Advertisement
ಯಿತಗೊಳ್ಳಬೇಕು ಎನ್ನುವ ವಿಚಾರ ಅಂಗೀಕೃತ ಗೊಳ್ಳಲಿಲ್ಲ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಾದರೆ ಅಲ್ಲಿನ ಎಲ್ಲ 50 ರಾಜ್ಯಗಳಿಗೂ ಆಯಾಯ ರಾಜ್ಯದ ಮತದಾರರೇ ರಾಜ್ಯಪಾಲರನ್ನು ಆರಿಸು ತ್ತಾರೆ. ಆದರೆ ಆ ವಿಚಾರಧಾರೆಗೆ ನಮ್ಮಲ್ಲಿ ಎರಡು ಪ್ರಮುಖ ಕಾರಣಗಳಿಂದಾಗಿ ಪುಷ್ಠಿ ದೊರಕಲಿಲ್ಲ. ಅವೆಂದರೆ ಒಂದನೆಯದಾಗಿ ನಮ್ಮಲ್ಲಿ ಸಚಿವ ಸಂಪುಟ ಪದ್ಧತಿಯ ಅನ್ವಯ ಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟವಿದೆ. ಆದರೆ ಅಮೆರಿಕದಲ್ಲಿ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟ ಇಲ್ಲ. ಹಾಗಾಗಿ ಒಂದೊಮ್ಮೆ ರಾಜ್ಯಪಾಲರ ಹುದ್ದೆಗೂ ಜನಮತಗಣನೆ ನಡೆದು ಅವರು ಚುನಾಯಿತಗೊಂಡ ಪಕ್ಷ ಒಂದಾದರೆ ವಿಧಾನಸಭೆಯಲ್ಲಿ ಬಹುಮತ ಹೊಂದಿದ ಆಡಳಿತ ಪಕ್ಷ ಇನ್ನೊಂದಾದರೆ ಘರ್ಷಣೆ ತಪ್ಪುವಂತಿಲ್ಲ. ಒಂದೊಮ್ಮೆ ಒಂದೇ ಪಕ್ಷ ರಾಜಭವನದಲ್ಲಿ ಹಾಗೂ ವಿಧಾನಮಂಡಲದಲ್ಲಿ ಮೆರೆದರೂ ಎರಡು ಶಕ್ತಿ ಕೇಂದ್ರಗಳು ಒಂದೇ ರಾಜ್ಯಾಡಳಿತಕ್ಕೆ ಪೂರಕವೆನಿ ಸದು. ಎರಡನೆಯದಾಗಿ, ನಮ್ಮದು “ಸಂಯುಕ್ತ ರಾಜ್ಯ ಪದ್ಧತಿ’ಯಿಂದ ಸ್ವಲ್ಪ ಬಿಗಿಗೊಂಡ “ರಾಜ್ಯಗಳ ಒಕ್ಕೂಟ’. ಹಾಗಾಗಿ ಅಧಿಕಾರದ ತಕ್ಕಡಿಯನ್ನು ಉದ್ದೇಶಪೂರ್ವಕವಾಗಿ, ರಾಷ್ಟ್ರೀಯ ಏಕತೆ ಹಾಗೂ ಸಮಗ್ರತೆಯ ಆಧಾರವಾಗಿರಿಸಿ, ರಾಷ್ಟ್ರಪತಿಯವರೇ ಅರ್ಥಾತ್ ಸ್ವತಃ ಕೇಂದ್ರ ಸರಕಾರವೇ ಎಲ್ಲ ರಾಜ್ಯಗಳಿಗೂ ರಾಜ್ಯಪಾಲರನ್ನು ನಿಯುಕ್ತಿಗೊಳಿಸ ತಕ್ಕದ್ದು ಎಂಬುದಾಗಿ 155ನೇ ವಿಧಿ ಸ್ಪಷ್ಟವಾಗಿ ವಿಧಿಸಿದೆ. 1789ರಲ್ಲಿ ಜಾರಿಗೆ ಬಂದ ಅಮೆರಿಕದ ಸಾಂವಿಧಾನಿಕ ಪಥದಲ್ಲಿ ಅಬ್ರಾಹಂ ಲಿಂಕನ್ ಹಾಗೂ ಜಾನ್.ಎಫ್. ಕೆನಡಿ ಅವರ ಆಡಳಿತದ ದಿನಗಳಲ್ಲಿ- ಹೀಗೆ ಎರಡು ಬಾರಿ ಅಲ್ಲಿನ ಚುನಾಯಿತ ರಾಜ್ಯಪಾಲರುಗಳೇ ರಾಷ್ಟ್ರಾಧ್ಯಕ್ಷರ ವಿರುದ್ಧ ತಿರುಗಿ ಬಿದ್ದ ಕಂಪನದ ಅನುಭವದ ನೆಲೆಯಲ್ಲಿಯೂ ಸಂವಿಧಾನ ರಚನೆಯ ಸಂದರ್ಭದಲ್ಲಿಯೇ ಈ ಮುನ್ನೆಚ್ಚರಿಕೆ ಹೊಂದಲಾಯಿತು.
