Advertisement

ಛತ್ರಪತಿ ಶಿವಾಜಿ ಕರ್ನಾಟಕದ ಹೊಯ್ಸಳ ವಂಶಸ್ಥ :ಡಿಸಿಎಂ ಕಾರಜೋಳ

07:45 PM Mar 02, 2021 | Team Udayavani |

ವಿಜಯಪುರ : ಛತ್ರಪತಿ ಶಿವಾಜಿ ಕರ್ನಾಟಕದ ಮೂಲದ ಕನ್ನಡದ ಶೂರ ಅರಸರಾಗಿದ್ದರು. ಇತಿಹಾಸದ ಆಳಕ್ಕೆ ಇಳಿದರೆ ಶಿವಾಜಿ ಕರ್ನಾಟಕದ ಹೊಯ್ಸಳ ವಂಶಸ್ಥರು ಎಂಬ ಸತ್ಯ ಹೊರ ಬೀಳುತ್ತದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

Advertisement

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮಿತ್ರ ಮಂಡಳಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ವೃತ್ತ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಶಿವಾಜಿ ಜನಿಸದೇ ಇದ್ದಿದ್ದರೆ ಭಾರತದಲ್ಲಿ ಹಿಂದೂ ಧರ್ಮ ಎಂಬುದೇ ಅಸ್ತಿತ್ವದಲ್ಲಿ ಇರುತ್ತಿರಲಿಲ್ಲ. ಶಿವಾಜಿ ಮಹಾರಾಜರ ಹೆಸರು ದೇಶದ 130 ಕೋಟಿ ಜನಸಂಖ್ಯೆಗೆ ಅರಿಯುವ ಅವಗತ್ಯವಿದ್ದು, ಇದಕ್ಕಾಗಿ ದೇಶಾದ್ಯಂತ ಕಾರ್ಯಕ್ರಮ ಆಯೋಜಿಸಬೇಕು ಎಂದರು.

ಶಿವಾಜಿ ಮಹಾರಾಜರು ಕನ್ನಡಿಗರು, ಜೊತೆಗೆ ಕರ್ನಾಟಕದಲ್ಲಿರುವ ಮರಾಠಾ ಜಾತಿಯ ಜನರೂ ಕನ್ನಡಿಗರೇ ಆಗಿದ್ದಾರೆ. ಶಿವಾಜಿ ಮಹಾರಾಜರು ತಮಗಾಗಿ ಸಾಮ್ರಾಜ್ಯ ಕಟ್ಟಲಿಲ್ಲ. ದೇಶ ರಕ್ಷಣೆಗಾಗಿ, ಹಿಂದು ಧರ್ಮದ ರಕ್ಷಣೆಗಾಗಿ ಸಾಮ್ರಾಜ್ಯ ಕಟ್ಟಿದ ಮಹತ್ವಕಾಂಕ್ಷೆಯ ಅರಸರಾಗಿದ್ದರು ಎಂದು ಬಣ್ಣಿಸಿದರು.

ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ಭಾರತ ದೇಶದಲ್ಲಿ ಹಿಂದೂ ಧರ್ಮದ ರಕ್ಷಣೆಗಾಗಿ ಮೂರು ಜನಾಂಗದವರ ಕೊಡುಗೆ ಅತ್ಯಮೂಲ್ಯವಾಗಿದೆ. ಮರಾಠಾರು, ಶಿಖ್ಖರು ಹಾಗೂ ರಜಪೂತರು ಹಿಂದು ಧರ್ಮವನ್ನು ಮುಸಲ್ಮಾನರ ದಬ್ಬಾಳಿಕೆಯಿಂದ ಉಳಿಸಿದರು. ಹೀಗಾಗಿ ಇಂತಹ ಸಮುದಾಯಗಳ ಅಭಿವೃದ್ಧಿಗಾಗಿ ಪ್ರತಿಯೊಬ್ಬರೂ ಬೆನ್ನೆಲುಬಾಗಿ ನಿಲ್ಲಬೇಕಿದೆ ಎಂದರು.

ಇದನ್ನೂ ಓದಿ :2027ಕ್ಕೆ ಬಾಹ್ಯಾಕಾಶದಲ್ಲಿ ನಿರ್ಮಾಣವಾಗಲಿದೆ ತೇಲುವ ರೆಸಾರ್ಟ್‌!

Advertisement

ಕಾಖಂಡಕಿಯ ಗುರುದೇವಾಶ್ರಮದ ಸಂದೀಪ ಮಹೋದಯರು, ಹಿರೇಮಠದ ಸಿದ್ದರಾಮಯ್ಯಶ್ರೀ ಸಾನ್ನಿಧ್ಯ ವಹಿಸಿದ್ದರು. ಗ್ರಾಮದ ಹಿರಿಯ ರಾಮನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಯುವ ಧುರೀಣ ಗುರುಲಿಂಗಪ್ಪ ಅಂಗಡಿ, ಅಪ್ಪುಗೌಡ ಪಾಟೀಲ, ಅರ್ಜುನ ದೇವಕ್ಕಿ, ಕಾಖಂಡಕಿ ಗ್ರಾ.ಪಂ. ಅಧ್ಯಕ್ಷ ಜಾನುಬಾ ಸಿಂಧೆ, ಜಿ.ಪಂ. ಮಾಜಿ ಸದಸ್ಯ ಮುತ್ತಪ್ಪ ಶಿವನ್ನವರ, ಮರಾಠಾ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ವಿಜಯಕುಮಾರ ಚವ್ಹಾಣ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಜಿಲ್ಲಾಧ್ಯಕ್ಷ ಭೀಮಾಶಂಕರ ಶಿವಾಳಕರ, ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ವಿಜಯಕುಮಾರ ಘಾಟಗೆ, ಬಿ.ಟಿ.ತರಸೆ, ಸುಭಾಶ ವಿಕ್ರಮ, ಜ್ಯೋತಿಬಾ ಮೋರೆ, ವಿಜಯಪುರ ತಾಲೂಕು ಮರಾಠಾ ಸಮಾಜದ ಅಧ್ಯಕ್ಷ ರಾಮು ಜಾಧವ, ಕೃಷ್ಣ ಜಾಧವ ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ತಹಶೀಲ್ದಾರರಾಗಿ ಆಯ್ಕೆಯಾಗಿರುವ ಕಾಖಂಡಕಿ ಗ್ರಾಮದವರಾದ ಆರ್ ಕವಿತಾ ಅವರನ್ನು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ, ಗುದೇವಾಶ್ರಮದ ಸಂದೀಪ ಮಹೋದಯ, ಸಮಾಜದ ಮುಖಂಡ ರಾಮು ಜಾಧವ ಸನ್ಮಾನಿಸಿ ಗೌರವಿಸಿದರು.

ಇದಕ್ಕೂ ಮೊದಲು ಕಾಖಂಡಕಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ನಿಯೋಜಿತ ವೃತ್ತದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಮತ್ತಿತರರು ಭೂಮಿ ಪೂಜೆ ನೆರವೇರಿಸಿದರು.
ವಸಂತ ಜಗತಾಪ ಸ್ವಾಗತಿಸಿದರೆ, ಅಡವಯ್ಯ ಹಿರೇಮಠ ನಿರೂಪಿಸಿದರು. ಸುರೇಶ ಗೌಡಪ್ಪಗೋಳ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next