ಹುಬ್ಬಳ್ಳಿ: ರಾಜ್ಯದಲ್ಲಿ ಸಂವಿಧಾನತ್ಮಕಾಗಿ ರಚನೆಯಾದ ಸರ್ಕಾರ ಇದೆಯೋ ಇಲ್ಲವೋ ಅನ್ನುವ ಸಂಶಯವಿದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ರಾಜ್ಯಕ್ಕೆ ಆಗಮಿಸಿದ್ದ ಸಂಸದ ಜಗದಂಬಿಕಾ ಪಾಲ್ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿಯಾವದರು. ಅವರ ಬಗ್ಗೆ ಸಿಎಂ, ಡಿಸಿಎಂ ಸೇರಿ ಅನೇಕರು ಹಗುರವಾಗಿ ಮಾತನಾಡಿದ್ದಾರೆ. ಅವರು ಜೆಪಿಸಿ ಅಧ್ಯಕ್ಷರಾಗಿ ಬಂದಿದ್ದರು. ಸಿದ್ದರಾಮಯ್ಯ ಸರ್ಕಾರಕ್ಕೆ ಸಂವಿಧಾದನ ಮೇಲೆ ಗೌರವ ಇಲ್ಲ. ಇದನ್ನು ನಾನು ಖಂಡಿಸುತ್ತೇನೆ ಎಂದರು.
ಜೆಪಿಸಿ ಅಧ್ಯಕ್ಷರು ಬಂದಾಗ ಒಂದು ಪ್ರೋಟೋಕಾಲ್ ಇರುತ್ತದೆ. ಇಲ್ಲಿ ಯಾವ ಪ್ರೋಟೋಕಾಲ್ ಇರಲಿಲ್ಲ. ಜೆಪಿಸಿ ಬಂದಾಗ ಎಸ್‌ಪಿ, ಡಿಸಿ ಎಲ್ಲರೂ ಬರಬೇಕು. ಅದನ್ನು ಬಿಟ್ಟು ಪ್ರೋಟೋಕಾಲ್ ಪಾಲನೆ ಮಾಡದೆ ಅಗೌರವ ತೋರಿದ್ದಾರೆ ಎಂದರು.
ಸಿಎಂ ಸಿದ್ದರಾಮಯ್ಯ ಸರ್ಕಾರ ಹಗರಣದಲ್ಲಿ ಮುಳುಗಿದೆ. ರಾಜ್ಯ ಆರ್ಥಿಕ ದಿವಾಳಿಯಾಗಿದೆ. 25ಸಾವಿರ ಕೋಟಿ ರೂ. ಎಸ್‌ಸಿ, ಎಸ್‌ಟಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ವಾಲ್ಮೀಕಿ ಹಗರಣದ ದುಡ್ಡು ಲೋಕಸಭೆ ಚುನಾವಣೆಗೆ ಬಳಕೆ ಮಾಡಿಕೊಂಡಿದ್ದಾರೆ. ಇವತ್ತು ಉಪಚುನಾವಣೆಗೆ ಅದೇ ಹಣ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಂಡೂರಿನ ಜನ ಮಾತನಾಡುತ್ತಿದ್ದಾರೆ ಎಂದರು.
ಬೆಳಗಾವಿಯಲ್ಲಿ ಎಸ್‌ಡಿಎ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್‌ನೋಟ್‌ನಲ್ಲಿ ಸಚಿವರ ಆಪ್ತರ ಹೆಸರು ಬರೆದಿದ್ದಾರೆ. ಕಾರಣ ಸಿಎಂ ಸಿದ್ದರಾಮಯ್ಯ ಸಚಿವರ ರಾಜೀನಾಮೆ ಪಡೆಯಬೇಕು. ಅವರ ಮೇಲೆ ಎಫ್‌ಐಆರ್ ದಾಖಲು ಮಾಡಬೇಕು. ಹಿಂದೆ ಈಶ್ವರಪ್ಪ ಹೆಸರು ಬಂದಾಗ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದ ಸಿದ್ದರಾಮಯ್ಯ ಇವಾಗ ಯಾಕೆ ರಾಜೀನಾಮೆ ಪಡೆಯುತ್ತಿಲ್ಲ ಎಂದು ಹರಿಹಾಯ್ದರು.
ಸಿದ್ದರಾಮಯ್ಯ ಸರ್ಕಾರ ಅಲ್ಪಾವಧಿ ಸರ್ಕಾರವಾಗಿದ್ದು, ಬಹಳ ದಿನ ಇರಲ್ಲ ಎಂದರು.
ಇದನ್ನೂ ಓದಿ: Charmadi Ghat ಹೆದ್ದಾರಿ ದ್ವಿಪಥಗೊಳಿಸಲು 343.74 ಕೋಟಿ ರೂ. ಬಿಡುಗಡೆ: ಸಂಸದ ಕ್ಯಾ. ಚೌಟ