Advertisement
ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ ಎಸ್.ಎಲ್. ಧರ್ಮೆಗೌಡ ಹಾಗೂ ಬೋಜೇಗೌಡರವರಿಗೆ ಗುರುವಾರ ನಗರದ ಒಕ್ಕಲಿಗರ ಭವನದಲ್ಲಿ ಜಿಲ್ಲಾ ಜೆಡಿಎಸ್ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
Related Articles
ಮಾಡಿದ್ದಾರೆ. ಜೆಡಿಎಸ್‌ನ ಜಿಲ್ಲಾ ಮುಖಂಡರ ನಿಯೋಗ ಮುಖ್ಯಮಂತ್ರಿಗಳ ಬಳಿ ತೆರಳಿ ಧರ್ಮೇಗೌಡರಿಗೆ ಸಚಿವಸ್ಥಾನ ನೀಡುವಂತೆ ಒತ್ತಾಯಿಸಬೇಕು ಎಂದರು.
Advertisement
ಸ್ವಾಗತ ಸಮಿತಿ ಅಧ್ಯಕ್ಷ ಎಚ್.ಎಚ್. ದೇವರಾಜ್ ಮಾತನಾಡಿ, ಎಸ್.ಎಲ್. ಧರ್ಮೇಗೌಡ ಮತ್ತು ಎಸ್.ಎಲ್. ಭೋಜೇಗೌಡರು ಜಿಲ್ಲೆಯಲ್ಲಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ದುಡಿಯಬೇಕು ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಎಸ್. ಎಲ್. ಧರ್ಮೇಗೌಡ, ಜಿಲ್ಲೆಯ ಬಯಲು ಸೀಮೆಗೆ ನೀರೊದಗಿಸುವ ಕರಗಡ ಕುಡಿಯುವ ನೀರಿನ ಯೋಜನೆಯ 2ನೇ ಹಂತದ ಕಾಮಗಾರಿಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ 20ಕೋಟಿ ರೂ. ಹಣ ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದರು. ಎಸ್.ಎಲ್.ಭೋಜೇಗೌಡ ಮಾತನಾಡಿ, ಅಭಿಮಾನಿಗಳು, ಶಿಕ್ಷಕರು ಮತ್ತು ಜಿಲ್ಲೆಯ ಜನರ ನಿರೀಕ್ಷೆಗೆ ತಕ್ಕಂತೆ ಪ್ರಾಮಾಣಿಕವಾಗಿ ಮತ್ತು ಪಕ್ಷಾತೀತವಾಗಿ ಕೆಲಸ ಮಾಡಲಾಗುವುದು ಎಂದರು. ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಎಸ್.ಎಲ್ .ಧರ್ಮೇಗೌಡ ಮತ್ತು ಎಸ್.ಎಲ್.ಭೋಜೇಗೌಡ ಸಹೋದರರನ್ನು ಅಭಿನಂದಿಸಲಾಯಿತು. ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್
ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಮುಖಂಡರಾದ ಎಂ.ಎಸ್. ಬಾಲಕೃಷ್ಣೇಗೌಡ, ಎಚ್.ಜಿ. ವೆಂಕಟೇಶ್, ಎಚ್.ಟಿ. ರಾಜೇಂದ್ರ, ಎಚ್.ಎಸ್. ಮಂಜಪ್ಪ, ಜಿ.ಎಚ್. ಚಂದ್ರಪ್ಪ, ಜಮೀಲ್ ಅಹಮದ್, ಉಮಾಪತಿ, ಚಂದ್ರೇಗೌಡ, ಎಂ.ಎಲ್. ವಸಂತ ಕುಮಾರಿ, ಜ್ಯೋತಿ ಈಶ್ವರ್, ಪದ್ಮಾ ತಿಮ್ಮೇಗೌಡ, ಮಾನು ಮಿರಾಂಡ, ವಿನಯ್ ಕೋಟೆ, ಭೈರೇಗೌಡ, ಡಿ.ಜೆ. ಸುರೇಶ್, ನಿಸಾರ್ ಅಹಮದ್, ಎಚ್.ಸಿ. ಕೃಷ್ಣೇಗೌಡ, ಎಂ. ನರೇಂದ್ರ, ಹೊಲದಗದ್ದೆ ಗಿರೀಶ್, ಎಂ.ಡಿ. ರಮೇಶ್, ದಿನೇಶ್, ಆನಂದ ನಾಯ್ಕ ಇದ್ದರು. ಅಭಿನಂದನೆ ಮಹಾಪುರ: ಎಸ್.ಎಲ್.ಡಿ ಮತ್ತು ಎಸ್.ಎಲ್.ಬಿ ಸಹೋದರರನ್ನು ಅಭಿನಂದಿಸಲು ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿ ಬೆಳಗಿನಿಂದ ಕಾದು ನಿಂತಿದ್ದ ಪಕ್ಷದ ಪದಾಧಿಕಾರಿಗಳು, ನೂರಾರು ಕಾರ್ಯಕರ್ತರು, ಅಭಿಮಾನಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಕಾರ್ಯಕ್ರಮದ ನಡುವೆಯೇ ಸಂಘಟಕರ ತಡೆಯನ್ನೂ ಲೆಕ್ಕಿಸದೆ ವೇದಿಕೆಗೆ ತೆರಳಿ ಸಹೋದರರನ್ನು ಅಭಿನಂದಿಸಿದರು.