Related Articles
Advertisement
ಭಾರಿಯಂತೆ ರಾಜ್ಯದ ಕೇಂದ್ರದಲ್ಲಿ ರಾಜ ಭವನ ಪಾತ್ರವಹಿಸಬೇಕು. ಇಲ್ಲೇ ಒಂದೊಮ್ಮೆ “ರಾಜ್ಯ ಸರಕಾರ ಭಾರತ ಸಂವಿಧಾನದ ಅನ್ವಯ ಕಾರ್ಯ ನಿರ್ವಹಿಸುವಂತಿಲ್ಲ; ರಾಜ್ಯದಲ್ಲಿ 356ನೇ ವಿಧಿಯನ್ವಯ ರಾಷ್ಟಪತಿ ಆಳ್ವಿಕೆಗೆ ಪರಿಸ್ಥಿತಿ ಪಕ್ವಗೊಂಡಿದೆ’ ಎಂಬ ವರದಿ ಒಪ್ಪಿಸುವ ವಿವೇಚನಾಧಿಕಾರ ಇವರ ಪಾಲಿಗಿದೆ. ಈ ವರದಿ ನೀಡುವಲ್ಲಿ ಮುಖ್ಯಮಂತ್ರಿಯವರ ಅಥವಾ ರಾಜ್ಯ ಸಚಿವ ಸಂಪುಟದ ಒಪ್ಪಿಗೆಯ ಮೊಹರು ಅಗತ್ಯವಿಲ್ಲ; ಅದೇ ರೀತಿ ವಿಧಾನಮಂಡಲದಲ್ಲಿ ಬಹುಮತ ಹೊಂದಿ ಸಹಿಗಾಗಿ ರಾಜ್ಯಪಾಲರಿಗೆ ಮಸೂದೆ ಕಳುಹಿಸಬೇಕಾಗಿದೆ. ಇಲ್ಲಿಯೂ ರಾಜ್ಯಪಾಲರ ವಿವೇಚನಾಧಿಕಾರದ ಸ್ವತಂತ್ರ ಪರಿಧಿ ಗಮನಾರ್ಹ. ಅಂತಹ ಮಸೂದೆಯನ್ನು ಒಪ್ಪಿ ಅಂಕಿತ, ಮೊಹರು ನೀಡಿ ಅಧಿಕೃತ ರಾಜ್ಯಶಾಸನವಾಗಿಸಬಹುದು ಅಥವಾ ಆ ಮಸೂದೆಯ ಪರಿಷ್ಕರಣೆ ಅಗತ್ಯ ಎಂಬ ಷರಾವನ್ನು ಹಾಗೂ ಅದರೊಂದಿಗೆ ನಿರ್ದಿಷ್ಟ ವಿಚಾರವನ್ನು ಉಲ್ಲೇಖೀಸಿ ಮರು ಪರೀಶಿಲನೆಗೆ ವಿಧಾನಮಂಡಲಕ್ಕೆ ಹಿಂದಿರುಗಿಸಬಹುದು ಅಥವಾ ರಾಜ್ಯದ ಮಸೂದೆಗಳನ್ನು ನೇರವಾಗಿ ರಾಷ್ಟ್ರಪತಿಯವರ ಅಂಕಿತಕ್ಕೆ, ಅರ್ಥಾತ್ ಕೇಂದ್ರ ಸಚಿವ ಸಂಪುಟದ ಪರಿಶೀಲನೆಯ ಕಕ್ಷೆಗೆ ನೀಡಿ
“ಕೈ ತೊಳೆದುಕೊಳ್ಳಬಹುದು’. ಇಲ್ಲಿಯೂ ರಾಜ್ಯ ಪಾಲರ ಸ್ವ ಇಚ್ಛೆ ಹಾಗೂ ನಿರ್ಧಾರಕ್ಕೆ ಸಂವಿಧಾನ ಮಣೆ ಹಾಕಿದೆ.
