ಕೆ.ಆರ್.ಪೇಟೆ: ಗ್ರಾಮಾಂತರ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳು ಹತ್ತು ಹಲವು ಇಲ್ಲಗಳ ನಡುವೆ ನಡೆಯುವಂತಹವು. ಅಂತಹ ಶಾಲೆಗಳಿಗೆ ಅಗತ್ಯವಾದ ಮೂಲ ಸೌಲಭ್ಯಗಳನ್ನುಕಲ್ಪಿಸುವ ಮೂಲಕ ಉತ್ತಮ ಶಾಲೆಯನ್ನಾಗಿ ಪರಿವರ್ತಿಸುವ ಪ್ರಯತ್ನ ಸಮುದಾಯದ ಪ್ರಯತ್ನವಿದ್ದರೆ ಮಾತ್ರ ಸಾಧ್ಯ.
ಇಂತಹ ಪ್ರಯತ್ನ ಸಂತೇಬಾಚಹಳ್ಳಿ ಹೋಬಳಿಯ ಭಾರತೀಪುರ ಕ್ಲಸ್ಟರ್ ವ್ಯಾಪ್ತಿಯ ಮಂಡ್ಯ-ಹಾಸನ ಜಿಲ್ಲೆಯ ಗಡಿ ಭಾಗದ ಗ್ರಾಮವಾದ ಮಾರೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಶಾಲೆಯು ಸುಣ್ಣ-ಬಣ್ಣಗಳಿಂದಕಂಗೊಳಿಸುತ್ತಿದೆ. ಸರ್ಕಾರಿ ಶಾಲೆಗಳನ್ನೂ ಖಾಸಗಿ ಶಾಲೆಗಳಂತೆಯೇ ಬೆರಗುಗಣ್ಣುಗಳಿಂದ ನೋಡುವಂತೆ ಮಾಡಲಾಗಿದೆ. ಶಾಲಾಭಿವೃದ್ಧಿ ಉನ್ನತೀಕರಣ ಸಮಿತಿ, ಹಳೆ ವಿದ್ಯಾರ್ಥಿಗಳು, ದಾನಿಗಳು ಸೇರಿದಂತೆ ಹಲವರ ಪ್ರಯತ್ನದಿಂದ ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡುವ ಉದ್ದೇಶದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮತ್ತು ಶಿಕ್ಷಣ ಇಲಾಖೆಯ ಆಶಯಗಳನ್ನು ಈಡೇರಿಸಲು
ಪ್ರಯತ್ನಿಸಲಾಗಿದೆ.
ಶಾಲೆಯ ಚಿತ್ರಣವೇ ಬದಲು: ಪೋಷಕರು ಖಾಸಗಿ ಶಾಲೆಗಳ ಮೊರೆ ಹೋಗುತ್ತಿರುವುದರಿಂದ ಸರ್ಕಾರಿ ಶಾಲೆಗಳು ಅದೇ ರೀತಿ ಗುಣಮಟ್ಟ ಗೊಂಡಾಗ ಇತ್ತ ಮುಖಮಾಡುತ್ತಾರೆ.ಕೋವಿಡ್ ಸಂಕಷ್ಟದ ಸಮಯದಲ್ಲಿ ಸರ್ಕಾರಿ ಶಾಲೆಗಳೇ ಪೋಷಕರಿಗೆ ದಾರಿದೀಪವಾಗಿದೆ. ಇದಕ್ಕೆಲ್ಲ ಕಾರಣ ತಮ್ಮೂರಿನ ಮಕ್ಕಳು ಓದುವ ಶಾಲೆ ಯಾವ ಖಾಸಗಿ ಶಾಲೆಗೂ ಕಡಿಮೆ ಇರಬಾರದೆಂದು ಹಳೆಯ ವಿದ್ಯಾರ್ಥಿಗಳು, ದಾನಿಗಳು, ಶಾಲಾಭಿವೃದ್ಧಿ ಸಮಿತಿಯವರ ಪರಿಶ್ರಮದ ಫಲವಾಗಿ ಶಾಲೆಯ ಚಿತ್ರಣವೇ ಬದಲಾಗಿದೆ. ಮಕ್ಕಳು ಓದುವ ಪರಿಸರ,ಕಲಿಯುವ ನಾಲ್ಕು ಗೋಡೆಯಕೊಠಡಿ ಅತ್ಯಾಕರ್ಷಕವಾಗಿರ ಬೇಕೆಂಬುದು ಶಿಕ್ಷಣ ಆಯೋಗಗಳ ಸಲಹೆಯೂ ಕೂಡ. ಆದರೆ ಸರ್ಕಾರ ನೀಡುವ ಅನುದಾನ ಒಂದಕ್ಕಾದರೆ ಮತ್ತೊಂದಕ್ಕೆ ಸಾಲುವುದಿಲ್ಲ.
