Advertisement
ರಾಜ್ಯ ವಿಧಾನಸಭಾ ಚುನಾವಣೆ ಅಧಿಸೂಚನೆ ಹೊರಬಿದ್ದ ನಂತರ ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆಗಳನ್ನು ಪೂರೈಸಿ, ಮೌಲ್ಯಮಾಪನ ಕಾರ್ಯ ಪೂರ್ಣಗೊಳಿಸಿದ ಶಿಕ್ಷಕರು ನೇರವಾಗಿ ಚುನಾವಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ದೈಹಿಕವಾಗಿ ಬಳಲಿದ್ದಾರೆ. ಚುನಾವಣೆ ಮುಗಿದು ತುಸು ವಿಶ್ರಾಂತಿ ಪಡೆದುಕೊಳ್ಳಬೇಕು ಎನ್ನುಷ್ಟರಲ್ಲಿ ಸರ್ಕಾರಿ ಶಾಲೆಗಳ ದಾಖಲಾತಿ ಪ್ರಕ್ರಿಯೆ ಆರಂಭವಾಗಿದೆ. ರಾಜ್ಯದಲ್ಲಿರುವ 44,615 ಸರ್ಕಾರಿ ಶಾಲೆ, 5,240 ಸರ್ಕಾರಿ ಪ್ರೌಢಶಾಲೆ ಹಾಗೂ 1,229ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಲು ದೊಡ್ಡ ಮಟ್ಟದಲ್ಲಿ ಅಭಿಯಾನ ನಡೆಯುತ್ತಿದೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರಿ, ಕಾಲೇಜಿನ ಪ್ರಾಂಶುಪಾಲರು, ಮುಖ್ಯಶಿಕ್ಷಕರು, ಉಪನ್ಯಾಸಕರು ಮತ್ತು
ಸಹ ಶಿಕ್ಷಕರ ಹೆಗಲಿಗೆ ವಹಿಸಲಾಗಿದೆ.
Related Articles
Advertisement
ದಾಖಲಾತಿ ಒಂದೆಡೆಯಾದರೆ, ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿಯೂ ಶಿಕ್ಷಕರೇ ಶ್ರಮಿಸಬೇಕು. ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭಕ್ಕೂ ಮೊದಲೇ ವಿದ್ಯಾರ್ಥಿಗಳಿಗೆ ಸಮವಸOಉ, ಪಠ್ಯಪುಸ್ತಕ, ಶೂ, ಸಾಕ್ಸ್ ಜತೆಗೆ ಸೈಕಲ್ ವಿತರಿಸಬೇಕು. ಬಿಇಒ ಕಚೇರಿಗೆ ಹೋಗಿ ಸಮವಸOಉ ಸಹಿತವಾಗಿ ಎಲ್ಲ ವಸ್ತುಗಳನ್ನು ಶಾಲೆಗೆ ತೆಗೆದುಕೊಂಡು ಬಂದು ಮಕ್ಕಳಿಗೆ ಹಂಚಬೇಕು. ನಂತರ ಲೆಕ್ಕವನ್ನು ಇಲಾಖೆಯ ಮೇಲಧಿಕಾರಿಗಳಿಗೆ ಕಳುಹಿಸಲೇ ಬೇಕು.
ವಿದ್ಯಾರ್ಥಿಗಳ ಹಾಜರಾತಿಯನ್ನು ಆನ್‌ಲೈನ್ ಎಂಟ್ರಿಗೆ ಬೇಕಾದ ತಯಾರಿಯನ್ನು ಶಿಕ್ಷಕರೇ ಮಾಡಿಕೊಳ್ಳಬೇಕು. ಮಕ್ಕಳ ಟ್ರ್ಯಾಕ್ ರೆಕಾರ್ಡ್ ಅನ್ನು ಆನ್‌ಲೈನ್ ಮೂಲಕ ಸಿದಟಛಿಪಡಿಸುವುದು ಸೇರಿ ಹತ್ತಾರು ಕಾರ್ಯಗಳು ನಿತ್ಯವೂ ಮಾಡಬೇಕಾಗಿದೆ. ಇದೆಲ್ಲದರ ಜತೆಗೆ ಗುಣಮಟ್ಟದ ಶಿಕ್ಷಣಕ್ಕೂ ಆದ್ಯತೆ ನೀಡಬೇಕು. ಹೀಗಾಗಿ, ಶಿಕ್ಷಕರ ಮೇಲೆ ಹೆಚ್ಚು ಒತ್ತಡ ಬೀಳುತ್ತಿದೆ.
ವರ್ಗಾವಣೆ ಸದ್ಯಕ್ಕಿಲ್ಲ2017-18ನೇ ಸಾಲಿನ ಶಿಕ್ಷಕರ ವರ್ಗಾವಣೆ ಅಧಿಸೂಚನೆ ಹೊರಡಿಸಿ, ವರ್ಗಾವಣೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಚುನಾವಣೆ ಎದುರಾಗಿದ್ದರಿಂದ ಎರಡೆರಡು ಬಾರಿ ವರ್ಗಾವಣೆ ಮುಂದೂಡಲಾಗಿದೆ. ಚುನಾವಣೆ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿದಿದೆ. ವಾರದೊಳಗೆ ಹೊಸ ಸರ್ಕಾರದ ರಚನೆಯೂ ಆಗಲಿದೆ. ಆದರೆ, ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದ ಯಾವ ಆದೇಶವೂ ಹೊರಬಂದಿಲ್ಲ. ಮೇ 28ರಂದು ಸರ್ಕಾರಿ ಪ್ರಾಥಮಿಕ,ಪ್ರೌಢಶಾಲೆಗಳು ಆರಂಭವಾಗಲಿದೆ. ಇದಕ್ಕೆ ಬೇಕಾದ ಎಲ್ಲ ಸಿದಟಛಿತೆಯನ್ನು ಆಯಾ ಶಾಲೆಗಳಲ್ಲಿ ಮುಖ್ಯಶಿಕ್ಷಕರು ಸಹಿತವಾಗಿ ಸಹ ಶಿಕ್ಷಕರು ಮಾಡಿಕೊಳ್ಳುತ್ತಿದ್ದಾರೆ.ದಾಖಲಾತಿ ಮತ್ತು ಶೈಕ್ಷಣಿಕ ಕಾರ್ಯಗಳನ್ನು ಶಿಕ್ಷಕರು ಮಾಡಲೇ ಬೇಕು.
– ಬಿ.ಕೆ.ಬಸವರಾಜ,
ನಿರ್ದೇಶಕ, ಪ್ರಾಥಮಿಕ ಶಿಕ್ಷಣ – ರಾಜು ಖಾರ್ವಿ ಕೊಡೇರಿ