ರಾಜ್ಯಪಾಲರ ಹುದ್ದೆ ಆಯಾಯ ರಾಜ್ಯ ಸರಕಾರದ ನಿಟ್ಟಿನಲ್ಲಿ ಕೇವಲ “ಸಾಂವಿಧಾನಿಕ ಮುಖ್ಯಸ್ಥರದು’ ಎಂಬ ನಿಯುಕ್ತಿಯನ್ನೂ ರಾಜ್ಯಾಂಗ ಘಟನೆ ಧ್ವನಿಸುತ್ತಿದೆ ಹಾಗೂ ಸಚಿವ ಸಂಪುಟದ ಜತೆ “ಅನ್ಯೋನ್ಯ ಸಹಕಾರ’ ತತ್ತÌ ಹಾಗೂ ಸತ್ವದ ಬಗೆಗೆ ಸಂವಿಧಾನದ ಒಳಶ್ರುತಿ ಮಿಡಿಯುತ್ತದೆ. ಕೇಂದ್ರ ಹಾಗೂ ರಾಜ್ಯಗಳಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದು “ಡಬಲ್ ಎಂಜಿನ್ ಸರಕಾರ’ ಎಂಬ ಪ್ರಚಲಿತ ವ್ಯಾಖ್ಯೆಯ ವ್ಯವಸ್ಥೆ ಇದ್ದಲ್ಲಿ ರಾಜ್ಯಪಾಲರ ಆಸನ ಒಂದಿನಿತು “ಆರಾಮ ಕುರ್ಚಿ’ ಎನಿಸುತ್ತದೆ. ಬದಲಾಗಿ ಪರಸ್ಪರ ಕೆಂಡಕಾರುವ, ಕತ್ತಿ ಮಸೆಯುವ, ಕಿಡಿಕಾರುವ ಅತಿಶಯೋಕ್ತಿಗಳ ಸಾಕಾರ ಎನಿಸಿ ವೈರುಧ್ಯದ ಕೇಂದ್ರ-ರಾಜ್ಯಗಳ ಆಡಳಿತ ಪಕ್ಷಗಳಿದ್ದಲ್ಲಿ ರಾಜ್ಯಪಾಲಗಿರಿ ಸದಾ ಕಂಪನಕ್ಕೆ ಒಳಪಡುವುದರಲ್ಲಿ ಸಂದೇಹವಿಲ್ಲ. ಆಗ ಅತ್ತ ಕೇಂದ್ರಕ್ಕೂ ಇತ್ತ ರಾಜ್ಯಕ್ಕೂ “ಸಮಾಧಾನಕರ’ ದೃಷ್ಟಿ ಬೀರುವ ರಾಜಕೀಯ ಮುತ್ಸದ್ಧಿತನ, ಹಗ್ಗ-ಜಗ್ಗಾಟದ ಮಧ್ಯೆ, ಶಾಂತಿ, ಕಾನೂನು ಕಾಯ್ದುಕೊಳ್ಳುವ ಆಟದ ತೀರ್ಪುಗಾರನ ತೆರದಲ್ಲಿ ಕಾರ್ಯನಿರ್ವಹಣೆ ಅತ್ಯಂತ ಮಹತ್ತಮ ಸಾಧನೆ. ಈ ಬಗೆಗೇ ತಮ್ಮ ಅನುಭವ ಕಥನದಲ್ಲಿ ಹಲವಾರು ರಾಜ್ಯಪಾಲರು ತಮ್ಮ ಕಠಿನ ಪರಿಶ್ರಮದ “ವೀರಗಾಥೆ’ಯನ್ನು ದಾಖಲಿಸಿದ್ದಾರೆ.
