Advertisement
ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂಬ ಬಿಜೆಪಿಯ ಬೇಡಿಕೆಯನ್ನು ಸರಕಾರ ತಳ್ಳಿ ಹಾಕಿತಲ್ಲದೆ, ರಾಜ್ಯ ಪೊಲೀಸರು ಸಮರ್ಥರಿದ್ದು, ಅವರಿಂದಲೇ ಸಮಗ್ರ ತನಿಖೆ ನಡೆಸಲಾಗುವುದು ಎಂದು ಸಮರ್ಥಿಸಿಕೊಂಡಿತು. ಪ್ರಕರಣದ ತನಿಖೆಯನ್ನು ಯಾವುದೇ ಕಾರಣಕ್ಕೂ ಸಿಬಿಐಗೆ ವಹಿಸುವುದಿಲ್ಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಇದಕ್ಕೆ ಉಭಯ ಸದನಗಳಲ್ಲಿ ಬಿಜೆಪಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿ ಧರಣಿ ನಡೆಸಿದ ಪರಿಣಾಮ ಗದ್ದಲ ಉಂಟಾಗಿ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಯಿತು.
Related Articles
Advertisement
ಬಿಜೆಪಿಯ ಆರಗ ಜ್ಞಾನೇಂದ್ರ ಮಾತನಾಡಿ, ಇದು ದೇಶವ್ಯಾಪಿ ಸುದ್ದಿಯಾಗಿರುವ ಪ್ರಕರಣ. ನಿಷ್ಪಕ್ಷ ತನಿಖೆ ನಡೆಸಿ ಕಠಿನ ಕ್ರಮ ಕೈಗೊ ಳ್ಳಬೇಕು. ಯಾವುದೇ ಒತ್ತಡಕ್ಕೆ ಪೊಲೀಸರು ಮಣಿಯಬಾರದು ಎಂದರು. ಈ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ನಿಮ್ಮ ಸರಕಾರ ಇದ್ದಾಗ ನೀವು ಒತ್ತಡಕ್ಕೆ ಮಣಿದಿದ್ದಿರಾ’ ಎಂದು ಕುಟುಕಿದರು.
ಇದಕ್ಕೆ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿ, “ಕುಕ್ಕರ್ ಸ್ಫೋಟ ಪ್ರಕರಣವನ್ನು ಹಗುರವಾಗಿ ತೆಗೆದುಕೊಂಡಿದ್ದರೆ ಮುಗಿದು ಹೋಗುತ್ತಿತ್ತು. ಅದರ ಬೇರುಗಳು ಎಲ್ಲೆಲ್ಲಿವೆ ನೋಡಿ ಗೊತ್ತಾಗುತ್ತದೆ’ ಎಂದು ತಿರುಗೇಟು ಕೊಟ್ಟರು.
ಯಾವುದೇ ಕಾರಣಕ್ಕೂ ಸಿಬಿಐಗೆ ಇಲ್ಲಪ್ರಕರಣದ ತನಿಖೆಯನ್ನು ಯಾವುದೇ ಕಾರಣಕ್ಕೂ ಸಿಬಿಐಗೆ ವಹಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟ ಪಡಿಸಿದರು. ಗೃಹ ಸಚಿವ ಡಾಣ ಪರಮೇಶ್ವರ ಅವರು ಮುನಿಗಳ ಹತ್ಯೆ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಮಾಹಿತಿ ಮತ್ತು ತನಿಖೆಗೆ ಸೂಕ್ತ ಕ್ರಮ ಕೈಗೊಂಡಿದ್ದಾರೆ. ಇದೊಂದು ದಿಗ್ಬ†ಮೆ ಮೂಡಿಸುವ ಪ್ರಕರಣ. ಇಂತಹವು ನಡೆಯಲೇಬಾರದು. ಪ್ರಕರಣವನ್ನು ಕೇವಲ ಆರು ತಾಸುಗಳಲ್ಲಿ ಪೊಲೀಸರು ಬೇಧಿಸಿದ್ದಾರೆ. ಇದರ ಹಿಂದೆ ಎಷ್ಟೇ ದೊಡ್ಡ ವ್ಯಕ್ತಿಗಳು ಇದ್ದರೂ ಅವರಿಗೆ ಕಠಿನ ಶಿಕ್ಷೆ ಆಗುವುದು ನಿಶ್ಚಿತ. ಇಲ್ಲಿ ಯಾರನ್ನೂ ರಕ್ಷಿಸುವ ಪ್ರಮೇಯವೇ ಇಲ್ಲ. ಯಾವ ಒತ್ತಡಕ್ಕೂ ಸರಕಾರ ಮಣಿಯುವುದಿಲ್ಲ. ರಾಜ್ಯದ ಪೊಲೀಸರು ಸಮರ್ಥರಿದ್ದು, ಈ ಪ್ರಕರಣವನ್ನು ಯಾವುದೇ ಕಾರಣಕ್ಕೂ ಸಿಬಿಐಗೆ ಕೊಡುವ ಅಗತ್ಯವಿಲ್ಲ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದರು. ಪ್ರತಿಭಟನೆಗೆ ಇಳಿದ ಬಿಜೆಪಿ
