Advertisement

ಆರೋಪಿಗಳಿಗೆ ಜಾಮೀನು ಕೊಡಿಸಲು ಸರಕಾರಿ ಕಚೇರಿ ಸೀಲ್‌ ನಕಲು: 9 ಸೆರೆ

11:15 PM Apr 23, 2022 | Team Udayavani |

ಬೆಂಗಳೂರು: ಆರೋಪಿ ಗಳಿಗೆ ಜಾಮೀನು ಕೊಡಿಸಲು ಸರಕಾರಿ ಕಚೇರಿಯ ಸೀಲ್‌ಗ‌ಳನ್ನು ನಕಲು ಮಾಡಿ ದಾಖಲಾತಿಗಳನ್ನು ಸೃಷ್ಟಿಸುತ್ತಿದ್ದ ಜಾಲ ಪತ್ತೆ ಹಚ್ಚಿರುವ ಸಿಟಿ ಮಾರುಕಟ್ಟೆ ಪೊಲೀಸರು ಓರ್ವ ಮಹಿಳೆ ಸಹಿತ 9 ಮಂದಿಯನ್ನು ಬಂಧಿಸಿದ್ದಾರೆ.

Advertisement

ಹೆಗ್ಗನಹಳ್ಳಿಯ ಪುಟ್ಟಸ್ವಾಮಿ (47), ತುಕೂರು ಜಿಲ್ಲೆ ಮಧುಗಿಯ ಹಜೀ ಮೊಹಲ್ಲಾದ 1ನೇ ಬ್ಲಾಕ್‌ ನಿವಾಸಿ ನಸ್ರಿನ್‌ (27), ಚಿಕ್ಕಬಳ್ಳಪಾರು ಜಿಲ್ಲೆಯ ಪೊಲೀಸ್‌ ಕ್ವಾಟ್ರಸ್‌ ಹಿಂಭಾಗದ ಪ್ರಶಾಂತನಗರ ನಿವಾಸಿ ರಾಜಣ್ಣ (52), ಚಿಕ್ಕಬಳ್ಳಾಪುರ ಚಿಕ್ಕಪೈಲಾದ ನಿವಾಸಿ ಮಂಜುನಾಥ್‌, ಹೆಣ್ಣೂರು ಸಮೀಪದ ಬಿಲೆ ಶಿವಾಲೆಯ ನಿವಾಸಿ ಆಂಜಿನಪ್ಪ (43), ಬೆಂಗಳೂರಿನ ಲಕ್ಷ್ಮಣ ನಗರದ ಕುಮಾರ್‌ (43), ಚನ್ನರಾಯ ಪಟ್ಟಣದ ಅಗ್ರಹಾರ ಗ್ರಾಮದ ನಿವಾಸಿ ಚಂದ್ರೇಗೌಡ (38), ಕೋಲಾರದ ಜಂಗಲ ಗ್ರಾಮದ ನಿವಾಸಿ ಸೂಣ್ಣಿಗೌಡ (41), ಶಿಡ್ಲಘಟ್ಟ ತಾಲೂಕಿನ ಹೇಮಲ ಹಳ್ಳಿ ಹೋಬಳಿ ಪುಟ್ಟಪರ್ತಿ ಗ್ರಾಮದ ಟಿ.ಎಂ.ರಾಜಪ್ಪ (48) ಬಂಧಿತರು.

ಇದನ್ನೂ ಓದಿ:ಪಶ್ಚಿಮ ಬಂಗಾಳದಲ್ಲಿ 13 ಅಕ್ರಮ ರೋಹಿಂಗ್ಯಾ ವಲಸಿಗರ ಬಂಧನ

ವಾಹನ ತಪಾಸಣೆ ವೇಳೆ ಸಿಕ್ಕಿಬಿದ್ದರು
ಸಿಟಿ ಮಾರುಕಟ್ಟೆ ಪೊಲೀಸರು ಎ.19ರಂದು ರಾತ್ರಿ 10.30ರ ಸುಮಾರಿನಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಬಂದ ಆಟೋರಿಕ್ಷಾವನ್ನು ತಡೆದು ಪರಿಶೀಲಿಸಿದಾಗ ಅದರಲ್ಲಿದ್ದ ಇಬ್ಬರ ಬ್ಯಾಗ್‌ನಲ್ಲಿ ಸರಕಾರಿ ಕಚೇರಿಯ ಸೀಲು ಹಾಗೂ ದಾಖಲೆಗಳು ಇರುವುದು ಕಂಡುಬಂದಿದೆ.

ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ತಮ್ಮ ಸಂಗಡಿಗರೊಂದಿಗೆ ಸೇರಿ ತಾಲೂಕು ಕಚೇರಿ ಹತ್ತಿರ ಹೋಗಿ ಕೆಲವು ರೈತರ ಆರ್‌ಟಿಸಿ ಮತ್ತು ಮ್ಯುಟೇಷನ್‌ಗಳನ್ನು ಪಡೆದು ಅದರಲ್ಲಿ ಹೆಸರಿಗೆ ತಕ್ಕಂತೆ ಕೆಲವು ವ್ಯಕ್ತಿಗಳ ಭಾವಚಿತ್ರಗಳನ್ನು ಬಳಸಿ ನಕಲಿ ಆಧಾರ್‌ ಕಾರ್ಡ್‌ ತಯಾರು ಮಾಡಿ ಜೈಲಿನಲ್ಲಿರುವ ಆರೋಪಿಗಳ ಪರವಾಗಿ ನ್ಯಾಯಾಲಯಕ್ಕೆ ವಕೀಲರ ಮೂಲಕ ಜಾಮೀನಿಗಾಗಿ ಹಾಜರುಪಡಿಸುತ್ತಿರುವುದು ತಿಳಿದು ಬಂತು. ಇವರು ನೀಡಿರುವ ಮಾಹಿತಿಯಂತೆ ಇತರ 7 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next