Advertisement

ಸಮಸ್ಯೆಗಳ ನಿವಾರಣೆಗೆ ಸರ್ಕಾರ ದೃಢ ನಿರ್ಧಾರ

04:42 PM Jan 22, 2020 | Team Udayavani |

ಸಿದ್ದಾಪುರ: ರಾಜ್ಯದಲ್ಲಿ ಸಂಭವಿಸಿದ ಜಲಪ್ರಳಯ ಶತಮಾನದಲ್ಲೊಮ್ಮೆ ಸಂಭವಿಸುವಂಥದ್ದು. ಅದರಿಂದ ಆದ ಅನಾಹುತಗಳನ್ನು ಎದುರಿಸಲು ರಾಜ್ಯ ಸರಕಾರ ಸವಾಲನ್ನೇ ಎದುರಿಸಬೇಕಾಗಿ ಬಂತು. ಅದರಿಂದ ಉಂಟಾದ ಸಮಸ್ಯೆಗಳ ನಿವಾರಣೆಗೆ ಸರಕಾರ ದೃಢ ನಿರ್ಧಾರ ತೆಗೆದುಕೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

Advertisement

ಅವರು ತಾಲೂಕಿನ ಕೊರ್ಲಕೈ ಗ್ರಾಪಂ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಘನತ್ಯಾಜ್ಯಗಳ ನಿರ್ವಹಣೆ ಕುರಿತಂತೆ ಹೊಸ ವ್ಯವಸ್ಥೆ ಕಲ್ಪಿಸಲು ಪ್ರತಿ ಗ್ರಾಪಂಗಳಿಗೂ 20 ಲಕ್ಷ ರೂ.ಗಳು ಕೇಂದ್ರ ಸರಕಾರದಿಂದ ಬಿಡುಗಡೆಯಾಗಿದೆ. ಪ್ರತಿ ಗ್ರಾಪಂಗಳಲ್ಲಿ ಇದರ ನಿರ್ವಹಣೆಗೆ ಸ್ಥಳಒದಗಿಸಿಕೊಳ್ಳುವ ಮೂಲಕ ಈ ಯೋಜನೆ ಸದುಪಯೋಗವಾಗುವಲ್ಲಿ ಸಹಕರಿಸಬೇಕು. ಸಾಮೂಹಿಕ ಶೌಚಾಲಯಗಳ ಒದಗಿಸುವಿಕೆಗೂ ಚಿಂತನೆ ನಡೆದಿದೆ. ಗ್ರಾಪಂಗಳು ಜನರ ಮತ್ತು ಜನಪ್ರತಿನಿಧಿಗಳ ಪ್ರಮುಖ ಕೊಂಡಿಯಾಗಿದ್ದು ಸಮಸ್ಯೆ ನಿವಾರಿಸುವಲ್ಲಿ ಎಲ್ಲರೂ ಒಂದಾಗಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ ಉತ್ತಮ ಆಡಳಿತ ನಡೆಸುವ ಮೂಲಕ ಜನರ ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನಿಸಬೇಕಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next