Advertisement

ಸರ್ಕಾರ ಎಚ್ಚರಿಸುವ ಕೆಲಸ ರೈತರಿಂದಾಗಲಿ: ಧರ್ಮೇಗೌಡ

04:24 PM Nov 30, 2018 | |

ಚಿಕ್ಕಮಗಳೂರು: ರೈತರ ಸಂಕಷ್ಟಕ್ಕೆ ರೈತರೇ ಸ್ಪಂದಿಸಬೇಕೆ ಹೊರತು ಬೇರೆ ಯಾರೂ ಬರುವುದಿಲ್ಲ. ರೈತರು ಸರ್ಕಾರವನ್ನು ಅವಲಂಬಿಸದೆ ಸರ್ಕಾರ ಎಚ್ಚರಿಸುವ ಕೆಲಸವಾಗಬೇಕಿದೆ ಎಂದು ವಿಧಾನಪರಿಷತ್‌ ಸದಸ್ಯ ಎಸ್‌.ಎಲ್‌.ಧರ್ಮೇಗೌಡ ಹೇಳಿದರು.

Advertisement

ಜಿಪಂ, ಕೃಷಿ ಇಲಾಖೆಗಳ ಆಶ್ರಯದಲ್ಲಿ ನಗರದ ಕನಕ ಸಮುದಾಯ ಭವನದಲ್ಲಿ ಗುರುವಾರ ಆಯೋಜಿಸಲಾಗಿದ್ದ ವಿಶ್ವಬ್ಯಾಂಕ್‌ ನೆರವಿನ ಸುಜಲ-3 ಯೋಜನೆಯಡಿ ಭೂ ಸಂಪನ್ಮೂಲ ಮಾಹಿತಿ ಪಾಲುದಾರರ ಹಾಗೂ ರೈತರ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ.

ಗುಣಮಟ್ಟವನ್ನು ಕಾಪಾಡಿಕೊಂಡು ಉತ್ತಮ ಇಳುವರಿ ಪಡೆದುಕೊಳ್ಳುವತ್ತ ಗಮನಹರಿಸಬೇಕು. ವೈಜ್ಞಾನಿಕ ಕೃಷಿ ಪದ್ಧತಿ ಎಲ್ಲರೂ ತಿಳಿದುಕೊಳ್ಳಬೇಕು. ತಮ್ಮಲ್ಲಿ ಇರುವ ಅನುಮಾನಗಳ ಕುರಿತು ವಿಜ್ಞಾನಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದರು. ನಿಸರ್ಗಕ್ಕೆ ವಿರುದ್ಧವಾಗಿ ಯಾರೂ ಹೋಗಬಾರದು. ನೈಸರ್ಗಿಕ ಸಂಪತ್ತನ್ನು ಕಡಿಮೆ ಮಾಡಿ, ಎಷ್ಟೇ ರಾಸಾಯನಿಕ ಗೊಬ್ಬರ ಬೆಳೆಗೆ ಹಾಕಿದರೂ ಅದು ಪ್ರಯೋಜನ ಆಗುವುದಿಲ್ಲವೆಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಬಗ್ಗೆ ಪ್ರತಿಯೊಬ್ಬರೂ ಯೋಚಿಸುವುದು ಅಗತ್ಯವಿದೆ ಎಂದು ಹೇಳಿದರು.

