Advertisement

ಕೋವಿಡ್‌ 3ನೇ ಅಲೆ ನಿಯಂತ್ರಣಕ್ಕೆ ಸರ್ಕಾರ ಕ್ರಮ: ಸಚಿವ

04:22 PM Aug 31, 2021 | Team Udayavani |

ತುಮಕೂರು: ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿರುವ ರಾಜ್ಯ ಸರ್ಕಾರ, ಕೋವಿಡ್‌ 3ನೇ ಅಲೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದು
ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ ಎಂದು ಅಬಕಾರಿ ಮತ್ತು ಹಾಸನ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ತಿಳಿಸಿದರು.

Advertisement

ತಾಲೂಕಿನ ಊರ್ಡಿಗೆರೆ ಹೋಬಳಿ ಕೆಸರುಮಡು ಗ್ರಾಪಂನ ಬೊಮ್ಮನಹಳ್ಳಿಯ ಶ್ರೀಮಾರಮ್ಮ ದೇವಾಲಯದಲ್ಲಿ ಮಾದಪ್ಪ ಮತ್ತು ಕುಟುಂಬದವರು ನಿರ್ಮಾಣ ಮಾಡಿರುವ ಸಮುದಾಯ ಭವನವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ನಿಯಮ ಪಾಲಿಸಿ: ಕೋವಿಡ್‌ನಿಂದಾಗಿ ಜಗತ್ತು ತತ್ತರಗೊಂಡಿದೆ. ಮುಂಬರುವ 3ನೇ ಅಲೆ ಬಗ್ಗೆ ಜನ ಎಚ್ಚರಿಕೆ ವಹಿಸಬೇಕು, ಕೋವಿಡ್‌ 3ನೇ ಅಲೆ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದು, ಸಾರ್ವಜನಿಕ ಸಭೆ ಸಮಾರಂಭ ಮಾಡುವ ಮುಂಚೆ ಸರ್ಕಾರದ ನಿಯಮಾ ವಳಿಯನ್ನು ಪಾಲಿಸಬೇಕು ಎಂದು ಹೇಳಿದರು.

ಮುಖಂಡರಿಗೆಋಣಿ: ಬೊಮ್ಮನಹಳ್ಳಿ ನನ್ನ ತಾಯಿಯತವರು. ಹೀಗಾಗಿ ಮಾರಮ್ಮನ ದೇವಾಲಯದಲ್ಲಿ ಊಟದ ಕೊಠಡಿ ಮತ್ತು ಅಡುಗೆ ಕೊಠಡಿಯನ್ನು ನಮ್ಮ ತಾಯಿ ಕಾಳಮ್ಮ ಹೆಸರಿನಲ್ಲಿ ನಿರ್ಮಾಣ ಮಾಡುವುದಾಗಿ ತಿಳಿಸಿದ ಅವರು, ಮಹಾಲಕ್ಷ್ಮಿ ಲೇಔಟ್‌ ವಿಧಾನಸಭಾ ಚುನಾವಣೆಯಲ್ಲಿ ಊರ್ಡಿ ಗೆರೆ ಭಾಗದ ಮುಖಂಡರು ಪಕ್ಷಾತೀತವಾಗಿ ಆಗಮಿಸಿ ತನ್ನ ಪರ ಪ್ರಚಾರ ಮಾಡಿ, ಗೋಪಾಲಯ್ಯನಿಗೆ ಮತ
ಹಾಕಿ ಎಂದು ಮತ ಹಾಕಿಸಿದ್ದಾರೆ. ಈ ಭಾಗದ ಮುಖಂಡರಿಗೆಲ್ಲಾ ತಾನು ಋಣಿ ಎಂದು ತಿಳಿಸಿದರು.

