ಬಂಟ್ವಾಳ: ನಕ್ಸಲ್‌ಪೀಡಿತ ಛತ್ತೀಸ್‌ಗಢ, ಒಡಿಶಾಮೊದಲಾದ ರಾಜ್ಯಗಳಲ್ಲಿ ಶಿಕ್ಷಣ ಕ್ರಾಂತಿ ಹಾಗೂ ಕಾಶ್ಮೀರದಲ್ಲಿ ಒಂದು ಸರಕಾರಿ ಶಾಲೆಯನ್ನು ದತ್ತು ಸ್ವೀಕರಿಸಿ ಅಭಿವೃದ್ಧಿ ಪಡಿಸಲು ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಹಾಗೂ ಶ್ರೀದುರ್ಗಾ ಚಾರಿಟೆಬಲ್ ಟ್ರಸ್ಟ್ ತೀರ್ಮಾನಿಸಿದೆ.
ಸಮಿತಿಯ ರಾಜ್ಯಾಧ್ಯಕ್ಷ ಪ್ರಕಾಶ್ ಅಂಚನ್ ಅಧ್ಯಕ್ಷತೆಯಲ್ಲಿ ನಡೆದ ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಹಾಗೂ ಶ್ರೀದುರ್ಗಾ ಚಾರಿಟೆಬಲ್ ಟ್ರಸ್ಟ್‌ನ ಜಂಟಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸಮಿತಿಯು ಇತ್ತೀಚೆಗೆ ದಿಲ್ಲಿ ಚಲೋ ಕಾರ್ಯಕ್ರಮ ನಡೆಸಿದ್ದು, ಬಳಿಕ ನಕ್ಸಲ್ ಪೀಡಿತ ಪ್ರದೇಶಗಳ ಶಿಕ್ಷಣಾಸಕ್ತರು ತಮ್ಮ ರಾಜ್ಯದಲ್ಲಿ ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶಿಕ್ಷಣ ಕ್ರಾಂತಿಯನ್ನು ನಡೆಸುವ ಆಸಕ್ತಿ ತಳೆದಿರುವ ಕುರಿತು ಸಮಿತಿಯಲ್ಲಿ ಮನವಿ ಮಾಡಿದ್ದರು. ಹೀಗಾಗಿ ಈ ತೀರ್ಮಾನದ ಜತೆಗೆ ಕಾಶ್ಮೀರದಲ್ಲಿಯೂ ಸರಕಾರಿ ಶಾಲೆಯ ಅಭಿವೃದ್ಧಿಗೆ ಸಮಿತಿ ಆಸಕ್ತಿ ತೋರಿದೆ.
ರಾಜ್ಯ ಸಮಿತಿ ಉಪಾಧ್ಯಕ್ಷ ಮಯೂರ ಕೀರ್ತಿ, ಪ್ರಮುಖರಾದ ಸಂದೀಪ್ ಸಾಲ್ಯಾನ್, ರಾಮಚಂದ್ರ ಪೂಜಾರಿ ಕರೆಂಕಿ, ನವೀನ್ ಎಸ್, ಬಾಲಕೃಷ್ಣ ಜಿ, ಉದಯ ಕರೆಂಕಿ, ಪ್ರವೀಣ್‌ಎಸ್., ಆನಂದ ಕೋಟ್ಯಾನ್ ಕೇಲೊಡಿ,
ಮಹೇಶ್ ಡೆಚ್ಚಾರು, ಚಿದಾನಂದ ಚೆಂಡ್ತಿಮಾರ್, ಸುಂದರ ಜಿ.ಕರೆಂಕಿ, ದಿಲೀಪ್ ಡೆಚ್ಚಾರು, ಪೂವಪ್ಪ ಮೆಂಡನ್ ಸಭೆಯಲ್ಲಿದ್ದರು.