Advertisement
ಗುರುವಾರ ಪಟ್ಟಣದ ಬಂಗಾರಧಾಮದಲ್ಲಿ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಎಚ್. ಕಾಂತರಾಜು ಅವರ ಆಯೋಗದ ನೇತೃತ್ವದಲ್ಲಿ ನಡೆದಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿವಾರು ಸಮೀಕ್ಷೆಯ ವರದಿಯನ್ನು ಈ ಕೂಡಲೇ ಬಿಡುಗಡೆ ಮಾಡಬೇಕು. ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಸುಭಾಷ್ ಆಡಿ ಅವರ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.
Related Articles
Advertisement
ದೇವರಾಜ ಅಸರು ಅಭಿವೃದ್ಧಿ ನಿಗಮಕ್ಕೆ 2000 ಕೋಟಿ ರೂ. ನೀಡಬೇಕು ಎಂದ ಅವರು, ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿವಾರು ಸಮೀಕ್ಷೆಯ ವರದಿಯನ್ನು ಕೂಡಲೇ ಜಾರಿಗೊಳಿಸಲು ಆಗ್ರಹಿಸಿ ಅ. 30ರಂದು ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಈದ್ಗಾ ಮೈದಾನದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು, ಈ ಧರಣಿ ಸತ್ಯಾಗ್ರಹಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿವಿಧ ಹಿಂದುಳಿದ ಸಮುದಾಯಗಳ ನಾಯಕರು ಆಗಮಿಸಲಿದ್ದಾರೆ. ತಾಲ್ಲೂಕಿನ ಹಿಂದುಳಿದ ವರ್ಗಗಳ ಸಮಾಜದವರು ಪಾಲ್ಗೊಂಡು ಧರಣಿಯನ್ನು ಯಶಸ್ವಿಗೊಳಿಸಿಕೊಡುವಂತೆ ವಿನಂತಿಸಿದರು.
ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ವಿ. ರಾಜು, ಪ್ರಧಾನ ಕಾರ್ಯದರ್ಶಿ ಅಶೋಕ ಕುಮಾರ್, ಸೂಡ ಮಾಜಿ ಅಧ್ಯಕ್ಷ ಎನ್. ರಮೇಶ, ಜಿಲ್ಲಾ ಮುಖಂಡರಾದ ಪಿ. ಶೇಷಾದ್ರಿ, ಗೋಪಾಲ. ಅಶೋಕ್, ಲೋಕೇಶ್, ತಾಲೂಕು ಈಡಿಗ ಸಮಾಜದ ಅಧ್ಯಕ್ಷ ಕೆ. ಅಜ್ಜಪ್ಪ, ಕುರುಬ ಸಮಾಜದ ಅಧ್ಯಕ್ಷ ನಿಂಗಪ್ಪ, ಮಡಿವಾಳ ಸಮಾಜದ ಅಧ್ಯಕ್ಷ ಗುಡ್ಡಪ್ಪ, ವಿಶ್ವಕರ್ಮ ಸಮಾಜದ ಪ್ರಮುಖರಾದ ಜಗದೀಶ ಕಕ್ಕರಸಿ, ದೈವಜ್ಞ ಬ್ರಾಹ್ಮಣ ಸಮಾಜದ ಶ್ರೀಕಾಂತ ಶೇಟ್, ದೇವಾಂಗ ಸಮಾಜದ ಪರಸಪ್ಪ, ಮುಖಂಡರಾದ ಕೆ. ಮಂಜುನಾಥ್, ತಬಲಿ ಬಂಗಾರಪ್ಪ, ನಾಗರಾಜ ಚಿಕ್ಕಸವಿ, ಅಣ್ಣಪ್ಪ ಹಾಲಘಟ್ಟ, ಎಚ್. ಗಣಪತಿ, ಪ್ರವೀಣ್ ಹಿರೇಇಡಗೋಡು, ಕುಮಾರ್ ಉಮಟೆಗದ್ದೆ, ಎಂ.ಡಿ.ಶೇಖರ್, ಕಲ್ಲಪ್ಪ, ನಾಗರಾಜ್ ಕೈಸೋಡಿ, ರಾಜಣ್ಣ ಸೇರಿದಂತೆ ವಿವಿಧ ಸಮುದಾಯದವರು ಇದ್ದರು.