Advertisement

ನೂರರ ಸಂಭ್ರಮದಲ್ಲಿ ಸರ್ಕಾರಿ ಶಾಲೆ

11:24 AM Nov 28, 2018 | |

ರಿಷಭ್‌ ಶೆಟ್ಟಿ ನಿರ್ಮಿಸಿ, ನಿರ್ದೇಶಿಸಿರುವ “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು-ಕೊಡುಗೆ ರಾಮಣ್ಣ ರೈ’ ಚಿತ್ರಕ್ಕೆ ಈಗ ಶತಕ ಸಂಭ್ರಮ. ಚಿತ್ರ ಈ ವಾರ ನೂರು ದಿನ ಪೂರೈಸುವ ಮೂಲಕ ಚಿತ್ರತಂಡ ಖುಷಿಗೆ ಕಾರಣವಾಗಿದೆ. ಸುಮಾರು 40 ರಿಂದ 50 ಕೇಂದ್ರಗಳಲ್ಲಿ ಚಿತ್ರ ಶತದಿನ ಪೂರೈಸುತ್ತಿದೆ. ನಿರ್ದೇಶಕರ ರಿಷಭ್‌, ಕಾಸರಗೋಡನ್ನು ಹಿನ್ನೆಲೆಯಾಗಿಟ್ಟಯಕೊಂಡು ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಈ ಚಿತ್ರದಲ್ಲಿ ಹೇಳಿದ್ದರು.

Advertisement

ಹಾಸ್ಯದ ಹಿನ್ನೆಲೆಯಲ್ಲಿ ಸಾಗುವ ಚಿತ್ರದಲ್ಲಿ ಕನ್ನಡ, ಸರ್ಕಾರಿ ಶಾಲೆಯ ಸಮಸ್ಯೆಗಳನ್ನು ಮನಮುಟ್ಟುವಂತೆ ರಿಷಭ್‌ ಕಟ್ಟಿಕೊಟ್ಟಿದ್ದರು. ಚಿತ್ರದಲ್ಲಿ ಅನಂತ್‌ನಾಗ್‌ ಪ್ರಮುಖ ಪಾತ್ರ ಮಾಡಿದ್ದು, ಚಿತ್ರದ ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದ್ದವು. ಹೀಗೆ ನಾನಾ ಕಾರಣಗಳಿಂದ ಈ ಚಿತ್ರ ಮೆಚ್ಚುಗೆ ಗಳಿಸುವ ಜೊತೆಗೆ ಕಲೆಕ್ಷನ್‌ನಲ್ಲೂ ಸದ್ದು ಮಾಡಿತ್ತು. ಈಗ ಚಿತ್ರ ಶತದಿನ ಆಚರಿಸಿಕೊಳ್ಳುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next