ಇಂದು ನಡೆಯುತ್ತಿರುವುದು ಅತ್ಯಂತ ಉತ್ತಮವಾದ ಕಾರ್ಯಕ್ರಮ. ಹವಾಮಾನ ವೈಪರೀತ್ಯದಿಂದ ತತ್ತರಿಸಿರುವ ರೈತರು ಕೃಷಿಯನ್ನು ಉಳಿಸಿ ಬೆಳೆಸಲು ಅನುಕೂಲವಾಗುವಂತಹ ಕಾರ್ಯಕ್ರಮ ಇದಾಗಿದೆ. ಇಲ್ಲಿ ವಿಜ್ಞಾನಿಗಳು ಹೇಳುವ ಪ್ರತಿಯೊಂದು
ವಿಚಾರವನ್ನೂ ಗಮನವಿಟ್ಟು ಕೇಳಿ ಉತ್ತಮ ಇಳುವರಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಜಂಟಿ ಕೃಷಿ ನಿರ್ದೇಶಕ ಕೆ.ಎಂ. ಸೋಮಸುಂದರ್‌ ಮಾತನಾಡಿ, ಸುಜಲ 3 ಯೋಜನೆಯಡಿ ಜಿಲ್ಲೆಯ ತರೀಕೆರೆ ತಾಲೂಕಿನ 106, ಕಡೂರು ತಾಲ್ಲೂಕಿನ 7 ಹಾಗೂ ಚಿಕ್ಕಮಗಳೂರು ತಾಲೂಕಿನ 2 ಸ್ಥಳಗಳ 69,650 ಹೆಕ್ಟೇರ್‌ ಪ್ರದೇಶದ ಮಣ್ಣು ಪರೀಕ್ಷೆ
ಮಾಡಲಾಗಿದೆ. ಇಂದು ಮಣ್ಣು ಪರೀಕ್ಷಾ ಕಾರ್ಡಗಳನ್ನು ರೈತರಿಗೆ ವಿತರಿಸಲಾಗುತ್ತಿದೆ. ಈ ಕಾರ್ಡಿನಲ್ಲಿ ಪರೀಕ್ಷೆ ಮಾಡಲಾಗಿರುವ ಮಣ್ಣಿನ ಗುಣಮಟ್ಟವೇನು, ಅಲ್ಲಿ ಯಾವ ಬೆಳೆಯನ್ನು ಯಾವಾಗ ಬೆಳೆಯಬಹುದು ಎಂಬೆಲ್ಲ ಮಾಹಿತಿಗಳು ಇರುತ್ತವೆ. ರಾಜ್ಯಾದ್ಯಂತ
ಪ್ರಾಯೋಗಿಕವಾಗಿ 11 ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಮಣ್ಣು ಪರೀಕ್ಷೆ ಮಾಡಿ ಮಣ್ಣು ಪರೀಕ್ಷಾ ಕಾರ್ಡ್‌ಗಳನ್ನು ರೈತರಿಗೆ ವಿತರಿಸಲಾಗುವುದು ಎಂದರು.

Advertisement

ಕಷ್ಟದಲ್ಲಿ ಕೃಷಿ ಮಾಡಿದರೂ ನಿರೀಕ್ಷಿತ ಮಟ್ಟದ ಇಳುವರಿ ಸಾಧ್ಯವಾಗುತ್ತಿಲ್ಲ. ವೈಜ್ಞಾನಿಕ ಪದ್ಧತಿಯಿಂದ ಬೆಳೆ ಬೆಳೆದರೆ ಮಾತ್ರ ಉತ್ತುಮ ಇಳುವರಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಎದರು. ಜಿಪಂ ಅಧ್ಯಕ್ಷೆ ಸುಜಾತಾ ಅಧ್ಯಕ್ಷತೆ ವಹಿಸಿದ್ದರು. ಜಿಪಂ
ಉಪಾಧ್ಯಕ್ಷ ಆನಂದಪ್ಪ, ಸದಸ್ಯರಾದ ಜಸಿಂತಾ ಅನಿಲ್‌ ಕುಮಾರ್‌, ಬೆಳವಾಡಿ ರವೀಂದ್ರ, ಸೋಮಶೇಖರ್‌, ಮಹೇಂದ್ರ, ಪ್ರೇಮಾ ಮಂಜುನಾಥ್‌, ಲೋಲಾಕ್ಷಿ ಬಾಯಿ, ತಾಪಂ ಅಧ್ಯಕ್ಷ ನೆಟ್ಟೇಕೆರೆಹಳ್ಳಿ ಜಯಣ್ಣ, ಉಪಾಧ್ಯಕ್ಷ ರಮೇಶ್‌, ಸಿಇಒ ಸತ್ಯಭಾಮಾ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next