Advertisement
ಸರಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿಯುತ್ತಿದ್ದರೆ, ಬ್ರಹ್ಮಾವರದ ಸರಕಾರಿ ಪ.ಪೂ. ಕಾಲೇಜಿನ ಪ್ರೌಢಶಾಲೆ ಹಾಗೂ ಒಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಸಾವಿರದ ಗಡಿ ದಾಟಿದೆ. ಇಲ್ಲಿ ಗುಣಮಟ್ಟದ ಶಿಕ್ಷಣ, ಜತೆಗೆ ಆಂಗ್ಲ ಮಾಧ್ಯಮದ ಕಲಿಕೆಯೂ ಇರುವುದರಿಂದ ಪೋಷಕರು ಮಕ್ಕಳನ್ನು ಈ ಶಾಲೆಗೆ ಸೇರಿಸಲು ಮುಗಿಬೀಳುತ್ತಿದ್ದಾರೆ.
Related Articles
Advertisement
ಈ ಸರಕಾರಿ ಶಾಲೆಗೆ ಸೇರ್ಪಡೆ ಯಾಗಲು ನಿರ್ದಿಷ್ಟ ಇಷ್ಟೇ ಅಂಕ ಪಡೆಯಬೇಕಾಗಿಲ್ಲ. ಎಷ್ಟೇ ವಿದ್ಯಾರ್ಥಿಗಳು ಬಂದರೂ ಯಾವುದೇ ಭೇದಭಾವ ಮಾಡದೇ ಮಕ್ಕಳನ್ನು ಶಾಲೆಗೆ ದಾಖಲಾತಿ ಮಾಡಿಸಿ ಕೊಳ್ಳುತ್ತಾರೆ. ಹಾಗಂತ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಫಲಿತಾಂಶದಲ್ಲಿ ರಾಜಿ ಮಾಡಿ ಕೊಂಡಿಲ್ಲ. ಪ್ರತಿವರ್ಷ ಶೇ.92ಕ್ಕಿಂತ ಹೆಚ್ಚಿನ ಫಲಿತಾಂಶ ಪಡೆದುಕೊಂಡಿದೆ.
ಖಾಸಗಿ ಶಾಲೆಗೆ ಪೈಪೋಟಿ
ಬ್ರಹ್ಮಾವರದ ಶಾಲೆಯಲ್ಲಿ 900 ವಿದ್ಯಾರ್ಥಿಗಳು ಹಾಗೂ ಉಡುಪಿ ಒಳಕಾಡು ಸಂಯುಕ್ತ ಪ್ರೌಢಶಾಲೆಯಲ್ಲಿ ಒಟ್ಟು 1,300 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಎರಡೂ ಕಡೆ 260 ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ. 8ರಿಂದ 10ನೇ ತರಗತಿಯವರೆಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಸೇರಿ 4ರಿಂದ 5 ವಿಭಾಗಗಳಿವೆ. ವಿಶೇಷ ತರಗತಿಗಳು, ನ್ಪೋಕನ್ ಇಂಗ್ಲೀಷ್ ತರಗತಿಯೂ ಇದೆ.
ಹಲವು ಸೌಲಭ್ಯ
ಕಂಪ್ಯೂಟರ್ ಕೊಠಡಿ, ತಂತ್ರಜ್ಞಾನ ಹಾಗೂ ವಿಜ್ಞಾನಕ್ಕೆ ಒತ್ತು ನೀಡುವ ಸುಸಜ್ಜಿತ ಅಟಲ್ ಟಿಂಟರಿಂಗ್ ಕೇಂದ್ರ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಲಿಕೆ ಒತ್ತು ನೀಡುವ ಉದ್ದೇಶದಿಂದ ಶಾಲೆಯಲ್ಲಿ ಸ್ಮಾಟ್ಕ್ಲಾಸ್, ಶೈಕ್ಷಣಿಕ ಸಿ.ಡಿ.ಗಳ ವೀಕ್ಷಣೆಗೆ ಮಲ್ಟಿಮೀಡಿಯಾ ಕೊಠಡಿ, ಪ್ರಯೋಗಾಲಯ, ಗ್ರಂಥಾಲಯ ಲಭ್ಯವಿದೆ. ಶಾಲಾಭಿವೃದ್ಧಿಗೆ ದಾನಿಗಳು, ಹಳೆ ವಿದ್ಯಾರ್ಥಿಗಳು ವಿಶೇಷ ಸಹಕಾರ ನೀಡುತ್ತಿದ್ದಾರೆ.
ಸಾಧನೆ ಕಿರೀಟ
ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಎರಡು ಶಾಲೆಗಳು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದೆ. ಶಾಲೆಯಲ್ಲಿ ಕ್ರೀಡೆಗೆ ಅಗತ್ಯವಿರುವ ಸಂಪೂರ್ಣ ತರಬೇತಿಯನ್ನು ಶಾಲೆಯ ದೈಹಿಕ ಶಿಕ್ಷಕರು ನೀಡುತ್ತಾರೆ. ಸರಕಾರದ ವಿದ್ಯಾರ್ಥಿ ವೇತನ ಪಡೆಯಲು ಸರಕಾರ ಆಯೋಜಿಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಶಾಲೆಗಳಲ್ಲಿ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಸಹ ವಿತರಿಸಲಾಗುತ್ತಿದೆ.