Advertisement
ಪಟ್ಟಣದ ಪಾರಿವಾಟಗುಟ್ಟದಲ್ಲಿನ ದಕ್ಷಿಣ ಭಾರತದ ಅತೀ ದೊಡ್ಡ ಶ್ರೀ ಸ್ಥೂಲ ಭದ್ರ ಜೈನ ತೀರ್ಥಧಾಮದಲ್ಲಿ ಹಮ್ಮಿ ಕೊಂಡಿದ್ದ ಸ್ಥೂಲಭದ್ರ ಸುರೀಶ್ವರ್ ಜಿ ಮಹಾರಾಜ್ ಅವರ 19ನೇ ಪುಣ್ಯಸ್ಮರಣೆ ಹಾಗೂ ಚಂದ್ರ ಹಿಲ್ಸ್ ಅಂತಾರಾಷ್ಟ್ರೀಯ ಶಾಲೆ ಯೋಜನೆಯನ್ನು ಉದ್ಘಾಟಿಸಿ ಮಾತ ನಾಡಿ, ಆಧುನಿಕ ಜ್ಞಾನವನ್ನು ಮೌಲ್ಯಗ ಳೊಂದಿಗೆ ಸಂಯೋಜಿಸುವ ಮೂಲಕ ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕು. ಅದು ಜಗತ್ತಿಗೆ ಹೊಸ ದಿಕ್ಕನ್ನು ನೀಡುವುದಲ್ಲದೆ ಇಡೀ ಮಾನವಕುಲಕ್ಕೆ ಪ್ರಯೋಜನವನ್ನು ನೀಡುತ್ತದೆ. ಧರ್ಮ, ಸಂಸ್ಕೃತಿ ಮತ್ತು ಸಂಸ್ಕಾರಗಳ ಜ್ಞಾನವು ಮಾನವೀಯ, ಸದ್ಗುಣ, ಉತ್ತಮ ಚಿಂತನೆಗಳು ಮತ್ತು ಪರೋಪಕಾರಿ ಶಿಕ್ಷಣದೊಂದಿಗೆ ಬರುತ್ತದೆ ಎಂದರು. ದೇವನಹಳ್ಳಿಯ ಪುಣ್ಯ ಕ್ಷೇತ್ರದಲ್ಲಿ ಶ್ರೀ ಸಿದ್ಧಾಚಲ ಸ್ಥೂಲಭದ್ರ ಧಾಮ ಗಿರಿಮಾಲವು ಅದ್ಭುತವಾದ ಕರಕುಶಲ ಕಲೆಯಾಗಿದೆ. ದಕ್ಷಿಣ ಕೇಶರಿ ಆಚಾರ್ಯ ಶ್ರೀ ಸ್ಥೂಲಭದ್ರ ಸೂರೀಶ್ವರ್‌ಜಿ ಮಹಾರಾಜ್ ಸಾಹೇಬರ ಆಶೀರ್ವಾದ ಮತ್ತು ನಿಮ್ಮ ಶಿಷ್ಯರಾದ ಆಚಾರ್ಯ ಶ್ರೀ ಚಂದ್ರಾಯಶ ಸೂರೀಶ್ವರ್‌ಜಿ ಮಹಾರಾಜ್ ಸಾಹೇಬರ ಮಹಾನ್ ದೃಷ್ಟಿ ಮತ್ತು ದಿವ್ಯ ಚಿಂತನೆಯ ಪ್ರಭಾವದಿಂದ ಜಿನಾಲಯಗಳ ದರ್ಶನ ಮತ್ತು ತೀರ್ಥಯಾತ್ರೆ ನಡೆಯುತ್ತಿವೆ ಎಂದರು.
Related Articles
Advertisement
ಆಚಾರ್ಯ ಶ್ರೀ ಸ್ಥೂಲಭದ್ರ ಸುರೀಶ್ವರ್ ಸ್ವಾಮಿಜೀ 19ನೇ ಪುಣ್ಯತಿಥಿ ಕಾರ್ಯಕ್ರಮ ಮತ್ತು ಚಂದ್ರ ಹಿಲ್ಸ್ ಅಂತಾರಾಷ್ಟ್ರೀಯ ಶಾಲೆಯ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು. ಪರಮ ಪೂಜ್ಯ ಜೈನ ಆಚಾರ್ಯ ಶ್ರೀ ಚಂದ್ರಯೇಶ ಸೂರೀಶ್ವರ್ ಜಿ ಮಹಾರಾಜ್, ಪ್ರಧಾನ ಟ್ರಸ್ಟಿ ಶ್ರೀ ಪ್ರಕಾಶ್ ಜಿ ಕೊಠಾರಿ, ಶ್ರೀ ಇಂದರಚಂದ್ ಜಿ ಬೋಹ್ರಾ, ಶ್ರೀ ಧರ್ಮಿಚಂದ್ ಜಿ ಧೋಕಾ, ಚಿಕ್ಕಪೇಟೆ ಒಕ್ಕೂಟದ ಅಧ್ಯಕ್ಷ ಗೌತಮ್ ಸೋಲಂಕಿ ಹಾಗೂ ಮತ್ತಿತರರು ಇದ್ದರು.