Advertisement

‘ಸರ್ಕಾರಿ ಸೇವೆಗಳು ನಿಮ್ಮ ಮನೆ ಬಾಗಿಲಿಗೆ’ಚಾಲನೆ

11:24 AM Jan 05, 2022 | Team Udayavani |

ಆಳಂದ: ಸರ್ಕಾರದ ಹಲವು ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ “ಸರ್ಕಾರಿ ಸೇವೆಗಳು ನಿಮ್ಮ ಮನೆ ಬಾಗಿಲಿಗೆ’ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

Advertisement

ಪಟ್ಟಣದ ಹೊರಲವಯದ ತಾಲೂಕು ಆಡಳಿತ ಸೌಧ ಆವರಣದಲ್ಲಿ ಸರ್ಕಾರಿ ಯೋಜನೆಗಳು ಜನರ ಮನೆಬಾಗಿಲಿಗೆ ತಲುಪಿಸುವ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಸಿಎಂ, ಈ ಸೇವೆ ಸಂಪೂರ್ಣವಾಗಿ ಉಚಿತವಾಗಿದ್ದು, ಇದರಡಿ ಸಾಮಾಜಿಕ, ಭದ್ರತಾ ಪಿಂಚಣಿ, ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌, ಪ್ರಧಾನಮಂತ್ರಿ ಜನ್‌ಧನ್‌ ಯೋಜನೆ, ಕಾರ್ಮಿಕ ಕಾರ್ಡ್‌ ಸೇರಿದಂತೆ 12 ವಿವಿಧ ಸೇವೆಗಳನ್ನು ಉಚಿತವಾಗಿ ಸ್ವಯಂ ಸೇವಕರ ಮೂಲಕ ನೀಡುವ ಗುರಿ ಹೊಂದಲಾಗಿದೆ. ಈಗಾಗಲೇ ಬೂತ್‌ ಮಟ್ಟದಲ್ಲಿ ಪ್ರತಿಬೂತ್‌ಗೆ ಇಬ್ಬರನ್ನು ಸ್ವಯಂ ಸೇವಕರಂತೆ ನೇಮಿಸಿಕೊಳ್ಳಲಾಗಿದೆ. ಇದು ಸಂಪೂರ್ಣ ಸೇವಾಧಾರಿತ ಯೋಜನೆಯಾಗಿದೆ. ಇದರ ಲಾಭವನ್ನು ಜನ ಸಾಮಾನ್ಯರು ಪಡೆದುಕೊಳ್ಳಬೇಕು ಎಂದರು.

ಸಿಎಂಗೆ ಬೆಳ್ಳಿ ನೇಗಿಲು ಮತ್ತು ರೈತ ಬಂಧು ಬಿರುದು ನೀಡಿ ತಾಲೂಕಿನ ಪರವಾಗಿ ಶಾಸಕ ಸುಭಾಷ ಗುತ್ತೇದಾರ ಸನ್ಮಾನಿಸಿದರು. ಕೇಂದ್ರ ಸಚಿವ ಭಗವಂತ ಖೂಬಾ, ಸಚಿವ ಮುರುಗೇಶ ನಿರಾಣಿ, ಫೌಂಡೇಷನ್‌ ಕಾರ್ಯದರ್ಶಿ ಹರ್ಷಾನಂದ ಗುತ್ತೇದಾರ ಮತ್ತಿತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next