Advertisement

ಮಹಿಳೆಯರ ಸುರಕ್ಷತೆಗೆ ಸರಕಾರ ಕಠಿಣ ಕ್ರಮ

06:24 PM Sep 16, 2021 | Team Udayavani |

ಯಾದಗಿರಿ: ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ಪ್ರಕರಣಗಳು ರಾಜ್ಯದಲ್ಲಿಯೇ ಬೆಂಗಳೂರು ಮೊದಲ ಸ್ಥಾನದಲ್ಲಿದ್ದು, ಕೌಟುಂಬಿಕ ಹಿಂಸೆ ಪ್ರಕರಣಗಳು ಮೈಸೂರು ಜಿಲ್ಲೆಯಲ್ಲಿ ಹೆಚ್ಚಾಗಿ ದಾಖಲಾಗಿವೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್‌. ಪ್ರಮೀಳಾ ನಾಯ್ಡು ತಿಳಿಸಿದ್ದಾರೆ.

Advertisement

ನಗರದ ‌ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗ ‌ಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಬೆಂಗಳೂರಿನಲ್ಲಿ ಆದ ಕಹಿ ಘಟನೆಗಳಿಗೆ ತಿಲಾಂಜಲಿ ಇಡಲು ರಾಜ್ಯ ಸರ್ಕಾರ ಮತ್ತು ಪೊಲೀಸ್‌ ಇಲಾಖೆ ಹಲವು ಕಠಿಣ ಕ್ರಮ ಕೈಗೊಂಡಿದ್ದಾರೆ. ರಾಜ್ಯ ಮಹಿಳಾ ಆಯೋಗ ಸದಾ ಕ ‌ಣ್ಗಾವಲಿಟ್ಟಿದೆ ಎಂದು ತಿಳಿಸಿದ್ದರು.

ರಾಜ್ಯದಲ್ಲಿ ಇಲ್ಲಿಯವರೆಗಿನ 2,200 ಪ್ರಕರಣಗಳಲ್ಲಿ ಇಲ್ಲಿಯವರೆಗೆ 1,600 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ತಿಳಿಸಿದರು. ಮಾರ್ಚ್‌ 2020ರಿಂದ 416 ಮಹಿಳಾ ದೌರ್ಜನ್ಯ ಪ್ರಕರಣಗಳು ಜರುಗಿದ್ದು, ಅವುಗಳಲ್ಲಿ ನಾವೇ ಸ್ವತಃ ಸೋಮುಟೋ ಪ್ರಕರಣಗಳನ್ನು ದಾಖಲಿಸಿದ್ದೇವೆ.

ಹೆಚ್ಚಾಗಿ ಮಹಿಳೆಯರು ಭಯದಿಂದ ಪ್ರಕರಣ ದಾಖಲಿಸುವಲ್ಲಿ ಹಿಂದೆ ಸರಿಯುತ್ತಿರುವುದರಿಂದ ಹಲವು ಪ್ರಕರಣಗಳ ದಾಖಲಾಗುತ್ತಿಲ್ಲ. ಆದ್ದರಿಂದ ನಮ್ಮ ಆಯೋಗದ ಗಮನಕ್ಕೆ ಬಂದ ನಂತರ ನಾವೇ ಪ್ರಕರಣ ದಾಖಲಿಸಿಕೊಂಡು ಪೊಲೀಸ್‌ಇಲಾಖೆಯ ಸಹಾಯದೊಂದಿಗೆ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದರು. ಯಾದಗಿರಿ ಮಹಿಳೆಯ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ಥ ಮಹಿಳೆಯನ್ನು ಭೇಟಿ ಮಾಡಿ ಅವರಿಗೆ ಧೈರ್ಯ ತುಂಬಿದ್ದೇನೆ.

ಯಾದಗಿರಿ ಜಿಲ್ಲಾಡಳಿತದಿಂದ ಅವರಿಗೆ ಸಹಾಯಧನ ಕೂಡ ನೀಡಲಾಗಿದೆ. ಇನ್ನೂ ಆರೋಪಿಗಳನ್ನು ಬಂಧಿಸಿದ್ದು, ಅವರಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನೂ ಸಂತ್ರಸ್ಥೆ ಮಾನಸಿಕವಾಗಿ ಸದೃಢವಾಗಿ ಬದುಕಲು ಅವರಿಗೆ ಜೀವನ ನಿರ್ವಹಣೆ ಕೈಗೊಳ್ಳು ಸಣ್ಣ ಉದ್ಯಮ ಅಥವಾ ವ್ಯಾಪಾರ ಸ್ಥಾಪಿಸಲು ಸರ್ಕಾರದೊಂದಿಗೆ ಚರ್ಚಿಸಿ ಸಹಾಯಧನ ಕೊಡಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next