Advertisement

ವಿಶ್ವ ಕಲ್ಯಾಣಕ್ಕೆ ಯುವಜನರು ಸಜ್ಜಾಗಲಿ: ವಿಶ್ವ ಸಾಂಸ್ಕೃತಿಕ ಜಾಂಬೂರಿಗೆ ರಾಜ್ಯಪಾಲರಿಂದ ಚಾಲನೆ

12:59 AM Dec 22, 2022 | Team Udayavani |

ಮೂಡುಬಿದಿರೆ: ವಿಶ್ವ ಕಲ್ಯಾಣ ಮತ್ತು ವಿಶ್ವ ಶಾಂತಿಯ ಸಂದೇಶದೊಂದಿಗೆ ಭಾರತವು ವಿಶ್ವದಲ್ಲೇ ಅಪೂರ್ವ ಸ್ಥಾನ ಪಡೆ ಯುತ್ತಿದೆ. ಇದೇ ಸಂಕಲ್ಪ ಹೊಂದಿರುವ ಸ್ಕೌಟ್ಸ್‌ ಚಳವಳಿಯಲ್ಲಿ ಭಾಗಿಯಾಗುವ ಮುಖೇನ ಯುವಜನತೆ ದೇಶದ ಗೌರವ ಹೆಚ್ಚಿಸಬೇಕು ಎಂದು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್ ಹೇಳಿದ್ದಾರೆ.

Advertisement

ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿದ್ಯಾಗಿರಿ ಯಲ್ಲಿ ಹಮ್ಮಿಕೊಂಡಿರುವ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ -2022ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶಕ್ಕೆ ಗೌರವ
“ವಸುಧೈವ ಕುಟುಂಬಕಂ’ ಎಂಬ ನಮ್ಮ ನೆಲದ ನಂಬಿಕೆಗೆ ಪೂರಕವಾಗಿ ಜಿ20 ದೇಶಗಳ ಸಮಾವೇಶ ಮುಂದಿನ ವರ್ಷ ನಮ್ಮ ದೇಶದ ಆತಿಥ್ಯದಲ್ಲಿ ನಡೆಯುತ್ತಿರುವುದು ನಮಗೆ ಸಂದ ಗೌರವ. ವಿಶ್ವಶಾಂತಿ, ವಿಶ್ವ ಕಲ್ಯಾಣದ ನಮ್ಮ ಅಚಲ ನಿಲುವಿಗೆ ಪೂರಕ ಎಂದರು.

ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ದೊಡ್ಡದು. ನಾನು, ನನ್ನ ಕುಟುಂಬ ದೇಶದ ಹಿತರಕ್ಷಣೆ ಮತ್ತು ಬೆಳ ವಣಿಗೆಯ ಪ್ರಕ್ರಿಯೆಯಲ್ಲಿ ಹೇಗೆ ತೊಡಗಿಸಿಕೊಳ್ಳ ಬಹುದು ಎಂದು ಆಲೋಚಿಸಿ ಮುಂದಡಿ ಇಡ ಬೇಕು. ಹೀಗೆ ಯೋಚಿಸಿದಾಗಸ್ವಾತಂತ್ರ್ಯದ ನೂರನೇ ವರ್ಷಾಚರಣೆ ವೇಳೆ ಭಾರತ ವನ್ನು ಮತ್ತಷ್ಟು ಪ್ರಭಾವಿ ರಾಷ್ಟ್ರವನ್ನಾಗಿ ರೂಪಿಸಬಹುದು ಎಂದು ತಿಳಿಸಿದರು.

ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿಶ್ವದ ಅತೀ ದೊಡ್ಡ ಸಂಘಟನೆಯಾಗಿ ವ್ಯಕ್ತಿತ್ವ ವಿಕಸನ ಹಾಗೂ ಸೇವೆಯ ಮೂಲಕ ಗಮನಾರ್ಹ ಕಾರ್ಯ ಮಾಡುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಮೇಳಗಳ ಮೂಲಕ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಯುವ ಸಮೂಹ ವನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ. 7 ದಿನಗಳ ಕಾಲ ಮೂಡುಬಿದಿರೆಯಲ್ಲಿ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿಯುವಂಥ ಕಾರ್ಯಕ್ರಮಗಳು ನಡೆಯಲಿವೆ. ಇವು ಹೊಸ ಅರಿವು ಮೂಡಿಸಲಿ ಎಂದು ಆಶಯ ವ್ಯಕ್ತಪಡಿಸಿದರು.

Advertisement

ರಾಜ್ಯದಲ್ಲಿ 6.5 ಲಕ್ಷ ಸ್ಕೌಟ್‌ಗಳಿದ್ದು ಸಮಾಜದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕೊಡುಗೆ ನೀಡುತ್ತಾ ಬಂದಿದ್ದಾರೆ. ಕೋವಿಡ್‌ ಮಹಾ ಮಾರಿಯ ಸಂದರ್ಭ ಮಾಡಿರುವ ಸೇವೆ ಸ್ಮರಣೀಯ ಎಂದು ಹೇಳಿದರು.

ನಿತ್ಯವೂ ಜಾಂಬೂರಿ
ಮೊದಲ ಬಾರಿಗೆ ಭಾರತದಲ್ಲಿ ವಿಶ್ವ ಸಾಂಸ್ಕೃತಿಕ ಜಾಂಬೂರಿ ಆಗುತ್ತಿದೆ. ಭಾರತ ವೈವಿಧ್ಯತೆಯಲ್ಲಿ ಏಕತೆಯಿರುವ ದೇಶವಾದ್ದರಿಂದ ಇಲ್ಲಿ ನಿತ್ಯವೂ ಜಾಂಬೂರಿ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ವಿಶ್ವ ಸ್ಕೌಟ್‌ನ ಮಹಾ ಕಾರ್ಯದರ್ಶಿ ಅಹಮದ್‌ ಅಲ್‌ಹಂದಾವಿ, ವಿಶ್ವದ 70 ದಶಲಕ್ಷ ಇರುವ ಸ್ಕೌಟ್ಸ್‌ ಕುಟುಂಬಕ್ಕೆ ಇಲ್ಲಿರುವ ಪ್ರತಿನಿಧಿಗಳೂ ಸದಸ್ಯರು ಎನ್ನುವುದು ಹೆಮ್ಮೆ. ಇಡೀ ವಿಶ್ವವೇ ಭಾರತದ ಯುವ ಶಕ್ತಿಯತ್ತ ಗಮನ ನೆಟ್ಟಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next