Advertisement

ರಿಲಯನ್ಸ್‌ ಕಮ್ಯುನಿಕೇಷನ್‌ಗೆ 104 ಕೋಟಿ ರೂ. ನೀಡಲು ಕೇಂದ್ರಕ್ಕೆ ಸುಪ್ರೀಂ ಆದೇಶ

09:48 AM Jan 08, 2020 | Team Udayavani |

ನವದೆಹಲಿ: ರಿಲಯನ್ಸ್‌ ಕಮ್ಯುನಿಕೇಷನ್‌ ಕಂಪನಿಗೆ 104 ಕೋ0ಟಿ ರೂ. ಪಾವತಿಸಬೇಕು ಎಂದು ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ. ದೂರಸಂಪರ್ಕ ಇಲಾಖೆ ಮತ್ತು ಆರ್‌.ಕಾಂ ನಡುವೆ ಇರುವ ಪಾವತಿ ವಿಚಾರಕ್ಕೆ ಸಂಬಂಧಿಸಿದ ವ್ಯಾಜ್ಯ ಇದಾಗಿದೆ. ರಿಲಯನ್ಸ್‌ಗೆ 104 ಕೋಟಿ ರೂ. ಮೊತ್ತವನ್ನು ವಾಪಸ್‌ ಮಾಡುವಂತೆ ದೂರಸಂಪರ್ಕ ವ್ಯಾಜ್ಯ ಇತ್ಯರ್ಥ ಮತ್ತು ಮೇಲ್ಮನವಿ ನ್ಯಾಯಮಂಡಳಿ (ಟಿಡಿಸ್ಯಾಟ್‌) ಕೇಂದ್ರಕ್ಕೆ ಆದೇಶ ನೀಡಿತ್ತು.

Advertisement

ಅದನ್ನು ಪ್ರಶ್ನಿಸಿ ಕೇಂದ್ರ ದೂರಸಂಪರ್ಕ ಇಲಾಖೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಸ್ಪೆಕ್ಟ್ರಂ ಹಂಚಿಕೆ ವಿಚಾರಕ್ಕಾಗಿ ಕೇಂದ್ರ ಸರ್ಕಾರ ಉದ್ಯಮಿ ಅನಿಲ್‌ ಅಂಬಾನಿ ನೇತೃತ್ವದ ಕಂಪನಿಯಿಂದ ಶುಲ್ಕದ ರೂಪದಲ್ಲಿ ಪಡೆದುಕೊಂಡಿತ್ತು. ಕೇಂದ್ರ ಸರ್ಕಾರ ಸಲ್ಲಿಸಿದ ಮೇಲ್ಮನವಿಯಲ್ಲಿ ಯಾವುದೇ ಸಮರ್ಥನೀಯ ಅಂಶ ಇಲ್ಲ ಎಂದು ನ್ಯಾ.ಆರ್‌.ಎಫ್.ನಾರಿಮನ್‌ ಮತ್ತು ನ್ಯಾ.ಎಸ್‌.ರವೀಂದ್ರ ಭಟ್‌ ಅವರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ. ಒಟ್ಟು ಮೊತ್ತದ ಪೈಕಿ 30.33 ಕೋಟಿ ರೂ. ಮೊತ್ತವನ್ನು ಈಗಾಗಲೇ ಹೊಂದಾಣಿಕೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next