Advertisement
ಕಳೆದ ವರ್ಷ ನವೆಂಬರ್‌ನಲ್ಲಿ ಜಾರಿಗೆ ಬಂದ ಅಬಕಾರಿ ನೀತಿಯನ್ನು, ಉನ್ನತ ಮಟ್ಟದ ರಾಜಕಾರಣಿಗಳಿಗೆ ಉಪ ಯೋಗ ವಾಗುವಂತೆ ರೂಪಿಸಿಕೊಳ್ಳಲಾಗಿದೆ. ಖಾಸಗಿ ಮದ್ಯ ಮಾರಾಟ ಗಾರರಿಗೆ ಲಾಭ ಮಾಡಿ ಕೊಡುವ ಮೂಲಕ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೂ ಲಾಭವಾಗುವಂತೆ ಮಾಡಲಾಗಿದೆ.
ಲೆ.ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರ ನಿರ್ಧಾರ ವನ್ನು ಬಿಜೆಪಿ ಸ್ವಾಗತಿಸಿದೆ. “ಸುಳ್ಳುಗಾರ ಸಿಎಂ ಈಗ ವಂಚಕರಾಗಿಯೂ ಕಾಣಿಸಿಕೊಂಡಿದ್ದಾರೆ’ ಎಂದು ದಿಲ್ಲಿ ಬಿಜೆಪಿ ಸಂಸದ ಗೌತಮ್ ಗಂಭೀರ್ ಹೇಳಿದ್ದಾರೆ. ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಕೂಡ ಮಾತನಾಡಿದ್ದು, “ನೂತನ ಅಬಕಾರಿ ನೀತಿಯು ದಿಲ್ಲಿಯ ಜನರಿಗೆ ಮಾಡುತ್ತಿರುವ ಮೋಸ’ ಎಂದಿದ್ದಾರೆ.
Related Articles
ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ದಿಲ್ಲಿ ಸಿಎಂ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಅವರ ಪರವಾಗಿ ಬ್ಯಾಟ್ ಬೀಸಿದ್ದಾರೆ. “”ನಾನು ಈವರೆಗೆ ಕಂಡ ಅತ್ಯಂತ ಪ್ರಾಮಾಣಿಕ ವ್ಯಕ್ತಿಯೆಂದರೆ ಅದು ಸಿಸೋಡಿಯಾ ಮಾತ್ರ” ಎಂದು ತಿಳಿಸಿದರು. ಬಾರ್‌ಗಳ ಲೈಸನ್ಸ್ ನೀಡುವಿಕೆಯಲ್ಲಿ ಮನೀಶ್ ಸಿಸೋಡಿಯಾ ಅವರು ಲಂಚ ಪಡೆದಿದ್ದಾರೆ ಎಂದು ಲೆ. ಗವರ್ನರ್ ಅವರು ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಅವರು, ಈಗಾಗಲೇ ಸತ್ಯೇಂದ್ರ ಜೈನ್ ಅವರನ್ನು ಜೈಲಿಗೆ ಕಳುಹಿಸುವ ಮೂಲಕ ಆಮ್ ಆದ್ಮಿ ಪಕ್ಷಕ್ಕೆ ಕೆಟ್ಟ ಹೆಸರು ತರಲು ಯತ್ನಿಸಿದ್ದೀರಿ. ಈಗ ಸಿಸೋಡಿಯಾ ಅವರನ್ನೂ ಜೈಲಿಗೆ ಕಳುಹಿಸಲು ಹುನ್ನಾರ ಮಾಡಿದ್ದೀರಿ” ಎಂದು ಹೇಳಿದ್ದಾರೆ.
Advertisement