ವಿಜಯಪುರ: ರೈತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ನಿರಂತರವಾಗಿ ಹೋರಾಟ ನಡೆಸಿದಂತಹ ಮಹಾನ್ ವ್ಯಕ್ತಿ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮ ದಿನವನ್ನು ರೈತರ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆ ಎಂದು ಹೋರಾಟಗಾರ ಹಾಗೂ ಪ್ರಗತಿಪರ ರೈತರಾದ ಮಳ್ಳೂರು ಶಿವಣ್ಣ ತಿಳಿಸಿದರು.
1ಸಾಹಿತ್ಯ ಪರಿಷತ್ ಮತ್ತು ರೇಷ್ಮೆ ಮಾರುಕಟ್ಟೆ ವತಿಯಿಂದ ರೈತರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ರೈತರೇ ದೇಶದ ಬೆನ್ನೆಲುಬು ಎನ್ನುವುದನ್ನು ಅರಿತ ಅವರು ರೈತಾಪಿ ವರ್ಗದ ಜಮೀನು ಜಮೀನಾªರರ ಕೈಯಲ್ಲಿದ್ದ ಬಹುಕಷ್ಟ ಅನುಭವಿಸುತ್ತಿದ್ದನ್ನು ಹಾಗೂ ರೈತರು ಬೆಳೆಗೆಂದು ಅತಿಯಾದ ಸಾಲ ಮಾಡಿ ಸಾಲದ ಶೂಲದಲ್ಲಿ ಬಿದ್ದು ಓದ್ದಾಡುವುದನ್ನು ವಿರೋಧಿಸಿ ಪ್ರತಿಯೊಬ್ಬ ರೈತನೂ ತಮ್ಮ ಸ್ವಾಭಿಮಾನದೊಂದಿಗೆ ಬದುಕಬೇಕು ಎಂದು ನ್ಯಾಯದೊರಕಿಸಿಕೊಟ್ಟವರು ಚರಣ್ ಸಿಂಗ್‌ರವರು. ಆದರೆ ಇಂದಿಗೂ ರೈತರು ತಮ್ಮ ಕಸುಬಿನಲ್ಲಿ ತೃಪ್ತಿದಾಯಕ ಬದುಕನ್ನು ಸಾಗಿಸಲು ಆಗುತ್ತಿಲ್ಲ. ಅನೇಕ ತೊಂದರೆಗಳಿಂದ ಒದ್ದಾಡುತ್ತಲೇ ಬದುಕುತ್ತಿದ್ದಾರೆ ಎಂದರು.
ಬೂದಿಗೆರೆ ಪಂಚಾಯಿತಿ ಅಧ್ಯಕ್ಷ ಹಾಗೂ ಕಸಾಪದ ಕಾರ್ಯದರ್ಶಿ ಶ್ರೀನಿವಾಸಗೌಡ ಮಾತನಾಡಿ, ರೈತರಿಗೆ ಬೆಂಬಲ ಬೆಲೆ ಸಿಗಬೇಕಾಗಿದೆ. ಈ ಭಾಗದ ರೈತರು ಹೈನುಗಾರಿಕೆ ಹಾಗೂ ರೇಷ್ಮೆ ಬೆಳೆ ಮೇಲೆ ಅತಿ ಹೆಚ್ಚಿನ ರೀತಿಯಲ್ಲಿ ಅವಲಂಬಿತವಾಗಿದ್ದು ತಮ್ಮ ಕಾರ್ಯವೈಖರಿಯಲ್ಲಿ ಹೊಸ ಹೊಸ ರೀತಿ ತಂತ್ರಜಾnನ ಬಳಸಿಕೊಳ್ಳುವ ಮೂಲಕ ಬೆಳೆ ಬೆಳೆದಲ್ಲಿ ಹೆಚ್ಚಿನ ಪ್ರಗತಿ ಕಾಣಬಹುದಾಗಿದೆ ಎಂದರು.
ರೇಷ್ಮೆ ಇಲಾಖೆ ಬೆಂಗಳೂರು ಜಂಟಿ ನಿರ್ದೇಶಕ ಕುಮಾರ್ ಮಾತನಾಡಿ, ಈ ಬಾರಿ ಉತ್ತಮ ಬೆಳೆಯಾಗಿದ್ದು ಕೆರೆ ಕುಂಟೆಗಳು ತುಂಬಿದೆ. ಇದರಿಂದ ಅಂತರ್ಜಲ ಮಟ್ಟ ಏರಿಕೆಯಾಗಿದ್ದು ಕೊಳವೆಬಾವಿಗಳಲ್ಲಿಯೂ ನೀರು ಹೆಚ್ಚಿದೆ. ಮಳೆಯಾದ ಪರಿಣಾಮ ರೋಗಗಳು ಕಾಣಿಸಿಕೊಂಡಿವೆ. ಇದಕ್ಕಾಗಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ವಿವಿಧ ಭಾಗಗಳಿಂದ ರೇಷ್ಮೆಗೂಡನ್ನು ಬೆಳೆದುಕೊಂಡು ಮಾರುಕಟ್ಟೆಗೆ ತರುವಂತಹ ಪ್ರಗತಿಪರ ರೈತರನ್ನು ಗುರುತಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಚಿ.ಮಾ. ಸುಧಾಕರ್, ಮಾರುಕಟ್ಟೆ ಸಮಿತಿ ಸದಸ್ಯ ಕಲ್ಯಾಣ್‌ಕುಮಾರ್ ಮಾತನಾಡಿದರು. ಮಾರುಕಟ್ಟೆ ಉಪನಿರ್ದೇಶಕ ಬೈರಾರೆಡ್ಡಿ ಯುವ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಾರುಕಟ್ಟೆ ಸಮಿತಿ ಸದಸ್ಯ ಸಾಧಿಕ್ ಪಾಷಾ ,ಬಸವರಾಜು, ಕಸಾಪ ತಾಲೂಕು ಅಧ್ಯಕ್ಷ ವಿ.ಎನ್.ರಮೇಶ್, ಎಸ್.ಆರ್. ರಾಮಕುಮಾರ್, ಕಸಾಪ ಟೌನ್ ಅಧ್ಯಕ್ಷ ಮುನಿವೀರಣ್ಣ, ಮುಕುಂದರಾವ್ ,ರೀಲರ್ ಸಂಘದ ಎಲ್ಲಾ ಪದಾಧಿಕಾರಿಗಳು,
ರೈತ ಮುಖಂಡರು ಕಸಾಪದ ಪದಾಧಿಕಾರಿಗಳು ಹಾಗೂ ರೇಷ್ಮೆ ಮಾರುಕಟ್ಟೆ ಸಿಬ್ಬಂದಿ ಪಾಲ್ಗೊಂಡಿದ್ದರು.