Advertisement

ಹುಂಬರಿಂದ ಪ್ರಚೋದಿಸುವ ಕೆಲಸ: ಗೋವಿಂದ ಕಾರಜೋಳ

10:29 PM Dec 14, 2022 | Team Udayavani |

ಬೆಂಗಳೂರು: ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು, “ರಾಜ್ಯಗಳ ಪುನರ್‌ವಿಂಗಡಣಾ ಕಾಯ್ದೆ ಪಾರ್ಲಿಮೆಂಟ್‌ನಲ್ಲಿ ಪಾಸ್‌ ಆದ ಮೇಲೆ ಅದು ಎಲ್ಲರಿಗೂ ಅನ್ವಯವಾಗುತ್ತದೆ. ಆದರೆ, ಕಾನೂನು ಮತ್ತು ವ್ಯವಹಾರ ಜ್ಞಾನವಿಲ್ಲದ ಕೆಲ ಹುಂಬರು ಹಾಗೂ ಪುಂಡರು ಮುಂಬೈನಲ್ಲಿ ಕುಳಿತು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳು ಕಟುವಾಗಿ ಹೇಳಿದ್ದಾರೆ.

Advertisement

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಗಳ ಪುನರ್‌ ವಿಂಗಡಣಾ ಕಾಯ್ದೆ ಒಪ್ಪಿದ ಮೇಲೆ ಸೌಹಾರ್ದತೆಯಿಂದ ಬದುಕುವುದು ಎಲ್ಲರ ಜವಾಬ್ದಾರಿ ಮತ್ತು ಕರ್ತವ್ಯ. ಇದು ಮಹಾರಾಷ್ಟ್ರ ಮತ್ತು ಕರ್ನಾಟಕ ಎರಡಕ್ಕೂ ಅನ್ವಯವಾಗುತ್ತದೆ. ಹೀಗಿದ್ದೂ ಮಹಾರಾಷ್ಟ್ರ ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿದೆ. ಇದು ಅವರ ಮನಸ್ಥಿತಿ ಸರಿಯಲ್ಲ ಮತ್ತು ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಪದೇ ಪದೇ ಕೆಲವರು ನಾಟಕ ಮಾಡುತ್ತಾರೆ. ಈ ಹುಂಬತನ ಮತ್ತು ಪ್ರಚೋದನೆ ಸಂವಿಧಾನವಿರೋಧಿ ಎಂದರು.

ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು, ಮಹಾರಾಷ್ಟ್ರಕ್ಕೆ ಹೋಗುತ್ತೇವೆ ಎಂದು ಅಲ್ಲಿನ ಜನ ಯಾರೂ ಹೇಳುತ್ತಿಲ್ಲ. ಮುಂಬೈನಲ್ಲಿ ಕುಳಿತ ಕೆಲ ಪುಂಡರು ಆ ಕೆಲಸ ಮಾಡುತ್ತಿದ್ದಾರೆ ಎಂದು ಕಾರಜೋಳ ತೀಕ್ಷ್ಣಣವಾಗಿ ನುಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next