ಬೆಂಗಳೂರು: ರಾಷ್ಟ್ರಕವಿ ಎಂ.ಗೋವಿಂದಪೈ ಅವರು ಕರ್ನಾಟಕ ಮತ್ತು ಕೇರಳಗಳ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸುತ್ತಿದ್ದರು ಎಂದು ಹಿರಿಯ ಸಂಶೋಧಕ ಡಾ.ಹಂ.ಪ.ನಾಗರಾಜಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಂಘರ್ಷ ಸಮಿತಿ, ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ” ಗೋವಿಂದಪೈ ಅವರ 137ನೇ ಹುಟ್ಟು ಹಬ್ಬ’ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಸರಗೋಡು ಪ್ರದೇಶ ಕರ್ನಾಟಕಕ್ಕೆ ಸೇರಬೇಕೆಂದು ಗೋವಿಂದ ಪೈ ತವಕಪಡುತ್ತಿದ್ದರು ಎಂದು ಹೇಳಿದರು.
ಕೊಂಕಣಿ, ತುಳು, ಕನ್ನಡ ಈ ಮೂರೂ ಭಾಷೆ ನನಗೆ ತಾಯಿಯರು ಎಂದು ಹೇಳುತ್ತಿದ್ದರು. ಕನ್ನಡ ಬಗ್ಗೆ ಅಪಾರ ಒಲವು ಹೊಂದಿದ್ದ ಅವರನ್ನು ನೆನೆಯುವುದೆಂದರೆ ಕನ್ನಡ ಪರಂಪರೆಯ ಸ್ಮರಣೆ ಆಗಿದೆ ಎಂದು ಶ್ಲಾ ಸಿದರು.
ಬಿಎಂಶ್ರೀ ಪ್ರತಿಷ್ಠಾನದ ಮಾಜಿ ಅಧ್ಯಕ್ಷ ಡಾ.ಪಿ.ವಿ.ನಾರಾಯಣ ಮಾತನಾಡಿ, ಗೋವಿಂದ ಪೈ ಎಲ್ಲರನ್ನು ಪ್ರೀತಿಯಿಂದ ಕಾಣುತ್ತಿದ್ದರು.ಅವರಲ್ಲಿ ಜನರ ಮನಸ್ಸನ್ನು ಅರ್ಥಮಾಡಿಕೊಳ್ಳುವ ಉದಾತ್ತ ಗುಣವಿತ್ತು ಎಂದು ಸ್ಮರಿಸಿದರು.
ಕಸಾಪ ಮಾಜಿ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್,ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಪೊ›.ಎಂ.ಎಚ್.ಕೃಷ್ಣಯ್ಯ, ಕೋ.ವೆಂ.ರಾಮಕೃಷ್ಟೇಗೌಡ ಸೇರಿದಂತೆ ಇತರರಿದ್ದರು. ಇದೇ ವೇಳೆ ಕವನ ರಚನಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.