ಚಿಂಚೋಳಿ: ರಾಜ್ಯ ಸರ್ಕಾರಗಳು ಮಧ್ಯಮ ನೀರಾವರಿ ಯೋಜನೆಗಳಿಗೆ ನೀಡುವ ಸಣ್ಣ ನೀರಾವರಿ ಕೆರೆಗಳಿಗೆ ಆದ್ಯತೆ ನೀಡುತ್ತಿಲ್ಲ ಮಾಜಿ ಶಾಸಕ ಕೈಲಾಸನಾಥ ವೀರೇಂದ್ರ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.
ಅವರು ಹುಡದಳಿ ಗ್ರಾಮದಲ್ಲಿ ಕಳೆದ ವರ್ಷ ಮಳೆಯ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದ ಕೆರೆ ದುರಸ್ತಿ ಕಾರ್ಯವನ್ನು ಪರಿಶೀಲಿಸಿ ನಂತರ ಮಾತನಾಡಿದರು.
ರಾಜ್ಯ ಸರಕಾರಗಳು ಬೃಹತ್ ಮಧ್ಯಮ ನೀರಾವರಿ ಯೋಜನೆಗಳಿಗೆ ನೀಡುವ ಅನುದಾನ ಪ್ರಾಮುಖ್ಯತೆ ಅದರಂತೆ ಸಣ್ಣ ನೀರಾವರಿ ಕೆರೆಗಳಿಗು ನೀಡಿದರೆ ಅವುಗಳಿಂದ ರೈತರು ನೀರಿನ ಸೌಲಭ್ಯ ಪಡೆದುಕೊಳ್ಳಲಾಗುತ್ತದೆ.ಸಣ್ಣ ನೀರಾವರಿ ಕೆರೆಗಳ ಕಾಲುವೆ ಅನುದಾನ ಕೊರತೆ ಮತ್ತು ಸರ್ಕಾರ ನಿರ್ಲಕ್ಷ್ಯ ಧೋರಣೆ ಗಳಿಂದ ನಿರ್ವಹಣೆ ಕೆರೆಗಳು ದುಸ್ಥಿತಿಯಲ್ಲಿದೆ.ರೈತರು ಮಧ್ಯಮ ನೀರಾವರಿ ಯೋಜನೆ ಪ್ರಯೋಜನ ಸಣ್ಣ ನೀರಾವರಿ ಯೋಜನೆಗಳಿಂದ ರೈತರು ಪ್ರಯೋಜನ ಪಡೆದುಕೊಳ್ಳುತ್ತಾರೆ ಹಾಗಾಗಿ ಸರಕಾರ ಸಣ್ಣ ನೀರಾವರಿ ಕೆರೆಗಳಿಗೆ ಪ್ರಾಮುಖ್ಯತೆ ನೀಡಬೇಕಾಗಿದೆ ಎಂದರು.
ನಾನು ಚಿಂಚೋಳಿ ಮತಕ್ಷೇತ್ರದ ಶಾಸಕನಾಗಿದ್ದರೂ ಸಹ ಸಣ್ಣ ನೀರಾವರಿ ಕೆರೆಗಳಿಗೆ ಸರ್ಕಾರ ಅಷ್ಟೇನೂ ಅನುದಾನ ಮತ್ತು ಪ್ರಾಮುಖ್ಯತೆ ಕೊಡಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಎಇಇ ಶಿವಶರಣಪ ಕೇಶ್ವಾರ, ಬಸವರಾಜ ಮಲಿ,ಮಲ್ಲಿಕಾರ್ಜುನ ಪಾಟೀಲ್ ಲಿಂಗಶೆಟ್ಟಿ ತಟ್ಟೆಪಳ್ಳಿ ಅನೀಲ ಜಮಾದಾರ ಇನ್ನಿತರಿದ್ದರು.