ಮತ್ತು ಪ್ರಾಚ್ಯವಸ್ತು ಪುರಾತತ್ವ ಇಲಾಖೆಯ ನೇತೃತ್ವದಲ್ಲಿ ಕಿಷ್ಕಿಂದಾ ಅಂಜನಾದ್ರಿಯಲ್ಲಿ ವಿದ್ವಾಂಸರು, ಧಾರ್ಮಿಕ ಮುಖಂಡರು, ಸಂಶೋಧಕರು ಸ್ಥಳೀಯರ ನೇತೃತ್ವದಲ್ಲಿ ಸಭೆ ನಡೆಸಿ ಕಿಷ್ಕಿಂದಾ ಅಂಜನಾದ್ರಿಯೇ ಹನುಮಂತನ ಜನ್ಮ ಭೂಮಿ ಎನ್ನುವುದನ್ನು ದೃಢಪಡಿಸಿ ಜಗತ್ತಿಗೆ ಸಾರಬೇಕಿದೆ ಎಂದು ಮಹಾಂತ ವಿದ್ಯಾದಾಸ ಬಾಬಾ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next