ಇದನ್ನೂ ಓದಿ:ಪುಣ್ಯಕ್ಷೇತ್ರ ‘ಮಥುರಾ’ದಲ್ಲಿ ಮಾಂಸ-ಮದ್ಯ ಮಾರಾಟ ನಿಷೇಧಿಸಿದ ಸಿಎಂ ಯೋಗಿ  

Advertisement

ಅಭಿವೃದ್ಧಿಗೆ ಶ್ರಮ: ಮಾಜಿ ಶಾಸಕ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಸುರೇಶ್‌ಗೌಡ ಮಾತನಾಡಿ, ಬಡವರ ಪರವಾಗಿ ಯಾವಾಗಲೂ ಕೆಲಸ ಮಾಡುವ ಗೋಪಾಲಯ್ಯ ಅವರಿಗೆ ಊರ್ಡಿಗೆರೆ ಹೋಬಳಿಯ ಗ್ರಾಮಗಳಲ್ಲಿ ನೆಂಟರಿದ್ದಾರೆ. ಗೋಪಾಲಯ್ಯ ಅವರ ಮನೆಗೆ ಯಾರೇ ಹೋದರೂ ಬರಿಗೈಯಲ್ಲಿ ಬಂದಿಲ್ಲ. ಮಹಾನ್‌ ದಾನಿಯಾಗಿರುವ ಗೋಪಾಲಯ್ಯ ಅವರು ಬಡವರ ಮದುವೆ ಸೇರಿದಂತೆ ಇನ್ನಿತರ ಕಾರ್ಯಗಳಿಗೆ
ಅನುಕೂಲವಾಗುವಂತೆ ಸಮುದಾಯ ಭವನ ನಿರ್ಮಾಣಕ್ಕೆ ಸಹಾಯ ಮಾಡುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಸಹಕಾರದಿಂದ ಗ್ರಾಮದ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ದೇವೇಗೌಡ, ನರಸಿಂಹಯ್ಯ, ಬಯಲುಸೀಮೆ ಪ್ರಾಧಿಕಾರ ಮಂಡಳಿ ಮಾಜಿ ಅಧ್ಯಕ್ಷ ಕೆ.ಎ.
ದೇವರಾಜು, ಮಾರಮ್ಮ ದೇಗುಲ ಟ್ರಸ್ಟ್‌ ಅಧ್ಯಕ್ಷ ಗಂಗಪ್ಪ, ಕಾರ್ಯದರ್ಶಿ ಹಾಗೂ ಬೊಮ್ಮನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಮಾರೇಗೌಡ, ಗೌರವಾಧ್ಯಕ್ಷ ವೆಂಕಟಸ್ವಾಮಿ, ಸಹ ಕಾರ್ಯದರ್ಶಿ ನಾಗರಾಜು, ಕೆಸರಮಡು ಗ್ರಾಪಂ ಅಧ್ಯಕ್ಷೆ ಸಿದ್ಧಗಂಗಮ್ಮ, ಉಪಾಧ್ಯಕ್ಷ ಮನ್ಸೂರ್‌ ಅಹಮದ್‌ ಪಾಷಾ, ಪಿಡಿಒ ಎ.ತೀರ್ಥ, ಗ್ರಾಪಂ ಸದಸ್ಯ ಸಂಪತ್‌ಕುಮಾರ್‌, ಕೆ.ಮಂಜುಳಾ, ರತ್ನಮ್ಮ ಮತ್ತಿತರರು ಉಪಸ್ಥಿತರಿದ್ದರು.

ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ
ಕೋವಿಡ್‌ ಹಾವಳಿಯಿಂದಾಗಿ ಸರ್ಕಾರ ಅಭಿವೃದ್ಧಿ ಕಾರ್ಯಗಳ ಕಡೆ ಗಮನ ಹರಿಸಲು ಆಗಲಿಲ್ಲ.ಕೋವಿಡ್‌ ವ್ಯಾಪಕವಾಗಿ ಹರಡುತ್ತಿರುವುದ
ರಿಂದ ಗ್ರಾಮಾಂತರ ಪ್ರದೇಶದಲ್ಲಿರುವವರು ಎಚ್ಚರಿಕೆ ವಹಿಸಬೇಕು.ಕೋವಿಡ್‌ ದೂರವಾಗುವವರೆಗೆ ಅದರೊಂದಿಗೆ ಜೀವಿಸುವುದನ್ನುಕಲಿತು
ನಾವು ಪ್ರಗತಿ ಸಾಧಿಸಬೇಕಿದೆ. ಆ ನಿಟ್ಟಿನಲ್ಲಿ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸರ್ಕಾರ ತೀರ್ಮಾನಕೈಗೊಂಡಿದ್ದು, ಮುಂದಿನ ಎರಡು
ವರ್ಷ ರಾಜ್ಯದಲ್ಲಿ ನಿರಂತರವಾಗಿ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದು ಸಚಿವ ಗೋಪಾಲಯ್ಯ ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next