Advertisement

ನರೇಗಾದಡಿ ಉದ್ಯೋಗ ಸೃಷ್ಟಿಗೆ ಸರಕಾರದಿಂದ ಯೋಜನೆ: ಈಶ್ವರಪ್ಪ

09:39 PM Apr 12, 2020 | Sriram |

ಶಿವಮೊಗ್ಗ: ದೇಶಾದ್ಯಂತ ಕೋವಿಡ್‌-19 ಲಾಕ್‌ಡೌನ್‌ ಮುಂದುವರಿದಿದೆ. ಕರ್ನಾಟಕ ದಿನೇ ದಿನೆ ಒಳ್ಳೆಯ ಪರಿಸ್ಥಿತಿಗೆ ಬರುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರ ಬಡವರಿಗೆ ಏನೇನು ಕೊಡಬೇಕೋ ಅದನ್ನು ತಲುಪಿಸುತ್ತಿವೆ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ನರೇಗಾ ಯೋಜನೆಯಡಿ ಬಡವರಿಗೆ ಹೆಚ್ಚು ಉದ್ಯೋಗ ಕೊಡಲಿದೆ. ಅದಕ್ಕಾಗಿಯೇ ವಿಶೇಷ ಯೋಜನೆ ರೂಪಿಸಲಾಗಿದೆ. ಕಾರ್ಮಿ ಕರಿಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಉದ್ಯೋಗ ಕಲ್ಪಿಸಲಾಗುತ್ತದೆ ಎಂದರು.

ಕೋವಿಡ್‌-19 ಸಮಸ್ಯೆಯಿಂದ ಒಟ್ಟೊ ಟ್ಟಿಗೆ ಸೇರದೇ ಐದೈದು ಮಂದಿಗೆ ನಿರ್ದಿಷ್ಟ ಕೆಲಸ ಹಂಚಿಕೆ ಮಾಡಲಾಗುವುದು. ನಿಗದಿತ ಪ್ರದೇಶದಲ್ಲಿ ಅವರಿಗೆ ಉದ್ಯೋಗದ ಅವಕಾಶ ನೀಡಲಾಗಿದೆ. ಗ್ರಾಮೀಣ ಅಭಿವೃದ್ಧಿ ಇಲಾಖೆ ಹಾಗೂ ಆರ್ಟ್‌ ಆಫ್‌ ಲಿವಿಂಗ್‌ ಸಹಯೋಗದಲ್ಲಿ 9 ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳ ಲಾಗಿದೆ. ಪುಷ್ಕರಿಣಿ, ಕೆರೆ, ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಇದಕ್ಕೆ ಕ್ರಿಯಾ ಯೋಜನೆ ರೂಪಿಸಲು ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿ ಕಾರಿಗಳ ಜತೆ ಆರ್ಟ್‌ ಆಫ್‌ ಲಿವಿಂಗ್‌ನ ಅ ಧಿಕಾರಿಗಳು ಚರ್ಚೆ ಮಾಡಿದ್ದಾರೆ ಎಂದರು.

ಎಲ್ಲ ಗ್ರಾಮಗಳಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾರ್ಯಕ್ಕಾಗಿ ಕೇಂದ್ರ ದಿಂದ ಹಣ ಬಿಡುಗಡೆಯಾಗಿದ್ದು, ಪ್ರತಿ ಗ್ರಾ.ಪಂ.ಗೆ 2,700, ತಾ.ಪಂ.ಗೆ 265, ಜಿ.ಪಂ.ಗೆ 165 ಕೋಟಿ ರೂ. ಬಿಡುಗಡೆ ಆಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next