Advertisement

ರೈತರ ಹಿತ ಕಾಪಾಡುತ್ತಿರುವ ಸರ್ಕಾರಗಳು

07:07 AM Jul 10, 2020 | Lakshmi GovindaRaj |

ತುರುವೇಕೆರೆ: ಕೋವಿಡ್‌ 19ನಿಂದ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಅಧೋಗತಿಗಿಳಿದಿದ್ದರೂ ಸಹ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ರೈತರ ಹಿತ ಕಾಪಾಡುವಲ್ಲಿ ಮುಂದಾಗಿವೆ ಎಂದು ಶಾಸಕ ಮಸಾಲ ಜಯರಾಂ ಅವರು  ಹೇಳಿದರು.

Advertisement

ಪಟ್ಟಣದ ಕೃಷಿ ಉತ್ಪನ್ನ ಮರುಕಟ್ಟೆ ಸಮಿತಿ ಆವರಣದಲ್ಲಿ ಪೋರ್ಟಿಕೋ, 50 ಸಾವಿರ ಲೀಟರ್‌ ಸಾಮರ್ಥ್ಯದ ಓವರ್‌ ಹೆಡ್‌ ಟ್ಯಾಂಕ್‌, ರಸ್ತೆ ಅಭಿವೃದಿ, ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಕಣ ನಿರ್ಮಾಣ ಸೇರಿದಂತೆ  ವಿವಿಧ ಯೋಜನೆಗಳನ್ನು ಒಳಗೊಂಡಂತೆ ಸುಮಾರು ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿ ಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ದೇಶ ದಲ್ಲಿ ರೈತರ ಹಿತ ಕಾಪಾಡುವ ಉದ್ದೇಶದಿಂದ  ಕೇಂದ್ರ ಸರ್ಕಾರ ಎಪಿಎಂಸಿ ಮೂಲ ಸೌಕರ್ಯಕ್ಕೆ ಸುಮಾರು ಒಂದು ಕೋಟಿ ರೂ. ಘೋಷಿ ಸಿದ್ದು ರೈತರ ವಿಶ್ವಾಸ ಇಮ್ಮಡಿಗೊಳಿಸಿದೆ ಎಂದರು. ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೊಬ್ಬರಿಗೆ ಬೆಂಬಲ ಬೆಲೆ  ಘೋಷಿಸಬೇಕು ಎಂದು ಒತ್ತಾಯಿಸಿದರು.

ಎಪಿಎಂಸಿ ಅಧ್ಯಕ್ಷ ನರಸಿಂಹ ರಾಜು, ಉಪಾಧ್ಯಕ್ಷ ನರಸಿಂಹ, ಮಾಜಿ ನಿರ್ದೇಶಕರಾದ ಹಿಂಡುಮಾರನಹಳ್ಳಿ ನಾಗರಾಜು, ಮಾವಿನಹಳ್ಳಿ ರೇಣುಕಪ್ಪ, ಪ್ರಸನ್ನಕುಮಾರ್‌, ಇಂದಿರಮ್ಮ, ಛಾಯಾ  ಶಂಕರೇಗೌಡ, ನಿರ್ದೇಶಕರಾದ ವಿ.ಟಿ.ವೆಂಕಟರಾಮು, ಮಾಚೇನಹಳ್ಳಿ ಲೋಕಣ್ಣ, ಕಾಂತರಾಜು, ಮಧುಸೂದನ್‌, ಮುಖಂಡರಾದ ಕೊಂಡಜ್ಜಿ ವಿಶ್ವಣ್ಣ, ಜೆಡಿಎಸ್‌ ಅಧ್ಯಕ್ಷ ಸ್ವಾಮಿ, ಕೊಳಾಲ ಗಂಗಾಧರ್‌, ಎಪಿಎಂಸಿ ಕಾರ್ಯದರ್ಶಿ  ವೆಂಕಟೇಶ್‌ ಸೇರಿದಂತೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next