ಇದನ್ನೂ ಓದಿ:ಕಾಬೂಲ್ ಬ್ಯಾಂಕ್ ಹೊರಗೆ ನೂರಾರು ಮಂದಿ ಪ್ರತಿಭಟನೆ: ಎಟಿಎಂಗಳಲ್ಲಿ ಹಣವಿಲ್ಲದೇ ಪರದಾಟ
ವಿಷಯ ವೈವಿಧ್ಯ ಸಾಮಾನ್ಯ ಜ್ಞಾನ
ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯಿಂದ ದೊರೆತ ಅನುದಾನದ ಜೊತೆಗೆ ದಾನಿಗಳು, ಹಳೆ ವಿದ್ಯಾರ್ಥಿಗಳು, ಶಾಲಾ ಸಮಿತಿ ಸಹಕಾರದಿಂದ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಗ್ರಾಮದ ಶಾಲೆಗಳಿಗೆ ಭೌತಿಕ ಸೌಕರ್ಯಗಳನ್ನುಕಲ್ಪಿಸಿ ಗೋಡೆಗಳಿಗೆ ಬಣ್ಣ ಮಾಡಿಸಿರುವುದು ಮಾತ್ರವಲ್ಲದೆ, ಗೋಡೆ,ಕಾಂಪೌಂಡ್ ಮೇಲೆ ಹಲವು ವಿಷಯ ವೈವಿದ್ಯ, ಸಾಮಾನ್ಯ ಜಾnನ ಸೂಚಿಸುವ ಚಿತ್ರಗಳನ್ನು ಬಿಡಿಸಿ ವಿದ್ಯಾರ್ಥಿಗಳಲ್ಲಿ ಆಸಕ್ತಿ ಕುತೂಹಲ ಮೂಡುವಂತೆ ಮಾಡಿರುವುದು ವಿಶಿಷ್ಟ.
ಹೃದಯ ವೈಶಾಲ್ಯತೆಯನ್ನು ಬೆಳೆಸುವಂತಹ ಶಿಕ್ಷಣ ದೊರೆಯಬೇಕೆಂಬುದು ನಮ್ಮ ಆಲೋಚನೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು, ಇಲಾಖೆಯ ಮಾರ್ಗದರ್ಶನದಲ್ಲಿ ಹಳೆ ವಿದ್ಯಾರ್ಥಿಗಳು ಮತ್ತು ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಕರ ಸಹಕಾರದಿಂದ ಶಾಲೆಯ ಅಂದ ಹೆಚ್ಚಿಸುವಕೆಲಸ ಮಾಡಿದ್ದೇವೆ. ಮುಂದಿನ ಶೈಕ್ಷಣಿಕ ವರ್ಷದ ದಾಖಲಾತಿಗೆ ಸಹಕಾರಿಯಾಗಿ ಗ್ರಾಮದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವಂತಾಗಲಿ.
– ಮಾರೇನಹಳ್ಳಿ ಲೋಕೇಶ್, ಹಳೆಯ ವಿದ್ಯಾರ್ಥಿ
ಸರ್ಕಾರಿ ಶಾಲೆಯ ಹಳೆ ವಿದ್ಯಾರ್ಥಿಗಳು, ದಾನಿಗಳು, ಗ್ರಾಮಸ್ಥರು ನಮ್ಮ ಗ್ರಾಮ, ನಮ್ಮ ಶಾಲೆ, ನಮ್ಮ ಮಕ್ಕಳು ಎಂಬಾ ಮನೋಭಾವನೆ ಯಿಂದ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ, ಮಾರೇನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ರೀತಿಯಲ್ಲಿ ಮಾದರಿ ಶಾಲೆಯನ್ನಾಗಿ ಪರಿವರ್ತಿಸಲು ಶ್ರಮವಹಿಸಿದರೆ ತಾಲೂಕಿನ ಸರ್ಕಾರಿ ಶಾಲೆಗಳು ಶಿಕ್ಷಣ ಕ್ರಾಂತಿ ಮಾಡಲು ಸಾಧ್ಯ. ಶಾಲಾಭಿವೃದ್ಧಿಗೆ ಶಿಕ್ಷಣಾಸಕ್ತರು ಕೈಜೋಡಿಸಬೇಕು.
-ಬಸವರಾಜು, ಕ್ಷೇತ್ರ ಶಿಕ್ಷಣಾಧಿಕಾರಿಗಳು,ಕೆ.ಆರ್.ಪೇಟೆ
-ಅರುಣ್ ಕುಮಾರ್