ಗೃಹ ಸಚಿವರು ಮತ್ತು ಸಿಎಂ ಅವರ ಉತ್ತರದಿಂದ ತೃಪ್ತರಾಗದ ವಿಪಕ್ಷ ಬಿಜೆಪಿಯ ಸದಸ್ಯರು ಧರಣಿ ಆರಂಭಿಸಿದರು. ಸಭಾಧ್ಯಕ್ಷ ಯು.ಟಿ. ಖಾದರ್ ಧರಣಿ ಕೈಬಿಡುವಂತೆ ಬಿಜೆಪಿ ಸದಸ್ಯರಿಗೆ ಮಾಡಿದ ಮನವಿ ಫಲಿಸಲಿಲ್ಲ. ಕೊನೆಗೆ ಸದನವನ್ನು 10 ನಿಮಿಷ ಮುಂದೂಡಲಾಯಿತು. ಮತ್ತೆ ಸದನ ಆರಂಭವಾದಾಗಲೂ ಧರಣಿ ಮುಂದುವರಿದಾಗ ಕಲಾಪವನ್ನು ಬುಧವಾರಕ್ಕೆ ಮುಂದೂಡಿದರು. ಮೇಲ್ಮನೆಯಲ್ಲಿಯೂ ಇದೇ ವಿಚಾರದಲ್ಲಿ ಗದ್ದಲ ಉಂಟಾಯಿತು. ವೇಣುಗೋಪಾಲ ಕೊಲೆ ಸಮಗ್ರ ತನಿಖೆ: ಸಿಎಂ
ಟಿ. ನರಸೀಪುರದ ಯುವ ಬ್ರಿಗೇಡ್‌ನ ಮುಖಂಡ ವೇಣುಗೋಪಾಲ್ ಸೇರಿದಂತೆ ರಾಜ್ಯದಲ್ಲಿ ನಡೆ ದಿರುವ ಎಲ್ಲ ಕೊಲೆ ಪ್ರಕರಣಗಳನ್ನು ಸರಕಾರ ಗಂಭೀರ ವಾಗಿ ಪರಿ ಗಣಿಸಿ ರಾಜ್ಯ ಪೊಲೀಸರಿಂದಲೇ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿನ ಶಿಕ್ಷೆ ಆಗುವಂತೆ ನೋಡಿಕೊಳ್ಳ ಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮಂಗಳವಾರ ವಿಧಾನಸಭೆ ಕಲಾಪದ ಶೂನ್ಯ ವೇಳೆಯಲ್ಲಿ ಬಿಜೆಪಿಯ ಬೊಮ್ಮಾಯಿ ಅವರು ವೇಣುಗೋಪಾಲ್ ಕೊಲೆ ಕುರಿತು ಮಾಡಿದ ಪ್ರಸ್ತಾವಕ್ಕೆ ಪ್ರತಿಕ್ರಿಯಿಸಿದ ಸಿಎಂ, ರಾಜ್ಯದ ಪೊಲೀಸರು ಅತ್ಯಂತ ಉತ್ತಮವಾಗಿ ತನಿಖೆ ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಎಲ್ಲ ಆಯಾಮದಿಂದಲೂ ತನಿಖೆ ನಡೆಸಲಾಗುತ್ತದೆ. ನಿಷ್ಪಕ್ಷ ತನಿಖೆ ನಡೆಸಿ ಖಂಡಿತವಾಗಿಯೂ ಕಠಿನ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಇದರ ಬಗ್ಗೆ ವಿಪಕ್ಷದವರಿಗೆ ಯಾವುದೇ ಸಂಶಯ ಬೇಡ ಎಂದರು. ಒಂದೂವರೆ ತಿಂಗಳಿನಲ್ಲಿ ಪೊಲೀಸರ ದಕ್ಷತೆ
ಕುಗ್ಗಿತೇ: ಪರಮೇಶ್ವರ ಚಾಟಿ
“ಬೊಮ್ಮಾಯಿ ಅವರೇ, ನಿಮ್ಮ ಸರಕಾರ ಇದ್ದಾಗ, ನೀವು ಗೃಹ ಸಚಿವರಾಗಿ ಇದ್ದಾಗಲೂ ಅನೇಕ ಕೊಲೆ ಪ್ರಕರಣಗಳನ್ನು ರಾಜ್ಯದ ಪೊಲೀಸರು ಬೇಧಿಸಿದ್ದಾರೆ. ಆಗ ಅವರ ಕಾರ್ಯವನ್ನು ನೀವು ಶ್ಲಾ ಸಿದ್ದೀರಿ. ಈಗ ಜೈನ ಮುನಿಗಳ ಹತ್ಯೆಯ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎನ್ನುತ್ತೀರಿ. ಹಾಗಿದ್ದರೆ ನಿಮಗೆ ರಾಜ್ಯದ ಪೊಲೀಸರಿಂದ ಇದು ಸಾಧ್ಯವಿಲ್ಲ ಅನ್ನಿಸುತ್ತಿದೆಯೇ? ಕೇವಲ ಒಂದೂವರೆ ತಿಂಗಳ ಹಿಂದಷ್ಟೇ ರಾಜ್ಯದ ಪೊಲೀಸರ ಕಾರ್ಯವನ್ನು ಬಾಯಿತುಂಬಾ ಹೊಗಳುತ್ತಿದ್ದ ನಿಮಗೆ ಈಗ ಅವರ ಬಗ್ಗೆ ವಿಶ್ವಾಸ ಕುಗ್ಗಿತೇ’ ಎಂದು ಬಿಜೆಪಿ ಮುಖಂಡರೆಲ್ಲರಿಗೂ ಗೃಹ ಸಚಿವ ಪರಮೇಶ್ವರ ಅವರು ಚಾಟಿ ಬೀಸಿದರು.