ಮಂಗಳೂರು: ಆಜಾನ್ ವಿಷಯದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಪಾಲಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ನ್ಯಾಯಾಲಯದ ಆದೇಶ ಪ್ರಕಾರ ಮುಂಜಾನೆ ಆರು ಗಂಟೆಗೆ ಮೊದಲು ಸಾರ್ವಜನಿಕ ಪ್ರದೇಶದಲ್ಲಿ ಧ್ವನಿವರ್ಧಕ ಬಳಸುವಂತಿಲ್ಲ ಎಂದು ಯುವ ಬ್ರಿಗೇಡ್ ಸಂಚಾಲಕ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.
ಮಂಗಳೂರಿನಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಆಡಳಿತ ಪಕ್ಷ ಮತ್ತು ವಿಪಕ್ಷ ಈ ವಿಷಯದಲ್ಲಿ ಒಂದಾಗಿವೆ. ಬಿಜೆಪಿ ಸಹಿತ ಎಲ್ಲ ಪಕ್ಷಗಳು ಮುಸ್ಲಿಮರ ಮತ ಪಡೆಯುವ ಜಿದ್ದಿಗೆ ಬಿದ್ದಿವೆ. ಯುಪಿ ಸರಕಾರ 50 ಸಾವಿರಕ್ಕೂ ಅಧಿಕ ಲೌಡ್ ಸ್ಪೀಕರ್‌ಗಳನ್ನು ತೆಗೆಸಿದೆ.
ನ್ಯಾಯಾಲಯದ ಆದೇಶ ಪಾಲಿಸಲು ಉತ್ತರ ಪ್ರದೇಶ ಸರಕಾರಕ್ಕೆ ಸಾಧ್ಯವಾಗುವುದಾದರೆ, ಕರ್ನಾಟಕ ಸರಕಾರಕ್ಕೆ ಯಾಕೆ ಆಗುವುದಿಲ್ಲ ಎಂದು ಪ್ರಶ್ನಿಸಿದರು.
ಕಾನೂನು ಮೀರಿದವರ ಮೇಲೆ ಕ್ರಮ ಕೈಗೊಳ್ಳಲು ಹಿನ್ನೆಲೆಯಲ್ಲಿ ಸರಕಾರವನ್ನು ಎಚ್ಚರಿಸಲು ಹಿಂದೂ ಸಂಘಟನೆಗಳು ಹನುಮಾನ್ ಚಾಲೀಸ್ ಪಠಣ ಆರಂಭಿಸಿವೆ ಎಂದವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.