Advertisement

ನಾಗಾಲ್ಯಾಂಡ್‌ ರಾಜ್ಯಪಾಲರು ಉಡುಪಿಯಲ್ಲಿ ಜನಸಾಮಾನ್ಯ

11:18 AM Jan 02, 2018 | Team Udayavani |

ಉಡುಪಿ: ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕಾಗಿ ಕರಾವಳಿಗೆ ಆಗಮಿಸಿರುವ ನಾಗಾಲ್ಯಾಂಡ್‌ ರಾಜ್ಯಪಾಲ, ಉಡುಪಿ ಮೂಲದ ಪದ್ಮನಾಭ ಬಾಲಕೃಷ್ಣ ಆಚಾರ್ಯ ಅವರು ಸೋಮವಾರ ಉಡುಪಿ ರಥಬೀದಿಯಲ್ಲಿ ಯಾತ್ರಿಕರಿಗಾಗಿ ಅಳವಡಿಸಿರುವ ಆಸನಗಳಲ್ಲೊಂದರಲ್ಲಿ ಪತ್ನಿ ಜತೆ ಆಸೀನರಾಗಿ ತನ್ನ ಬಾಲ್ಯದ ದಿನಗಳನ್ನು ಸ್ಮರಿಸಿಕೊಂಡರು.

Advertisement

ರಾಜ್ಯಪಾಲ ಆಚಾರ್ಯರಿಗೆ ಮಂಗಳೂರು, ಮಣಿಪಾಲ, ಉಡುಪಿಯಲ್ಲಿ ನಿಗದಿತ ಕಾರ್ಯಕ್ರಮಗಳಿವೆ. ಇದಕ್ಕಾಗಿ ಆಗಮಿಸಿರುವ ರಾಜ್ಯಪಾಲರು ಮಧ್ಯಾಹ್ನ ಹೊಟೇಲ್‌ ಒಂದಕ್ಕೆ ಊಟಕ್ಕಾಗಿ ತೆರಳುವ ಸಂದರ್ಭದಲ್ಲಿ ರಥಬೀದಿಗೆ ಸಾಗಿ ಅಲ್ಲಿ ಆಸೀನರಾದರು. ಅಲ್ಲಿ ತಾಳಿಬೊಂಡ ಸವಿದರು. ಅಬ್ಬಲಿಗೆ ಹೂವು, ಮಟ್ಟಿಗುಳ್ಳ ಖರೀದಿಸಿದರು. ಸುಮಾರು ಒಂದೂವರೆ ತಾಸು ಅಲ್ಲಿ ಕಳೆದ ಸಂದರ್ಭದಲ್ಲಿ ಹಲವು ಪರಿಚಿತರು ಅವರನ್ನು ಗುರುತು ಹಿಡಿದು ಮಾತನಾಡಿಸಿದರು. ಸರಕಾರಿ ಅತಿಥಿಗೃಹದಲ್ಲಿದ್ದ ರಾಜ್ಯಪಾಲರು ಬಳಿಕ ಶ್ರೀಕೃಷ್ಣ ಮಠ ಪರಿಸರದ ಅತಿಥಿಗೃಹಕ್ಕೆ ಸ್ಥಳಾಂತರಗೊಂಡರು. 

“ಇಂದು ರಥಬೀದಿಯಲ್ಲಿ ಕುಳಿತು ಕಾಲ ಕಳೆದದ್ದು ಬಹಳ ಖುಷಿ ನೀಡಿದೆ. ಇನ್ನೊಂದೆರಡು ದಿನ ಅದೇ ಪರಿಸರದಲ್ಲಿ ಇರೋಣವೆಂದುಕೊಂಡಿದ್ದೇನೆ’ ಎಂದು ಪಿ.ಬಿ. ಆಚಾರ್ಯ ತಿಳಿಸಿದ್ದಾರೆ. ಅವರು ತೆಂಕಪೇಟೆಯ ಆಚಾರ್ಯ ಮಠದಲ್ಲಿ ಜನಿಸಿ ಬಾಲ್ಯ ಮತ್ತು ತಾರುಣ್ಯದ ದಿನಗಳನ್ನು ಉಡುಪಿಯಲ್ಲಿ ಕಳೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next