ಈ ಸಮಗ್ರ ಸಾಂವಿಧಾನಿಕ ಹಿನ್ನಲೆಯಲ್ಲಿ “ಭವಿಷ್ಯದ ದಾಖಲಿತ ಇತಿಹಾಸ’ ಎನ್ನುವ ತೆರದಲ್ಲಿ ಕೇರಳ, ತಮಿಳುನಾಡು, ತೆಲಂಗಾಣ, ಪಶ್ಚಿಮ ಬಂಗಾಲ ಅಂತೆಯೇ ದಿಲ್ಲಿ ಹಾಗೂ ಪುದುಚೇರಿ ಕೇಂದ್ರಾಡಳಿತದ ರಾಜ್ಯಪಾಲರು, ಉಪರಾಜ್ಯ ಪಾಲರುಗಳ ನುಡಿ ನಡೆ, ಘರ್ಷಣೆ ವಿಶ್ಲೇಷ ಣಾರ್ಹ. ಕುಲಾಧಿಪತಿಗಳ ಹುದ್ದೆಯಿಂದ ನಿಮ್ಮನ್ನೇ
ಕಿತ್ತು ಹಾಕುತ್ತೇವೆ “ಸಹಿ ಹಾಕಿ’ ಎಂದು ರಾಜಭವನಕ್ಕೇ ವಿಶೇಷಾಜ್ಞೆಯ ಪ್ರತಿ ಕಳುಹಿಸುವ ಕೇರಳ ಮುಖ್ಯಮಂತ್ರಿಗಳ ವರಸೆ ರಾಜಕೀಯ ವಿಶ್ಲೇಷಕರ ಪಾಲಿಗೆ ಗಮನಾರ್ಹ ಸಂಗತಿ. ಕೇಂದ್ರದಲ್ಲಾದರೆ ರಾಷ್ಟ್ರಪತಿಯವರಿಗೆ ನಿರ್ಗಮನದ ದಾರಿ ತೋರಿಸುವ 61ನೇ ವಿಧಿಯ “ಮಹಾಭಿಯೋಗ’ದ ಉಲ್ಲೇಖ ತುಂಬಿ ನಿಂತಿದೆ. ಆದರೆ ನಮಗೆ ಇವರು ಒಲ್ಲದವರು ಎಂಬುದಾಗಿ ರಾಜಭವನ ದಿಂದ ರಾಜ್ಯಪಾಲರನ್ನು ಹೊರಹಾಕಲು ಮುಖ್ಯ ಮಂತ್ರಿಯವರಿಗೆ ಯಾವುದೇ ಸಾಂವಿಧಾನಿಕ ಸೂತ್ರದ ದ್ವಾರವೇ ಇಲ್ಲ! ಇಲ್ಲಿ ಪರಸ್ಪರ “ಗೌರವ, ನಂಬಿಕೆ ಹಾಗೂ ಸಹಕಾರಿ’ ತತ್ತ್ವವೊಂದೇ ಇಂದಿನ ಹಾಗೂ ಮುಂದಿನ ಸಂಘರ್ಷ ವಿರಹಿತ ಕಾರ್ಯ ಪರಿಧಿಗೆ ದಿಕ್ಸೂಚಿ. ಅತ್ತ ಪ್ರಧಾನಿ ನಾಯಕತ್ವದ ಕೇಂದ್ರದ ಪ್ರತಿನಿಧಿಯಾಗಿ, ಇತ್ತ ಮುಖ್ಯಮಂತ್ರಿ ನೇತಾರಿಕೆಯ ರಾಜ್ಯ ಸರಕಾರದ “ಸಾಂವಿಧಾನಿಕ ಮುಖ್ಯಸ್ಥ’ನಾಗಿ ಅತ್ಯಂತ ವಿಚಕ್ಷಣೆ,
ಮುತ್ಸದ್ಧಿತನ ಹಾಗೂ ಕಾನೂನುಬದ್ಧ ಪಾತ್ರವಹಿ ಸುವಿಕೆ ಮುಂಬರುವ ದಿನಗಳ ರಾಜ್ಯಪಾಲರುಗಳ ಧೀಮಂತಿಕೆಯ ಸಂಕೇತ ಎನಿಸಬೇಕಾಗಿದೆ.
–ಡಾ| ಪಿ.ಅನಂತಕೃಷ್ಣ ಭಟ್, ಮಂಗಳೂರು